ಹಾಪಕಾಮ್ಸ ವಾಹನಗಳ ಮೂಲಕ ಮನೆ ಮನೆಗೆ ಹಣ್ಣು, ತರಕಾರಿ ಮಾರಾಟ: ಜಿಲ್ಲಾಧಿಕಾರಿಗಳಿಂದ ವಾಹನಗಳಿಗೆ ಹಸಿರು ನಿಶಾನೆ

ವಿಜಯಪುರ, ಮೇ.29-ಜಿಲ್ಲಾಡಳಿತ, ತೋಟಗಾರಿಕೆ ಇಲಾಖೆ (ಜಿಲ್ಲಾ ಪಂಚಾಯತ್) ಮತ್ತು ಜಿಲ್ಲಾ ಹಾಪಕಾಮ್ಸ್ ಸಹಯೋಗದಲ್ಲಿ ಸಂಚಾರಿ ಸರಕು ವಾಹನದ ಮೂಲಕ ಹಣ್ಣು ಮತ್ತು ತರಕಾರಿಗಳನ್ನು ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುವ ನಿಟ್ಟಿನಲ್ಲಿ ಇಂದು ಜಿಲ್ಲಾಧಿಕಾರಿಗಳಾದ ಪಿ,ಸುನಿಲ್ ಕುಮಾರ್ ಅವರು ಹಸಿರು ನಿಶಾನೆ ತೋರಿಸುವ ಮೂಲಕ ಹಾಪಕಾಮ್ಸ ವಾಹನಗಳಿಗೆ ಚಾಲನೆ ನೀಡಿದರು.
ರಾಜ್ಯದಲ್ಲಿ ಕೋವಿಡ್ 19 ಜನತಾ ಕಫ್ರ್ಯೂ ಲಾಕ್ಡೌನ್ ಸರ್ಕಾರದ ಆದೇಶ ಇರುವುದರಿಂದ ಇಂತಹ ಸಂದರ್ಭದಲ್ಲಿ ಸಾರ್ವಜನಿಕರ ಅನುಕೂಲದ ಹಿತದೃಷ್ಟಿಯಿಂದ ಹಾಪಕಾಮ್ಸ್ ನಿಂದ ನಗರದ ನಿವಾಸಿಗಳಿಗೆ ದಿನನಿತ್ಯ ಅಗತ್ಯ ಹಣ್ಣು ಮತ್ತು ತರಕಾರಿಗಳನ್ನು ತಲುಪಿಸಲು 10 ಮಳಿಗೆಗಳ ಮುಖಾಂತರ ಈಗಾಗಲೇ ಮಾರಾಟ ಮಾಡಲಾಗುತ್ತದೆ.
ಅದರಂತೆ ಜಿಲ್ಲಾಡಳಿತ,ಜಿಲ್ಲಾ ಪಂಚಾಯತ್, ತೋಟಗಾರಿಕೆ ಇಲಾಖೆ ಮತ್ತು ಜಿಲ್ಲಾ ಹಾಪಕಾಮ್ಸ್,ರವರ ಸಹಯೋಗದಲ್ಲಿ ವಿವಿಧ ಬಡಾವಣೆ ಗಳಿಗೆ ಸಂಚರಿಸಲು 5 ಸಂಚಾರಿ ವಾಹನದ ಮೂಲಕ ಹಣ್ಣು ಮತ್ತು ತರಕಾರಿಗಳನ್ನು ರಿಯಾಯಿತಿ ದರದಲ್ಲಿ ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆ ಮಾಡಿದ್ದು,ಈ ವಾಹನಗಳಿಗೆ ಜಿಲ್ಲಾಧಿಕಾರಿಗಳು ಇಂದು ಚಾಲನೆ ನೀಡಿದರು.
ನಗರದ ವಿವಿಧ ಬಡಾವಣೆಗಳಿಗೆ 5 ಸಂಚಾರಿ ವಾಹನಗಳ ಮೂಲಕ ಹಣ್ಣು ಮತ್ತು ತರಕಾರಿಗಳನ್ನು ಗ್ರಾಹಕರಿಗೆ ತಲುಪಿಸಲು ಹಾಗೂ ರೈತರಿಂದ ಖರೀದಿಸಲು 2 ಗೂಡ್ಸ ವಾಹನಗಳನ್ನು ಯೋಜಿಸಲಾಗಿದೆ. ಈ ವಾಹನಗಳು ಜೋರಾಪೂರ ಪೇಠ, ಶಾಸ್ತ್ರಿ ನಗರ, ಘೇವಚರ್ಂದ್ ಕಾಲೋನಿ, ರಾಜಕುಮಾರ್ ಲೇಔಟ್, ಚಾಲುಕ್ಯ ನಗರ, ಕೆ. ಎಚ್, ಬಿ ಕಾಲೋನಿ, ಶ್ರೀನಗರ, ಕೆಸಿ ನಗರ್, ಎಂಬಿ ಪಾಟೀಲ್ ನಗರ, ಆಲಕುಂಟೆ ನಗರ, ವಜ್ರ ಹನುಮಾನ್ ನಗರ, ಇಬ್ರಾಹಿಂಪುರ್ ನಗರ್, ಗಣೇಶನಗರ, ರಾಜಾಜಿನಗರ,ಸಾಯಿ ಪಾರ್ಕ್, ಮಲ್ಲಿಕಾರ್ಜುನನಗರ, ಆದರ್ಶ ನಗರ, ಗುರುರಾಜ್ ಕಾಲೋನಿ, ನೀಲಾನಗರ, ಐಶ್ವರ್ಯ ನಗರ, ಅಕ್ಕಿ ಕಾಲೋನಿ, ಆಶ್ರಮ್ ನಗರ್, ಪಾರೇಖ ನಗರ, ಕನಕದಾಸ ಬಡಾವಣೆ, ಹುಡಕೋ, ಜಲನಗರ್, ಕೆ.ಕೆ. ಕಾಲೋನಿಗಳಲ್ಲಿ ಸಂಚರಿಸಲಿವೆ.
ಈ ಸಂದರ್ಭದಲ್ಲಿ ತೋಟಗಾರಿಕೆ ಉಪನಿರ್ದೇಶಕರು ಎಸ್.ಎಮ್.ಬರಗಿಮಠ ಜಿಲ್ಲಾ ಹಾಪಕಾಮ್ಸ್ ವ್ಯವಸ್ಥಾಪಕ ನಿರ್ದೇಶಕರು ಸಚಿನ್ ಉಟಗಿ,
ಜಿಲ್ಲಾ ಹಾಪಕಾಮ್ಸ್ ನಿರ್ದೇಶಕರು ನಂದು ರಾಥೋಡ್, ಹಾಗೂ ಹಾಪಕಾಮ್ಸ್ ಮತ್ತು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು