ಹಾಲಕೆರೆ ಶ್ರೀ ಅನ್ನದಾನೇಶ್ವರ ರಥೋತ್ಸವ

ನರೇಗಲ್ಲ,ಜ16: ಸಮೀಪದ ಹಾಲಕೆರೆಯಲ್ಲಿ ಶ್ರೀ ಅನ್ನದಾನೇಶ್ವರರ 173ನೆ ರಥೋತ್ಸವವು ಅತ್ಯಂತ ಸಡಗರ, ಸಂಭ್ರಮಗಳಿಂದ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಜರುಗಿತು.

ಹರಹರ ಮಹಾದೇವ, ಶ್ರೀ ಅನ್ನದಾನೇಶ್ವರ ಮಹಾರಾಜಕೀ ಜೈ ಎಂಬಿತ್ಯಾದಿ ಘೋಷಣೆಗಳು ಮುಗಿಲು ಮುಟ್ಟಿದ್ದವು.
ಕರಡಿ ಮಜಲು, ಜಾಂಜ್ ಮೇಳ, ಕೋಲಾಟ ಮುಂತಾದವುಗಳು ಜಾತ್ರೆಯ ಸಡಗರವನ್ನು ಹೆಚ್ಚಿಸಿದ್ದವು.
ಸಂಜೆಯಾಗುತ್ತಿದ್ದಂತೆ ಶ್ರೀಮಠದ ಪೀಠಾಧಿಪತಿ ಶ್ರೀ ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳು ಮತ್ತು ಹರಗುರು ಚರ ಮೂರ್ತಿಗಳು, ಗಣ್ಯರು ತೇರಿನ ಕಡೆಗೆ ಸಾಗಿದರು. ರಥದ ಗಾಲಿಗಳಿಗೆ ಪೂಜೆ ನೆರವೇರಿಸಿದ ನಂತರ ಸೇರಿದ್ದ ಸಹಸ್ರಾರು ಜನರು ತೇರನ್ನು ಎಳೆಯಲು ಪ್ರಾರಂಭಿಸಿದರು.