ಹಾಪ್ ಶೂಟ್ಸ್ ತರಕಾರಿ ವಿಶ್ವದಲ್ಲೇ ದುಬಾರಿ

ನವದೆಹಲಿ, ಫೆ. ೨೩- ತರಕಾರಿಗೆ ಅದರದೇ ಆದ ಪ್ರಾಮುಖ್ಯತೆ ಇದೆ. ಇದೀಗ ಹಾಪ್ ಶೂಟ್ಸ್‌ಅನ್ನೋ ಈ ತರಕಾರಿಯು ಜಾಗತಿಕ ಮಾರುಕಟ್ಟೆಯಲ್ಲಿ ಅತ್ಯಂತ ದುಬಾರಿ ತರಕಾರಿಯಾಗಿ ಹೊರಹೊಮ್ಮಿದೆ.
ಜಗತ್ತಿನಲ್ಲಿ ದುಬಾರಿ ತರಕಾರಿ ಎನಿಸಿಕೊಂಡ ಹಾಪ್ ಶೂಟ್ಸ್ ಬಹಳಷ್ಟು ಆರೋಗ್ಯ ಪ್ರಯೋಜನಗಳನ್ನೂ ಹೊಂದಿದೆ.
ಮೊಗ್ಗುಗಳಂತೆ ಕಾಣುವ ಈ ತರಕಾರಿ ಬೆಲೆಯು ಕಿಲೋಗೆ ೮೫,೦೦೦ ರಿಂದ ೧ ಲಕ್ಷ ರೂ ಗೆ ಮಾರಾಟವಾಗುತ್ತಿದೆ. ಈ ತರಕಾರಿಯನ್ನು ಬೆಳೆಸುವುದು ಮತ್ತು ಕೊಯ್ಲು ಮಾಡುವುದು ಶ್ರಮದಾಯಕ. ಹೀಗಾಗಿ ದುಬಾರಿ ಬೆಲೆ ತೆರವುದು ಅನಿವಾರ್‍ಯವಾಗಿದೆ.
ತಜ್ಞರ ಪ್ರಕಾರ, ಅವು ಏಕರೂಪದ ಸಾಲುಗಳಲ್ಲಿ ಬೆಳೆಯುವುದಿಲ್ಲ. ಅಂದರೆ ಚಿಗುರುಗಳನ್ನು ಕೊಯ್ಲು ಮಾಡುವುದು ಅಗತ್ಯವಾಗಿರುತ್ತದೆ. ಹಾಗಾಗಿ ಅವುಗಳನ್ನು ಹುಡುಕಿ ಕೊಯ್ಲು ಮಾಡುವುದು ಕಷ್ಟ. ಇದಕ್ಕೆ ಕೈಯ್ಯಿಂದ ಸಾಕಷ್ಟು ಶ್ರಮ ಹಾಕಬೇಕಾಗುತ್ತದೆ.
ಹಾಪ್ ಶೂಟ್ಸ್‌ವಿವಿಧ ತೈಲಗಳು, ಜೀವಸತ್ವಗಳು ಮತ್ತು ಖನಿಜಗಳನ್ನು ಒಳಗೊಂಡಿರುವ ಗಿಡಮೂಲಿಕೆ ಔಷಧಿ ಎಂದು ಪರಿಗಣಿಸಲಾಗಿದೆ. ವಿಟಮಿನ್ ಇ, ವಿಟಮಿನ್ ಬಿ ೬ ಮತ್ತು ವಿಟಮಿನ್ ಸಿ ಉತ್ಕರ್ಷಣ ನಿರೋಧಕ ಗುಣಲಕ್ಷಣಗಳನ್ನು ಹೊಂದಿದೆ. ಅಲ್ಲದೇ ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೆಚ್ಚು ಸಕ್ರಿಯವಾಗಿ ಮಾಡುತ್ತದೆ.
ಇದನ್ನು ಚರ್ಮದ ಮೇಲ್ಮೈ ರಕ್ತನಾಳಗಳ ಆರೋಗ್ಯಕ್ಕಾಗಿ ಬಳಸಲಾಗುತ್ತದೆ. ಈ ತರಕಾರಿ ಕೂಡ ಕೂದಲು ಉದುರುವಿಕೆಯನ್ನು ಕಡಿಮೆ ಮಾಡುತ್ತದಲ್ಲದೇ ತಲೆಹೊಟ್ಟು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ. ಜೊತೆಗೆ ಸ್ನಾಯುಗಳ ನೋವು ನಿವಾರಣೆ ಹಾಗೂ ಜೀರ್ಣಕ್ರಿಯೆಯನ್ನು ಸುಧಾರಿಸಲಿದೆ.