ಹಾರರ್ ಕಥೆಯ ಕೆಂಪುಸೀರೆ…

ತಾಯಿ ಮಗಳ ಸಂಬಂಧದ ಸುತ್ತ ನಡೆಯುವ ಹಾರರ್, ಥ್ರಿಲ್ಲರ್ ಕಥಾಹಂದರ ಹೊಂದಿರುವ ಚಿತ್ರ ಬಿಡುಗಡೆಗೆ ಸಿದ್ದವಾಗಿದೆ. ಅದುವೇ  “ಕೆಂಪುಸೀರೆ”.

ಚಿತ್ರಕ್ಕೆ  ಸುಮನ್ ಬಾಬು ಆಕ್ಷನ್ ಕಟ್ ಹೇಳಿದ್ದು ನಿರ್ಮಾಣ ಕೂಡ ಮಾಡಿದ್ದಾರೆ. ಕನ್ನಡದ ಜೊತೆಗೆ ತೆಲುಗು, ತಮಿಳು ಹಾಗೂ ಮಲಯಾಳಂ ಸೇರಿದಂತೆ 4 ಭಾಷೆಗಳಲ್ಲಿ ನಿರ್ಮಾಣವಾಗಿರುವ ಚಿತ್ರದಲ್ಲಿ ಕೆಂಪುಸೀರೆ ಪ್ರಮುಖ ಪಾತ್ರ ವಹಿಸಿದೆ.

ಮಗಳ ಮೇಲೆ ಅಪಾರ ಪ್ರೀತಿ ಇಟ್ಟುಕೊಂಡಿದ್ದ ತಾಯಿ ಕೆಂಪುಸೀರೆ ಉಟ್ಟುಕೊಂಡಿದ್ದಾಗಲೇ ಕೊಲೆಯಾಗುತ್ತಾಳೆ. ತಾಯಿಯ ನಂತರ ಆಕೆಯ ಮಗಳನ್ನೂ ಹಂತಕರು ಸಾಯಿಸುತ್ತಾರೆ. ಆನಂತರ ಮಗಳ ಆತ್ಮ ಕೆಂಪುಸೀರೆ ಉಟ್ಟಿದ್ದ ತನ್ನ ತಾಯಿಯ ಆತ್ಮ ಹುಡುಕುವ ಕಥಾಹಂದರ ಹೊಂದಿದೆ,

ಹಾರರ್ ಹಿನ್ನೆಲೆಯಲ್ಲಿ ನಡೆಯುವ ಸೆಂಟಿಮೆಂಟ್ ಕಥೆಯನ್ನು ನಿರ್ದೇಶಕರು  ತೆರೆಯ ಮೇಲೆ ಕಟ್ಟಿಕೊಟ್ಟಿದ್ದಾರೆ 30 ನಿಮಿಷಗಳ  ಕೆಂಪುಸೀರೆ, ಅಘೋರಿ ಪಾತ್ರಗಳಿಗೆ ಗ್ರಾಫಿಕ್ ಬಳಸಿಕೊಳ್ಳಲಾಗಿದೆ. ದಸರಾ ಹಬ್ಬದ ವೇಳೆಗೆ ಚಿತ್ರ ತೆರೆಗೆ ತರುವ ಯೋಜನೆಯಿದೆ.

 ಅಘೋರಿಯಾಗಿ  ಸಾಯಿಕುಮಾರ್ ಸಹೋದರ ಅಯ್ಯಪ್ಪ ಶರ್ಮ ಅಭಿನಯಿಸಿದ್ದಾರೆ. ಉಳಿದ ಪಾತ್ರಗಳಲ್ಲಿ ಸುಮನ್ ಬಾಬು,  ಕಾರುಣ್ಯ ಚೌದರಿ, ಸಂಜನಶೆಟ್ಟಿ, ಆಲಿ, ಶ್ರೀಕಾಂತ್, ಅಜಯ್, ಜೀವಾ, ಬೇಬು ಸಾಯಿ ತೇಜಸ್ವಿನಿ ನಟಿಸಿದ್ದಾರೆ.

ಚಿತ್ರದ 4 ಹಾಡುಗಳಿಗೆ ಪ್ರಮೋದ್ ಸಂಗೀತ ನೀಡಿದ್ದಾರೆ, ಚಿನ್ನು ಹಿನ್ನೆಲೆ ಸಂಗೀತ, ಚಂದ್ರು ಛಾಯಾಗ್ರಹಣ, ಸಂಗೋಪಿ ವಿಮಲ ಸಂಭಾಷಣೆ, ಅಜಯ್ ಶಿವಶಂಕರ್ ಅಕುಲ್ ನೃತ್ಯ, ವೆಂಕಟಪ್ರಭು ಸಂಕಲನ ಚಿತ್ರಕ್ಕಿದೆ.