ಹಾನಿಗೊಳಗಾದ ಮೇಕ್ಕೆಜೋಳದ ಹೊಲಕ್ಕೆ ಕೃಷಿ ಅಧಿಕಾರಿ ಭೇಟಿ

ಕೊಟ್ಟೂರು ನ 20 :ಕೊಟ್ಟೂರಿನ ಸರ್ವೆನಂ 65 ರೈತಹಂಪಮ್ಮ ರೌಡಿಯವರು 2020-21ನೇ ಮುಂಗಾರು ಅಂಗಾಮಿನಲ್ಲಿ ಮೆಕ್ಕೆಜೋಳ ಬೆಳೆಗೆ ವಿಮೆ ಮಾಡಿಸಿದ್ದು, ಆಗಸ್ಟ ತಿಂಗಳಲ್ಲಿ ಹೆಚ್ಚು ಮಳೆಯಾಗಿ ಬೆಳೆ ಶೇ.50 ಬೆಳವಣಿಗೆ ಕುಂಟಿತವಾಗಿ ಇಳುವರಿ ಕೇವಲ ಶೇ20 ಬಂದಿದ್ದು ವಿಮೆಕಂಪನಿಗೆ ದೂರು ನೀಡಿದರು ಹಾಗೂ ಕೃಷಿ ಇಲಾಖೆಗೂ ಮಾಹಿತಿ ನೀಡಿದ್ದರು.ಇಂದು ಕೃಷಿ ಅಧಿಕಾರಿ ವಾಮದೇವ ರೈತರ ಹೊಲಕ್ಕೆ ಭೇಟಿನೀಡಿ ಪರಿಶೀಲನೆ ಮಾಡಿದ್ದು ಶೀಘ್ರದಲ್ಲಿ ವಿಮಾ ಕಂಪನಿಯಿಂದ ಪರಿಹಾರ ನೀಡಿಸುವ ಭರವಸೆ ನೀಡಿದರು. ರೈತ ಸಂಪರ್ಕ ಕೇಂದ್ರದ ಸ್ಮಾಮ ಸುಂದರ, ಚಂದ್ರಶೇಖರ,ತಿಮ್ಮಣ್ಣ, ರಾಂಪುರ ಕೊಟ್ರೇಶ ಸೇರಿದಂತೆ ಇತರರು ಇದ್ದರು.