ಹಾರಕನಾಳು ಗ್ರಾ. ಪಂ ಅಧ್ಯಕ್ಷರಾಗಿ ಭಾಗ್ಯ ಅಶೋಕ ಆಯ್ಕೆ

ಹರಪನಹಳ್ಳಿ.ಮಾ.೨೯ : ತಾಲೂಕಿನ ಹಾರಕನಾಳು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಭಾಗ್ಯ ಅಶೋಕ್ ಉಪಾಧ್ಯಕ್ಷರಾಗಿ ಬಿ.ಬಿ ಫಾತೀಮಾ ಆಯ್ಕೆಗೊಂಡಿದ್ದಾರೆ ಎಂದು ಚುನಾವಣಾಧಿಕಾರಿಯಾದ ತಹಶೀಲ್ದಾರ್ ಶಿವಕುಮಾರ್ ಬಿರಾದಾರ್ ಘೋಷಣೆ ಮಾಡಿದರು.ತಾಲೂಕಿನ ಹಾರಕಾನಳು ಗ್ರಾಮ ಪಂಚಾಯತಿಗೆ ನಡೆದ ಚುನಾವಣೆಯಲ್ಲಿ ಸಾಮಾನ್ಯ ಮಹಿಳೆಗೆ ಮೀಸಲಾದ ಅಧ್ಯಕ್ಷ ಸ್ಥಾನಕ್ಕೆ ಭಾಗ್ಯ ಅಶೋಕ ಹಾಗೂ ಧಾನಿಬಾಯಿ ಸಿಸಿ ರಾಮಚೆಂದ್ರ ಇಬ್ಬರು ಮಾತ್ರ ನಾಮಪತ್ರ ಸಲ್ಲಿಸಿದ್ದರು.ಹಾರಕಾನಳು ಗ್ರಾಮ ಪಂಚಾಯತಿಯಲ್ಲಿ ಒಟ್ಟು 23 ಸದಸ್ಯರನ್ನು ಹೊಂದಿದ್ದು ಎಲ್ಲರು ಹಾಜರಿರುತ್ತಾರೆ ನಂತರ ನಾಮಪತ್ರ ಪರಿಶೀಲನಾ ಪ್ರಕ್ರಿಯೆಯಲ್ಲಿ ಇಬ್ಬರಲ್ಲಿ ಯಾರು ವಾಪಾಸ್ ನಾಮಪತ್ರ ಪಡೆಯದಿದ್ದರಿಂದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಪ್ರಕ್ರಿಯೆ ನೆಡೆಯಿತು ಹಾಗೂ ಕಾಂಗ್ರೆಸ್ ಪಕ್ಷದಿಂದ ಭಾಗ್ಯ ಅಶೋಕ ಮತ್ತು ಧಾನಿಬಾಯಿ ಸಿಸಿ ರಾಮಚಂದ್ರ ನಡುವೆ ನೇರ ಸ್ಪರ್ಧೆ ಏರ್ಪಟ್ಟಿತುಇವರಲ್ಲಿ ಭಾಗ್ಯ ಅಶೋಕ (12)ಮತ ಪಡೆದರೆ ಧಾನಿಬಾಯಿ (11)ಮತ ಪಡೆದರು,ಇವರಲ್ಲಿ ಹೆಚ್ಚು ಮತ ಅಂದರೆ 12 ಮತಗಳನ್ನ ಪಡೆದ ಭಾಗ್ಯ ಅಶೋಕ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರೆ ಎಂದು ಶಿವಕುಮಾರ್ ಬಿರಾದಾರ್ ಪ್ರಕಟಿಸಿದರು ಚುನಾವಣೆ ಪ್ರಕ್ರಿಯೆ ಮುಕ್ತಾಯಗೊಳ್ಳುತ್ತಿದ್ದಂತೆ ನೂತನ ಅಧ್ಯಕ್ಷರಿಗೆ ಪಂಚಾಯತಿಯ ಸರ್ವ ಸದಸ್ಯರು ಹಾಗೂ ಗ್ರಾಮಸ್ಥರು, ಮುಖಂಡರುಗಳು ಹೂವಿನ ಹಾರ ಹಾಕಿ ಸನ್ಮಾನಿಸಿ ಅಭಿನಂದಸಿ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಹೆಚ್.ಪರುಶುರಾಮಪ್ಪ ಮಾತನಾಡಿ ಹಾರಕಾನಳು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಒಗ್ಗಟ್ಟು ತೋರಿಸುವ ಮೂಲಕ ಬಿಜೆಪಿ ಆಡಳಿತ ಪಕ್ಷಕ್ಕೆ ಶೆಡ್ಡು ಹೊಡೆದು ಗೆಲುವು ಪಡೆದದ್ದು ಸಂತೋಷದ ವಿಚಾರ ಎಂದು ಅವರು ಹೇಳದರು.ನೂತನ ಅಧ್ಯಕ್ಷ ಭಾಗ್ಯ ಅಶೋಕ ಮಾತನಾಡಿ ನನ್ನ ಆಯ್ಕೆ ಮಾಡಲು ಶ್ರಮ ಪಟ್ಟ ಎಲ್ಲ ಸದಸ್ಯರಿಗೂ ಹಾಗು ಎಲ್ಲ ಕಾಂಗ್ರೆಸ್ ಮುಖಂಡಿರಿಗೆ ಅಭಿನಂದನೆಗಳು ಸಲ್ಲಿಸುವೆ ಇದರೊಂದಿಗೆ ನನ್ನ ಆಡಳಿತ ಅವಧಿಯಲ್ಲಿ ಎಲ್ಲಾ ಗ್ರಾಮಕ್ಕೂ ಸಮಾನತೆಯಿಂದ ಆಡಳಿತ ನಡೆಸಿ ಅಭಿವೃದ್ಧಿ ಪ್ರಗತಿಯತ್ತ ಕೊಂಡೊಯುವೆ ಎಂದು ಅವರು ಹೇಳಿದರು.ಇದೇ ಸಂದರ್ಭದಲ್ಲಿ ಚುನಾವಣಾಧಿಕಾರಿ ತಹಶಿಲ್ದಾರ ಶಿವಕುಮಾರ ಬಿರಾದಾರ, ಸಿಪಿಐ ನಾಗರಾಜ್ ಕಮ್ಮಾರ್, ಅರವಿಂದ, ಪಿಡಿಓ ಚಂದ್ರನಾಯ್ಕ, ಪಿಎಸ್ಐ ಗುರುರಾಜ್, ಶಾಂತಮೂರ್ತಿ ಎಎಸ್ಐ ನಿಲ್ಯಾನಾಯ್ಕ ಭಾಗಿಯಾಗಿದ್ದರು. ಮುಖಂಡರಾದ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಹೆಚ್.ಬಿ.ಪರುಶುರಾಮಪ್ಪ, ಮಾಜಿ ತಾಲೂಕು ಪಂಚಾಯತಿ ಸದಸ್ಯ ಹೆಚ್.ಚಂದ್ರಪ್ಪ, ಫೀವಲ್ಸ್ ಪೆಟ್ರೋಲ್ ಬಂಕ್ ಮಾಲಿಕ ರವಿ ಮಾಜಿ ಹಾರಕನಾಳು ಅಧ್ಯಕ್ಷ ಭಾಷಾ ಸಾಬ್, ಸುಬಾನ್ ಸಾಬ್, ಶಶಿನಾಯ್ಕ ಹಾಗೂ ಸದಸ್ಯರು ಹಾರಕನಾಳು ಗ್ರಾಮದ ಸುತ್ತಮುತ್ತಲಿನ ಮುಖಂಡರು ಭಾಗಿಯಾಗಿದ್ದರು.