ಹಾರಕಭಾವಿ : ಅಯ್ಯಪ್ಪ ಭಕ್ತರ ಇರುಮುಡಿ ಪೂಜೆ

ಕೂಡ್ಲಿಗಿ.ನ. 27 :- ಕೋವಿಡ್ ಮಹಾಮಾರಿಯಿಂದ ಕಳೆದೆರಡು ವರ್ಷದಿಂದ ಶಬರಿಮಲೈ ಗೆ ಹೋಗುವ ಅಯ್ಯಪ್ಪ ಭಕ್ತ ಮಾಲಾಧಾರಿಗಳಿಗೆ ಹೋಗಲು ಆಗಿರಲಿಲ್ಲವಾಗಿದ್ದು ಈ ಬಾರಿ ಭಕ್ತರ ದರ್ಶನಕ್ಕೆ ಕೋವಿಡ್ ನಿಯಮ ಪಾಲನೆಯಿಂದ ದರ್ಶನ ಭಾಗ್ಯವಿದ್ದು ಇಂದು ತಾಲೂಕಿನ ಹಾರಕಭಾವಿ ಗ್ರಾಮದಲ್ಲಿ ಸುಮಾರು 14 ಅಯ್ಯಪ್ಪ ಮಾಲಾಧಾರಿ ಭಕ್ತರು ಗುರುಸ್ವಾಮಿ ಪೂಜೆ ಮಾಡಿ ಮಾಲಾಧಾರಿಗಳಿಗೆ ಇರುಮುಡಿ ಕಟ್ಟುವ ಪೂಜಾಕಾರ್ಯ ನೆರವೇರಿಸಿದರು. ಶಬರಿಮಲೈ ಸ್ವಾಮಿ ಅಯ್ಯಪ್ಪ ದರ್ಶನ ಪಡೆಯಲು ಕೋವಿಡ್ ಎರಡು ಲಸಿಕೆ  ಕಡ್ಡಾಯವಾಗಿ ಪಡೆದಿರಬೇಕು, ಆನ್ ಲೈನ್ ನಲ್ಲಿ ಮುಂಗಡ ಬುಕ್ಕಿಂಗ್ ವ್ಯವಸ್ಥೆ ಮಾಡಿರಬೇಕು ಅಲ್ಲದೆ ಕೋವಿಡ್ ನಿಯಮ ಪಾಲನೆಯಲ್ಲಿ ಇಂದು ಹಾರಕಭಾವಿಯಿಂದ 14 ಅಯ್ಯಪ್ಪ ಭಕ್ತರು ಗುರುಸ್ವಾಮಿಗಳಿಂದ ಇರುಮುಡಿ ಕಟ್ಟಿಸಿಕೊಂಡು ಅಯ್ಯಪ್ಪನಿಗೆ ವಿಶೇಷ ಪೂಜೆ ಸಲ್ಲಿಸಿ ಮಾಲಾಧಾರಿಗಳ ಭಕ್ತ ಕುಟುಂಬ ಸಹ ಇರುಮುಡಿ ಪೂಜಾಕಾರ್ಯದಲ್ಲಿ ತೊಡಗಿದ್ದರು ಅಲ್ಲದೆ ತಮಿಳುನಾಡು, ಕೇರಳ ಭಾಗದಲ್ಲಿ ಸೈಕ್ಲೋನ್ ಇದ್ದು ಕ್ಷೇಮದ ಬಗ್ಗೆ ಕುಟುಂಬವರ್ಗವು ತಿಳಿಸಿ ಶಬರಿಮಲೈಗೆ ಹೊರಟ ಭಕ್ತರಿಗೆ ಬಿಳ್ಕೊಟ್ಟರು.