ಹಾರಕೂಡ ಶ್ರೀಮಠದಲ್ಲಿ ಕರಬಸಯ್ಯ ಸ್ವಾಮಿ ಸ್ಮರಣೋತ್ಸವ

ಬೀದರ್:ಜ.31: ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಸುಕ್ಷೇತ್ರ ಹಾರಕೂಡ ಸಂಸ್ಥಾನ ಹಿರೇಮಠದಲ್ಲಿ ಪೀಠಾಧಿಪತಿ ಪೂಜ್ಯ ಡಾ. ಚನ್ನವೀರ ಶಿವಾಚಾರ್ಯರು, ಪೂಜ್ಯ ಶ್ರೀ ಲಿಂ. ಕರಬಸಯ್ಯ ಸ್ವಾಮಿ ಹಿರೇಮಠ ಹಾರಕೂಡ ಅವರ 8ನೇ ಪುಣ್ಯ ಸ್ಮರಣೋತ್ಸವದ ಅಂಗವಾಗಿ ಅವರ ಸಮಾಧಿ ಗದ್ದುಗೆಗೆ ಪೂಜೆ ಸಲ್ಲಿಸಿದರು.
ಮಲ್ಲಿನಾಥ ಹಿರೇಮಠ ಹಾರಕೂಡ, ಬಿಕೆ ಹಿರೇಮಠ, ಪಂಚಾಕ್ಷರಿ ಹಿರೇಮಠ, ಹೇಮಲತಾ ಮಲ್ಲಿನಾಥ ಹಿರೇಮಠ ಹಾರಕೂಡ, ಶಿವಶರಣಯ್ಯ ಕಂಬಳಿಮಠ, ಅಲ್ಲಮಪ್ರಭು ಹಿರೇಮಠ ಮುಂತಾದವರು ಉಪಸ್ಥಿತರಿದ್ದರು.