ಹಾರರ್ ಥ್ರಿಲ್ಲರ್ ಆಕಾಶವಾಣಿ

ಇತ್ತೀಚೆಗೆ ನಿರ್ಮಾಣವಾಗಿ ತೆರೆಗೆ ಬರುತ್ತಿರುವ ಚಲನಚಿತ್ರಗಳ ಶೀರ್ಷಿಕೆಗಳೇ ವಿಭಿನ್ನವಾಗಿದ್ದು ಪ್ರೇಕ್ಷಕರನ್ನು ಚಿತ್ರಮಂದಿರದತ್ತ ಸೆಳೆಯುತ್ತಿವೆ.

ಅದರ ಸಾಲಿಗೆ ಮತ್ತೊಂದು ಸೇರ್ಪಡೆ “ಇದು ಆಕಾಶವಾಣಿ ಬೆಂಗಳೂರು ನಿಲಯ”

ಶಿವಾನಂದಪ್ಪ ಬಳ್ಳಾರಿ  ಹಾಗೂ ಸಂಗಡಿಗರು ಸೇರಿ ನಿರ್ಮಿಸುತ್ತಿರುವ ಚಿತ್ರಕ್ಕೆ ಬೆಂಗಳೂರು, ತಿಪಟೂರು ಹಾಗೂ ನೊಣವಿನಕೆರೆ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ ಚಿತ್ರದ ಚಿತ್ರದ ಡಬ್ಬಿಂಗ್ ಕಾರ್ಯ ಕೂಡ  ಮುಕ್ತಾಯಗೊಂಡಿದೆ. 

ನಾವೇ ಭಾಗ್ಯವಂತರು ಚಿತ್ರ ನಿರ್ದೇಶಿಸಿದ್ದ ಎಂ. ಹರಿಕೃಷ್ಣ  ನಿರ್ದೇಶನದ ಎರಡನೇ ಚಿತ್ರ ಇದು.ವಿಭಿನ್ನ ಹಾರರ್, ಥ್ರಿಲ್ಲರ್ ಕಥಾಹಂದರ ಹೊಂದಿರುವ  ಚಿತ್ರಕ್ಕೆ ಸುಮ್‌ಸುಮ್ನೆ ವಿಜಯಕುಮಾರ್ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ  ಬರೆದಿದ್ದು, ಎ.ಟಿ. ರವೀಶ್ ಸಂಗೀತ,ಪ್ರವೀಣ್ ಶೆಟ್ಟಿ ಛಾಯಾಗ್ರಹಣವಿದೆ.

ಚಿತ್ರದಲ್ಲಿ ನಿಖಿತಸ್ವಾಮಿ, ರನ್ ವೀರ್ ಪಾಟೀಲ್, ಸುಚೇಂದ್ರ ಪ್ರಸಾದ್, ಟೆನ್ನಿಸ್ ಕೃಷ್ಣ, ಎಸ್.ನಾರಾಯಣಸ್ವಾಮಿ, ದಿವ್ಯಶ್ರೀ ಮುಂತಾದವರ ತಾರಾಬಳಗವಿರುವ ಚಿತ್ರದ ಹಾಡುಗಳ ಬಿಡುಗಡೆ ಸದ್ಯದಲ್ಲೇ ನಡೆಯಲಿದೆ ಎಂದುನಿರ್ಮಾಪಕ ಶಿವಾನಂದಪ್ಪ ಬಳ್ಳಾರಿ ತಿಳಿಸಿದ್ದಾರೆ.