ಹಾರರ್ ,ಥ್ರಿಲ್ಲರ್ ಅನ

ಹಾರರ್ ,ಥ್ರಿಲ್ಲರ್ ಮತ್ತು ಮಾಟ-ಮಂತ್ರದ ಅಂಶಗಳನ್ನು ಒಳಗೊಂಡಿರುವ ಭಾರತದ ಮೊಟ್ಟ ಮೊದಲ ನಾಯಕಿ ಪ್ರಧಾನವಾದ ಸೂಪರ್ ಹೀರೋ‌ ಮಾದರಿಯ ಚಿತ್ರ “ಅನ”. ಚಿತ್ರೀಕರಣ ಪೂರ್ಣಗೊಳಿಸಿದ್ದು ಬಿಡುಗಡೆಗೆ ಸಜ್ಜಾಗಿದೆ.

ಭಾರತದಲ್ಲಿ ಇದುವರೆಗೂ ನಾಯಕ ಪ್ರಧಾನವಾದ ಸೂಪರ್ ಹೀರೋ ಮಾದರಿಯ ಚಿತ್ರಗಳು ತೆರೆಗೆ ಬಂದಿದೆ ಇದೇ ಮೊದಲ ಬಾರಿಗೆ ನಿರ್ದೇಶಕ ಮನೋಜ್ ನಡುಲುಮನೆ ನಾಯಕಿ ಪ್ರಧಾನವಾದ ಸೂಪರ್ ಹೀರೋ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.

ಸಂಪೂರ್ಣ ತಂತ್ರಜ್ಞರಿಂದಲೇ ತಯಾರಾಗಿರುವ ಆನ ಚಿತ್ರದ ಟೀಸರ್ ಗೆ ಎಲ್ಲೆಡೆ ಉತ್ತಮ ಪ್ರಶಂಸೆ ವ್ಯಕ್ತವಾಗಿದೆ. ವಿಭಿನ್ನ ಪ್ರಯೋಗದ ಚಿತ್ರಕ್ಕೆ ರಂಗದಿಂದ ಇನ್ನಷ್ಟು  ಪ್ರೋತ್ಸಾಹದ‌ ನಿರೀಕ್ಷೆಯಲ್ಲಿ ಚಿತ್ರತಂಡವಿದೆ.

ಇದುವರೆಗೂ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ನಾಯಕಿ ಅದಿತಿ ಪ್ರಭುದೇವ ಮೊದಲ ಬಾರಿಗೆ “ಆನ” ದಲ್ಲಿ  ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಜೀವನದಲ್ಲಿ ವಿಭಿನ್ನ ಚಿತ್ರವಾಗಲಿದೆ ಎನ್ನುವ ವಿಶ್ವಾಸ ಅವರದು

ಚಿತ್ರದ ಕುರಿತು ಮಾಹಿತಿ ಹಂಚಿಕೊಳ್ಳಲು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದ ನಿರ್ದೇಶಕ ಮನೋಜ್ ನಡಲುಮನೆ, ಬೆಂಗಳೂರು ಸುತ್ತಮುತ್ತ ಸರಿಸುಮಾರು 25 ರಿಂದ 30 ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ ಚಿತ್ರ ಬಿಡುಗಡೆಗೆ ಸಜ್ಜಾಗಿದೆ ಎಲ್ಲವೂ ಅಂದುಕೊಂಡಂತೆ ಆದರೆ ಎಪ್ರಿಲ್ ತಿಂಗಳಂತ್ಯಕ್ಕೆ ಇಲ್ಲವೆ ಮೇ ತಿಂಗಳ ಮಧ್ಯಭಾಗದಲ್ಲಿ ಚಿತ್ರವನ್ನು ತೆರೆಗೆ ತರುವ ಉದ್ದೇಶವಿದೆ ಎಂದರು.

ಆನ ವಿಭಿನ್ನವಾದ ಚಿತ್ರ ಹೀಗಾಗಿ ಚಿತ್ರರಂಗದ ಮಂದಿಯಿಂದ ಇನ್ನಷ್ಟು ಪ್ರೋತ್ಸಾಹ ಬೆಂಬಲದ ನಿರೀಕ್ಷೆಯಲ್ಲಿ ಚಿತ್ರತಂಡವಿದೆ. ಕನ್ನಡ ಚಿತ್ರರಂಗದಲ್ಲಿ ಈ ರೀತಿಯ ಪ್ರಯತ್ನವನ್ನು ಇದುವರೆಗೂ ಯಾರೂ ಮಾಡಿಲ್ಲ ಹೊಸ ಪ್ರಯತ್ನಕ್ಕೆ ಎಲ್ಲರ ಬೆಂಬಲ ಸಹಕಾರ ಬೇಕು ಎಂದು ನಿರ್ದೇಶಕರು ಹೇಳಿಕೊಂಡರು.

ಮೊದಲ ಸೂಪರ್ ಹೀರೋ ನಾಯಕಿ ಪ್ರಧಾನ ಚಿತ್ರವಾದರೂ ಚಿತ್ರದ ಹಿಂದೆ ಅನೇಕ ತಂತ್ರಜ್ಞರು ಕೆಲಸ ಮಾಡಿದ್ದಾರೆ .ಈ ಚಿತ್ರದ ಶ್ರೇಯ ಅವರಿಗೆ ಸಲ್ಲಬೇಕು ಸಂಪೂರ್ಣವಾಗಿ ತಂತ್ರಜ್ಞರಿಂದ ತಯಾರಾಗಿರುವ ಸಿನಿಮಾ ಎಂದು ಅವರು ಮಾಹಿತಿ ಹಂಚಿಕೊಂಡರು.

ನಾಯಕಿ ಅದಿತಿ ಪಭುದೇವ ಮಾತನಾಡಿ ಚಿತ್ರದಲ್ಲಿ ನನ್ನ ಪಾತ್ರ ಅನಘ್ಯ. ಅದುವೇ ಆನ. ಚಿತ್ರದಲ್ಲಿ ಎರಡು ರೀತಿಯ ಶೇಡ್ ಗಳು ನನ್ನ ಪಾತ್ರದಲ್ಲಿವೆ. ಸಂಪೂರ್ಣವಾದ ವಿಭಿನ್ನವಾದ ಚಿತ್ರ ಈ ರೀತಿಯ ಪಾತ್ರ ತಾವು ಮಾಡಿಲ್ಲ. ಒಂದು ಸೂಪರ್ ಹೀರೋ ಮತ್ತೊಂದು ಪಾತ್ರದಲ್ಲಿ ಸಾಮಾನ್ಯ ಮಹಿಳೆಯಾಗಿ‌ ಕಾಣಿಸಿಕೊಳ್ಳುತ್ತೇನೆ. ಚಿತ್ರದಲ್ಲಿ ಮಾತು ಕಡಿಮೆ ಮುಖಭಾವನೆಯಿಂದಲೇ ಭಾವಾಭಿನಯ ವ್ಯಕ್ತಪಡಿಸುವ    ಪಾತ್ರದಲ್ಲಿದೆ.ಚಿತ್ರಕ್ಕಾಗಿ ಫಿಸಿಕ್ ಸಿದ್ದ ಮಾಡಿಕೊಳ್ಳಬೇಕಾಗಿತ್ತು.ಮೊದಲಿನಿಂದಲೇ ಸಿದ್ದತೆ ಮಾಡಿಕೊಂಡಿದ್ದರಿಂದ ಸುಲಭವಾಯಿತು ಎಂದರು.

ಚಿತ್ರಕ್ಕೆ ಉದಯ್ ಲೀಲಾ ಕ್ಯಾಮರ,ವಿಜೇತ್ ಚಂದ್ರ ಸಂಕಲನ, ಬಿ.ಆರ್ ನವೀನ್ ಸೌಂಡ್ ಡಿಸೈನ್ ಚಿತ್ರಕ್ಕಿದೆ.