ಹಾನಗಲ್ ಸಮೀಪ ಕತ್ತೆಕಿರುಬನ ಗುಡ್ಡದಲ್ಲಿ ಶವ ಪತ್ತೆ


ಸಂಜೆವಾಣಿ ವಾರ್ತೆ
ಮೊಳಕಾಲ್ಮೂರು, ಮೇ.17: ತಾಲೂಕಿನ ಹಾನಗಲ್ ಸಮೀಪ ಇಂದು ಆನಾಮಧೇಯ ಶವಯೊಂದು ಪತ್ತೆಯಾಗಿದೆ.
ಹಾನಗಲ್ ಪೆಟ್ರೋಲ್ ಬಂಕ್ ಹಿಂಭಾಗದ ಕತ್ತೆಕಿರುಬನ ಗುಡ್ಡದಲ್ಲಿ  ಬಂಡೆಗಲ್ಲುಗಳ ಮಧ್ಯೆ ಸುಮಾರು ಐವತ್ತು ವರ್ಷದ ಗಂಡು ಶವ ಕಂಡು ಬಂದಿದ್ದು, ಸುದ್ದಿ ತಿಳಿದ ಕೂಡಲೇ ಪಿಎಸ್ಐ ಪಾಂಡುರಂಗಪ್ಪ ಮತ್ತು ಸಿಬ್ಬಂದಿ ಗಳಾದ ತಿಮ್ಮಣ್ಣ, ಬಾಷ, ಸುಧೀಂದ್ರ, ಬೇಟಿ ನೀಡಿ ಪರಿಶೀಲನೆ ನಡೆಸಿದರು.
ಶವವನ್ನು ಮೊಳಕಾಲ್ಮೂರು ಸರ್ಕಾರಿ ಆಸ್ಪತ್ರೆಯ ಶವಗಾರಕ್ಕೆ ಕೊಂಡ್ಯೊಲಾಗಿದೆ ಎಂದು ತಿಳಿದು ಬಂದಿದ್ದೆ.
ಈ ಸಂಬಂಧ ಮೊಳಕಾಲ್ಮೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಶುರುವು ಗೊಳಿಸಿದ್ದಾರೆಂದು ತಿಳಿದು ಬಂದಿದೆ.

One attachment • Scanned by Gmail