ಹಾನಗಲ್ ಗ್ಯಾಂಗ್‌ರೇಪ್ ಪ್ರಕರಣ:ಎಸ್.ಐ.ಟಿಗೆ ವಹಿಸಿ

ಹುಬ್ಬಳ್ಳಿ, ಜ ೧೪: ಹಾನಗಲ್‌ನಲ್ಲಿ ನಡೆದ ಗ್ಯಾಂಗ್‌ರೇಪ್ ಪ್ರಕರಣದ ತನಿಖೆಯನ್ನು ಎಸ್‌ಐಟಿ ಗೇ ವಹಿಸುವಂತೆ ತಾವು ಆಗ್ರಹಿಸುವುದಾಗಿ ಮಾಜಿಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕರಣವನ್ನು ದುಡ್ಡುಕೊಟ್ಟು ಮುಚ್ಚಿಹಾಕುವ ಯತ್ನ ವಿಫಲಾಗಿದೆ ಎಂದು ಹೇಳಿದರು.
ಮುಖ್ಯಮಂತ್ರಿಗಳು ಹಾವೇರಿಗೆ ಬಂದಾಗ ಪ್ರಕರಣವನ್ನು ಎಸ್.ಐ.ಟಿಗೆ ವಹಿಸಿ ಘೋಷಣೆ ಮಾಡುತ್ತಾರೆಂದು ತಾವು ನಿರೀಕ್ಷಿಸುವುದಾಗಿ ಅವರು ತಿಳಿಸಿದರು.
ಹಾವೇರಿ ಸಂತ್ರಸ್ತ ಭವನದಲ್ಲಿ ಸಂತ್ರಸ್ತ ಮಹಿಳೆಯನ್ನು ಬಿಜೆಪಿ ಮಹಿಳಾ ನಿಯೋಗ ಭೇಟಿ ಮಾಡುತ್ತದೆ ಎಂದು ವಿಚಾರಣೆ ನೆಪದಲ್ಲಿ ಅಲ್ಲಿಂದ ಬೇರೆಡೆ ಸ್ಥಳಾಂತರಿಸುತ್ತಿದ್ದಾರೆ. ಇದರಲ್ಲಿಯೂ ಅವರು ರಾಜಕೀಯ ಮಾಡುತ್ತಿದ್ದಾರೆ ಎಂದು ಬೊಮ್ಮಾಯಿ ನೋವಿನಿಂದ ನುಡಿದರು.
ದಿ. ೨೨ರ ನಂತರ ಸಮಯ ನೋಡಿಕೊಂಡು ರಾಮಮಂದಿರಕ್ಕೆ ಹೋಗುತ್ತೇನೆ ಎನ್ನುತ್ತಿದ್ದ ಸಿದ್ದರಾಮಯ್ಯನವರು, ಈಗ ಇಲ್ಲ ಎನ್ನುತ್ತಿದ್ದಾರೆ. ಅವರ ಆತ್ಮಸಾಕ್ಷಿ ಹೋಗು ಎನ್ನುತ್ತಿದೆ. ಆದರೆ ಪಕ್ಷದ ವರಿಷ್ಠರು ಹೋಗಬೇಡ ಎನ್ನುತ್ತಿದ್ದಾರೆ. ಸಿದ್ಧರಾಮಯ್ಯ ಬಂಧನದಲ್ಲಿ ಸಿಲುಕಿದ್ದಾರೆ ಎಂದು ಬೊಮ್ಮಾಯಿ ಹೇಳಿದರು.