ಹಾರಕೂಡ ಶ್ರೀಗಳಿಗೆ 645ನೇ ತುಲಾಭಾರ

Oplus_0

ಬೀದರ್: ಮೇ.26:ತಾಲೂಕಿನ ಸುಕ್ಷೇತ್ರ ಹಾರಕೂಡ ಸಂಸ್ಥಾನ ಹಿರೇಮಠದಲ್ಲಿ ಪೀಠಾಧಿಪತಿಗಳಾದ ಪೂಜ್ಯಶ್ರೀ ಡಾ. ಚನ್ನವೀರ ಶಿವಾಚಾರ್ಯರಿಗೆ ಸಮಸ್ತ ಹಾರಕೂಡ ಗ್ರಾಮದ ಭಕ್ತಾದಿಗಳಿಂದ ಭಕ್ತಿ ನಮನ ಹಾಗೂ 645ನೇ ತುಲಾಭಾರ ಕಾರ್ಯಕ್ರಮದಲ್ಲಿ ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದ ಗ್ರಾಮದ ಮುಖಂಡರಾದ ಮೇಘರಾಜ ನಾಗರಾಳೆ ಅವರು ಪೂಜ್ಯ ಡಾ. ಚನ್ನವೀರ ಶಿವಾಚಾರ್ಯರು ಲಿಂಗೈಕ್ಯ ಚೆನ್ನಬಸವ ಶಿವಯೋಗಿಗಳ ಪ್ರತಿ ಅವತಾರವೇ ಆಗಿದ್ದು, ದೃಢ ಭಕ್ತಿಗೆ ದೇವರು ಒಲಿಯುತ್ತಾನೆ.
ಪೂಜ್ಯರು ಶತಾಯುಷಿಗಳಾಗಿ ನಾಡಿನ ಭಕ್ತರ ಬದುಕಿಗೆ ಶ್ರೀ ರಕ್ಷೆಯಾಗಿ, ಅಧ್ಯಾತ್ಮ ಜ್ಯೋತಿಯಾಗಿ ಸದಾ ಬೆಳಗುತ್ತಿರಲಿ ಎಂಬುದೇ ಸಮಸ್ತ ಭಕ್ತರ ಪ್ರಾರ್ಥನೆ, ಎಂದು ನುಡಿದರು.
ಮಲ್ಲಿನಾಥ ಹಿರೇಮಠ, ಮೇಘರಾಜ ನಾಗರಾಳೆ, ಎಪಿಎಂಸಿ ಮಾಜಿ ಅಧ್ಯಕ್ಷರಾದ ಸಿದ್ರಾಮಪ್ಪ ಗುದಗೆ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಮಹಾದೇವ ಪೂಜಾರಿ, ವಿಜಯಕುಮಾರ ಸಂಗೊಳಗೆ, ಆನಂದರಾವ ಝಳಕೆ, ರಾಜಕುಮಾರ ಪಾಟೀಲ, ಪಂಡಿತರಾವ ದೇಗಾಂವ, ವಿಜಯಕುಮಾರ ಕುಲಕರ್ಣಿ, ಚನ್ನಪಪ್ಪ ದಾಮಾ, ರೇವಣಸಿದ್ಧಯ್ಯ ಹಿರೇಮಠ, ನಾಗಣ್ಣ ಪಿರಜೆ, ಬಸವಂತ ಪೂಜಾರಿ, ತಾನಾಜಿ ಪಾಟೀಲ ಉಪಸ್ಥಿತರಿದ್ದರು.
ಇದೇ ಸಂಧರ್ಭದಲ್ಲಿ ಸಮಸ್ತ ಗ್ರಾಮಸ್ಥರು ಹಾರಕೂಡ ಶ್ರೀಗಳ 645ನೇ ತುಲಾಭಾರ ನೆರವೇರಿಸಿ ಆಶೀರ್ವಾದ ಪಡೆದರು.
ಕಾರ್ತಿಕ ಸ್ವಾಮಿ ಯಲದಗುಂಡಿ ಮತ್ತು ಶರಣಪ್ಪ ಸುಂಠಾಣ ಸಂಗೀತ ಸೇವೆ ಸಲ್ಲಿಸಿದರು.
ವಿಜಯಕುಮಾರ ಅಟ್ಟೂರೆ ವಂದಿಸಿದರು.
ಇದಕ್ಕೂ ಮೊದಲು ಅಲಂಕೃತ ಸಾರೋಟಿನಲ್ಲಿ ಹಾರಕೂಡ ಶ್ರೀಗಳ ಅದ್ದೂರಿ ಮೆರವಣಿಗೆ ಜರುಗಿತು.