ಹಾರಕೂಡ: ಜಂಗಿ ಕುಸ್ತಿ ಥೇಟರ್ ಕಾರ್ಯಕ್ರಮಕ್ಕೆ ಶ್ರೀಗಳಿಂದ ಚಾಲನೆ

ಬೀದರ್: ಜ.18:ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಸುಕ್ಷೇತ್ರ ಹಾರಕೂಡದ ಸದ್ಗುರು ಚನ್ನಬಸವ ಶಿವಯೋಗಿಗಳ 72ನೇ ಜಾತ್ರಾ ಮಹೋತ್ಸವ ಅಂಗವಾಗಿ ಪೀಠಾಧಿಪತಿಗಳಾದ ಪೂಜ್ಯ ಡಾ. ಚನ್ನವೀರ ಶಿವಾಚಾರ್ಯರ ಪಾವನ ನೇತೃತ್ವದಲ್ಲಿ ಜಂಗಿ ಥೇಟರ್ ಕುಸ್ತಿ ಉದ್ಘಾಟನಾ ಸಮಾರಂಭ ಜರಗಿತು.
ಕೊನೆ ಕುಸ್ತಿ ವಿಜೇತರು : ಶಿವರಾಜ ರಾಕ್ಷೆ, ಕಾಕಾ ಪವರ್ ತಾಲಿಮ್ ಡಬಲ್ ಮಹಾರಾಷ್ಟ್ರ ಕೇಸರಿ ಪುಣೆ
ಕೊನೆ ಕುಸ್ತಿ ಸೋತ ಪೈಲ್ವಾನ್ : ರವೀಂದ್ರ ಕುಮಾರ ಹರಿಯಾಣ ತಾಲಿಮ್ ಭಾರತ ಕೇಸರಿ ಹರಿಯಾಣ.
ಕೊನೆ ಕುಸ್ತಿ ವಿಜೇತರಿಗೆ ಹಾರಕೂಡದ ಪೂಜ್ಯರು 1 ಲಕ್ಷ 51 ಸಾವಿರ ರೂಪಾಯಿ ನೀಡಿ ಸತ್ಕರಿಸಿ ಗೌರವಿಸಿದರು.
ತೆಲಂಗಣ,ಆಂಧ್ರಪ್ರದೇಶ ಮಹಾರಾಷ್ಟ್ರ, ಹರಿಯಾಣ, ನವದೆಹಲಿ ಸೇರಿದಂತೆ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಸಾವಿರಕ್ಕೂ ಅಧಿಕ ಪೈಲ್ವಾನರು ಕುಸ್ತಿ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದರು.
ಹಿರೇನಾಗಾಂವ ಜಯಶಾಂತ ಲಿಂಗ ಮಹಾಸ್ವಾಮಿಗಳು, ಅಭಿನವ ಶ್ರೀ ಗುರುಲಿಂಗೇಶ್ವರ ಮಹಾಸ್ವಾಮಿಗಳು, ಚೆನ್ನಮಲ್ಲ ಮಹಾಸ್ವಾಮಿ ಗಳು ಸಮ್ಮುಖ ವಹಿಸಿದ್ದರು.
ಶಾಸಕರಾದ ಶರಣು ಸಲಗರ, ಬಸವೇಶ್ವರ ದೇವಸ್ಥಾನ ಪಂಚ ಕಮಿಟಿ ಅಧ್ಯಕ್ಷರಾದ ಬಸವರಾಜ ಕೋರಕೆ, ಜಗನ್ನಾಥ ಪಾಟೀಲ ಮಂಠಾಳ, ಸಿದ್ರಾಮಪ್ಪ ಗುದಗೆ, ಬಾಬು ಹೊನ್ನಾ ನಾಯಕ, ಗುರುಲಿಂಗಪ್ಪ ಸೈದಾಪುರೆ, ಮೇಘರಾಜ ನಾಗರಾಳೆ, ರಾಜಕುಮಾರ ಸುಗರೆ, ಸದಾನಂದ ಪಾಟೀಲ ಮುಡಬಿ ಮಲ್ಲಿನಾಥ ಹಿರೇಮಠ ಹಾರಕೂಡ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ವಿಠ್ಠಲ ಹೂಗಾರ ಕಾರ್ಯಕ್ರಮವನ್ನು ನಿರೂಪಿಸಿದರು.
ಪೃಥ್ವಿರಾಜ ದೇಗಾಂವ, ಪ್ರಕಾಶ ಬೆಳಮಗೆ, ಸಿದ್ಧಾರೂಡ ಪಾಟಿಲ ಗಿಲಕಿ, ಹುಸೇನ್ ಪಟೇಲ, ಪಂಡಿತರಾವ ಡಾವರೆ, ವಿಜಯಕುಮಾರ ಸಂಗೋಳಗೆ, ಆನಂದರಾವ ಝಳಕೆ, ಖಾಜೆಸಾಬ್ ಮುಲ್ಲಾ, ಸುಭಾಷ ದೇಗಾಂವ, ಪಂಡಿತರಾವ ದೇಗಾಂವ, ರವಿ ರಾಯಜಿ, ಮಹಾಂತಪ್ಪ ಸಿರಗಾಪೂರ, ನಾಗಣ್ಣ ಪಾಟೀಲ, ಗುರು ದೇಗಾಂವ ಗದಲೇಗಾಂವ, ಸಿದ್ರಾಮ ಹೆಗಡೆ, ಶಾಸ್ತ್ರಿ ಝಾಪೂರವಾಡಿ ಮುಂತಾದವರು ಉಪಸ್ಥಿತರಿದ್ದರು.