ಚಿತ್ರರಂಗದಲ್ಲಿ ಏನಾದರೂ ಸಾಧನೆ ಮಾಡಬೇಕು ಎನ್ನುವ ಕನಸು ಮತ್ತು ಹಂಬಲದೊಂದಿಗೆ “ಟ್ಯೂನ್ 123 ಆಡಿಯೋ” ಸಂಸ್ಥೆ ಆರಂಭಿಸಿದ್ದಾರೆ ಮಂಜುನಾಥ್ ಹೂಡೆಲ್ ನಿಂತಿದ್ದಾರೆ.
ಮೂಲತಃ ಉತ್ತರ ಕರ್ನಾಟಕದವಾರಾದ ಮಂಜುನಾಥ್ ಆ ಭಾಗದ ಕಲಾವಿದರಿಗೆ ವೇದಿಕೆ ಒದಗಿಸುವ ಉದ್ದೇಶ ಕೂಡ ಹೊಂದಿದ್ದಾರೆ.
ತಮ್ಮ ಹೊಸ ಆಡಿಯೋ ಕಂಪನಿಯ ಮೂಲಕ ಮಂಜುನಾಥ್ ಹೂಡೆಲ್ ಅವರೇ ಸಾಹಿತ್ಯ ರಚಿಸಿರುವ “ ಹಾರೋ ಬಣ್ಣದ ಚಿಟ್ಟೆ” ಪ್ಯಾಥೋ ಹಾಡು ಆಡಿಯೋ ಕಂಪನಿಯಲ್ಲಿ ಬಿಡುಗಡೆಯಾಗಿದೆ. ಈ ಮೂಲಕ ಚಿತ್ರರಂಗದಲ್ಲಿ ಹೊಸ ಹೊಸ ಕನಸು ಕಟ್ಟಿಕೊಂಡು ಸಾಧನೆ ಮಾಡುವ ಹಂಬಲ ಮತ್ತು ಕನಸು ಹೊಂದಿದ್ಧಾರೆ.
ಟ್ಯೂನ್ 123 ಆಡಿಯೋ ಕಂಪನಿ ಅನಾವರಣ ಮತ್ತು ಹಾಡು ಬಿಡುಗಡೆ ಬಳಿಕ ಮಾತಿಗಿಳಿದ ಮಾಲೀಕರೂ ಆಗಿರುವ ಗೀತ ರಚನೆಕಾರ ಮಂಜುನಾಥ್ ಹೂಡಲ್ , ಜನರಿಗೆ ಫ್ಯಾಥೋ ಹಾಡು ಬೇಗ ತಲುಪುತ್ತದೆ ಎನ್ನುವ ಕಾರಣಕ್ಕೆ ಇದೇ ಹಾಡನ್ನು ಮೊದಲ ಹಾಡಾಗಿ ಆಯ್ಕೆ ಮಾಡಿಕೊಂಡಿದ್ದೇವೆ.U Àುಲ್ಬರ್ಗಾ ಬಳಿಕ ಹಳ್ಳಿಯಿಂದ ಬೆಂಗಳೂರಿಗೆ ಬಂದು ಬದುಕುಕಟ್ಟಿಕೊಂಡಿದ್ದೇನೆ. ಒಂದಷ್ಟು ದಿನ ಐಟಿ ಕಂಪನಿಯಲ್ಲಿ ಕೆಲಸ ಮಾಡಿ ಹಣ ಸಂಪಾದಿಸಿದೆ. ನಿರ್ದೇಶನ ಮಾಡುವ ಆಸೆ ಇದೆ. ಅದಕ್ಕೆ ಮೊದಲು ಚಿತ್ರರಂಗದಲ್ಲಿ ತಮ್ಮನ್ನು ತಾವು ಗುರುತಿಸಿಕೊಳ್ಳುವ ಉದ್ದೇಶದಿಂದ ಆಡಿಯೋ ಕಂಪನಿ ಆರಂಭಿಸಿದ್ದೇವೆ.ವಿಜಯ್ ಪ್ರಸಾದ್ ಹಾಡಿರುವ ಹಾಡು ಸೇರಿದಂತೆ ಹಲವು ಹಾಡುಗಳಿವೆ ಎಂದರು
ಅಪ್ಪು ಸಾರ್ ಅಗಲಿದಾಗ ಅವರ ಕುರಿತು ಹಾಡು ಬರೆದಿದ್ದೆ. ಆ ಹಾಡನ್ನು ನಮ್ಮದೇ ಆಡಿಯೋ ಕಂಪನಿಯಲ್ಲಿ ಬಿಡುಗಡೆ ಮಾಡಲಾಗಿದೆ. ಜೊತೆಗೆ ಉತ್ತರ ಕರ್ನಾಟಕ ಪ್ರತಿಭೆಗಳನ್ನು ಬೆಳಕಿಗೆ ತರುವ ಜೊತೆಗೆ ಹೊಸ ಹೊಸ ಗುರಿಗಳಿವೆ ಎಂದರು. ಸಂಗೀತ ನಿರ್ದೇಶಕ ಗೀತಾಸನ್, ಗಾಯಕ ಅರ್ಫಾಜ್ ಉಲ್ಲಾಳ ಸೇರಿದಂತೆ ಅನೇಕರು ಹೊಸ ಪ್ರಯತ್ನದ ಬಗ್ಗೆ ಮಾಹಿತಿ ಹಂಚಿಕೊಂಡರು.