ಹಾರಕನಾಳು ಗ್ರಾ.ಪಂ ಸದಸ್ಯರ ಫಲಿತಾಂಶ ಪ್ರಕಟ


ಸಂಜೆವಾಣಿ ವಾರ್ತೆ
ಹರಪನಹಳ್ಳಿ, ಮಾ.02: ತಾಲೂಕಿನ ಹಾರಕನಾಳು ಗ್ರಾಮ ಪಂಚಾಯ್ತಿ ಚುನಾವಣೆ ಫಲಿತಾಂಶಕ್ಕಾಗಿ ಬೆಳಿಗ್ಗೆಯಿಂದ ತಹಶೀಲ್ದಾರರ ಕಚೇರಿ ಬಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಭ್ಯರ್ಥಿಗಳು ಕಾದು ಕುಳಿತ್ತಿದ್ದರು. ಸಂಜೆಯವರೆಗೂ ಮತ ಎಣಿಕೆ ಕಾರ್ಯ ಜರುಗಿತು.
ಪಟ್ಟಣದ ತಾಲೂಕು ಮಿನಿವಿಧಾನಸೌಧದ ಸಭಾಂಗಣದಲ್ಲಿ ಮಂಗಳವಾರ ಬೆಳಿಗ್ಗೆ 8ರಿಂದ ಸಂಜೆ 5.30ರವರೆಗೂ ಮತ ಎಣಿಕೆ ಕಾರ್ಯ ನಡೆದಿದ್ದು ಒಟ್ಟು ಮೂರು ಕೊಠಡಿ ಗಳಲ್ಲಿ ಮತ ಎಣಿಕೆಯನ್ನು ಮಾಡಲಾಯಿತು. ಚುನಾವಣೆಗೂ ಮುನ್ನಾ ಹಾರಕನಾಳುಗ್ರಾಮದ 3 ಸ್ಥಾನಗಳ ಪೈಕಿ | ಸ್ಥಾನವಾದ ಪ.ಜಾತಿ(ಮ) ವರ್ಗದಿಂದ ದುರ್ಗಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದರು. ಇನ್ನೂ ಉಳಿದಂತೆ 21 ಸ್ಥಾನಗಳಿಗೆ ಫೆ.25ರಂದು ಚುನಾವಣೆ ನಡೆದಿದ್ದು, ಫೆ.28ರಂದು ಮತ ಎಣಿಕೆ ಕಾರ್ಯ ಜರುಗಿತು.
ಮತಗಳ ಅಂತರದಿಂದ
ಆರಂಭದಲ್ಲಿ ಈರಾಪುರ ಗ್ರಾಮದ 1 ಸ್ಥಾನಕ್ಕೆ ಮತ ಎಣಿಕೆ ನಡೆದಿದ್ದು ಪೂಜಾರ ಮಂಜುನಾಥರವರು 5ಗೆದ್ದು ನಗೆ ಬಿರಿದರು. ಹಾರಕನಾಳು ಕ್ಷೇತ್ರದ 1 ರಲ್ಲಿ ಬಸವರಾಜಪ್ಪ ಹೊನ್ನಪ್ಪ 280ಮತ ಪಡೆದು ಜಯ ಗಳಿಸಿದರೆ, ರೇಣುಕವ್ವ ಹಾಗೂ ಬಡಿಗೇರ ರತ್ನಮ್ಮ ಇವರು 262 ಸಮ ಮತಗಳನ್ನು ಪಡೆದಿದ್ದು, ಚುನಾವಣಾಧಿಕಾರಿಗಳು ಅಂತಿಮವಾಗಿ ಲಾಟರಿ ಮೂಲಕ ಬಡಿಗೇರ ರತಮ ಆಯ್ಕೆಯಾಗಿದ್ದಾರೆ ಎಂದು ಘೋಷಣೆ ಮಾಡಿದರು.
ಹಾರಕನಾಳು ಕ್ಷೇತ್ರ 2ರಲ್ಲಿ ಮೂರು ಸ್ಥಾನಗಳಿಗೆ ಮೀಸಲಿದ್ದು ಇದರಲ್ಲಿ ಸಾಮಾನ್ಯ ಮಹಿಳೆ ಶಾಂತಮ ಕರಿಯಪ ಹಾವನೂರು318, ಸಾಮಾನ್ಯದಲ್ಲಿ ಮಹಾಂತೇಶ್ 343 ವಿಜಯಸಾಧಿಸಿದರೆ, ಪ.ಜಾತಿ ಮಹಿಳೆ ಕೆ.ದುರುಗಮ್ಮ ಇವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕನ್ನನಾಯಕನಹಳ್ಳಿ ಗ್ರಾಮದಲ್ಲಿ 2
ಸ್ಥಾನಗಳ ಪೈಕಿ ಪ.ಜಾತಿ ಮಹಿಳಾ ಸ್ಥಾನದ
ಅಭ್ಯರ್ಥಿ ಭಾಗ್ಯ ಅಶೋಕ ಅವಿರೋಧವಾಗಿ
ಆಯ್ಕೆಯಾಗಿದ್ದರು. ಉಳಿದ ಸ್ಥಾನಕ್ಕೆ ನಡೆದ
ಮತ ಎಣಿಕೆಯಲ್ಲಿ ದುಗ್ರನಾಯ್ಕ ರವರು
319 ಮತ ಪಡೆದು ಜಯ ಸಾಧಿಸಿದ್ದಾರೆ., ಹುಲಿಕಟ್ಟಿಯ ಮೂರು ಸ್ಥಾನಗಳಿಗೆ 11 ಜನ ಅಭ್ಯರ್ಥಿಗಳು ಸ್ಪರ್ಧಿಸಿದ್ದು ಇದರಲ್ಲಿ ಪ.ಜಾತಿ ವರ್ಗದಲ್ಲಿ ಅಕ್ಷತಾರವರು 316 ಮತ ಪಡೆದಿದ್ದರೆ, ಸಾಮಾನ್ಯ ಮಹಿಳಾ ವರ್ಗದಲ್ಲಿ ಬಿ.ಬಿ.ಫಾತಿಮಾರವರು 467 ಮತ ಪಡೆದು ಜಯ ಸಾಧಿಸಿದರೆ, ಮತ್ತೊಂದು ಸಾಮಾನ್ಯ ಮಹಿಳಾ ವರ್ಗದಲ್ಲಿ ರಾಭಿಯಾಭೀರವರು 417 ಮತಗಳನ್ನು ಪಡೆದು ವಿಜಯಶಾಲಿಯಗಿದ್ದಾರೆ.
ಚನ್ನಹಳ್ಳಿ ಗ್ರಾಮದಲ್ಲಿ 4 ಸ್ಥಾನಗಳಿಗೆ 9ಜನ ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಇದರಲ್ಲಿ ಎಸ್‍ಸಿ ಮಹಿಳೆ ಧನಿಬಾಯಿ 834 ಮತㅎ ಪಡೆದಿದ್ದಾರೆ, ಎಸ್.ಸಿ.ಮಹಿಳೆ, ಸಿ.ದೇವಿ ಬಾಯಿ 560 ಮತಗಳು, ಎಸ್‍ಸಿ ಸಾಮಾನ್ಯ ಪಿ.ಶಿವನಾಯ್ಕ 700 ಮತಗಳು ಹಾಗೂ ಎಸ್.ಸಿ.ಸಾಮಾನ್ಯ ಶಾರದಬಾಯಿಯವರಿಗೆ 488 ಮತಗಳನ್ನು ಪಡೆಯುವ ಮೂಲಕ ಗೆಲುವು ಸಾಧಿಸಿದ್ದಾರೆ.

ಹುಲಿಕಟ್ಟೆ -1, ಹಾಗೂ ಮೇಗಳತಾಂಡ ಗ್ರಾಮದ ಮತ ಸಂಜೆಯವರೆಗೂ ಮುಂದುವರೆದಿತ್ತು. ಜಯಗಳಿಸಿದ. ಅಭ್ಯರ್ಥಿಗಳು ತಮ್ಮ
ಕಾರ್ಯಕರ್ತರೊಂದಿಗೆ ಆಚರಣೆ ವಿಜಯೋತ್ಸವ ಮಾಡಿಕೊಳ್ಳುತ್ತಾ ತಮ್ಮ ಗ್ರಾಮಗಳತ್ತ ಹೆಜ್ಜೆ ಹಾಕಿದರು. ಮತ ಎಣಿಕೆ ಸುತ್ತ ಬಿಗಿ ಪೋಲಿಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಉಪವಿಭಾಗಾಧಿಕಾರಿ ಟಿ.ಎ.ಪ್ರಕಾಶ್, ಎಣಿಕೆ ಕೊಠಡಿಗೆ ಬೇಟಿ ನೀಡಿದ್ದರು. ತಹಶೀಲ್ದಾರ ಶಿವಕುಮಾರ ಬಿರಾದಾರ, ಚುನಾವಣಾಧಿಕಾರಿಗಳಾದ ರವಿಕುಮಾರ, ಅರವಿಂದ, ಪಿಎಸ್‍ಐ ಶಾಂತಮೂರ್ತಿ, ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಮತ ಎಣಿಕೆ ಕಾರ್ಯದಲ್ಲಿ ತೊಡಗಿದ್ದರು.