ಹಾನಗಲ್ ಕುಮಾರಸ್ವಾಮಿಗಳ ಭಾವಚಿತ್ರದ ಮೆರವಣಿಗೆ 


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಸೆ.10: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದಿಂದ ಇಂದು  ನಗರದ ಎಸ್.ಜಿ.ಲಾಲೇಜ್ ಮೈದಾನದಲ್ಲಿ ಹಮ್ಮಿಕೊಂಡಿರುವ ವೀರಶೈವ ಲಿಂಗಾಯತ ಜನ‌ಜಾಗೃತಿ ಸಮಾವೇಶದ ಅಂಗವಾಗಿ ಬೆಳಿಗ್ಗೆ ನಗರದಲ್ಲಿ ಹಾನಗಲ್ ಕುಮಾರ ಸ್ವಾಮಿಗಳ 156 ನೇ ಜಯಂತೋತ್ಸವದ ಭಕ್ತಿ ಭಾವದ ಮೆರವಣಿಗೆ ನಡೆಯಿತು.
ಕುಮಾರಸ್ವಾಮಿಗಳ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ,  ಸಮಾಳ ಭಾರಿಸುವ ಮೂಲಕ  ಮೆರವಣಿಗೆಗೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ನಾಡಿನಲ್ಲಿ ಅನ್ನ, ಅಕ್ಷರ ದಾಸೋಹಕ್ಕೆ  ಪ್ರೇರಣೆಗೆ ನೀಡಿದವರು ಕುಮಾರಸ್ವಾಮಿಗಳು ಅವರ ಮಾರ್ಗದರ್ಶನ, ಆಶಿವಾರ್ದದ ಸದಾ ಜನತೆಗೆ ಲಭಿಸಲಿ ಎಂದು ಹೇಳಿದರು.
ನಂತರವ ಮೆರವಣಿಗೆ ವಿವಿಧ ಸಾಂಸ್ಕೃತಿಕ ಕಲಾ ತಂಡಗಳೊಂದಿಗೆ ಸಾಗಿತು. ಮಕ್ಕಳು ಬಸವಾದಿ ಶರಣರ ವೇಷಧಾರಿಗಳಾಗಿ ಮೆರವಣಿಗೆಯಲ್ಲಿ ಗಮನ ಸೆಳೆದರು.
ಬಸವ ಭವನದಿಂದ ಆರಂಭಗೊಂಡ ಮೆರವಣಿಗೆ  ಪಾರ್ವತಿ ನಗರದ ಮುಖ್ಯ ರಸ್ತೆ, ದುರ್ಗಮ್ಮ‌ದೇವಸ್ಥಾನದ  ಮೂಲಕ‌   ಎಸ್.ಜಿ.ಕಾಲೇಜ್ ಆವರಣಕ್ಕೆ ಬಂದು ತಲುಪಿತು.
ಮೆರವಣಿಗೆಯ ಸಾನಿದ್ಯವನ್ನು ಕಲ್ಯಾಣ ಸ್ವಾಮಿಗಳು ವಹಿಸಿದ್ದರು. ವೀರಶೈವ ಸಮಾಜದ ಮುಖಂಡರುಗಳಾದ ಅಲ್ಲಂ ಪ್ರಶಾಂತ್, ಜಾನೆಕುಂಟೆ ಸಣ್ಣ ಬಸವರಾಜ್(ಕುಮ್ಮಿ), ಗೋನಾಳ್ ನಾಗಭೂಷಣಗೌಡ, ಮಹಾಸಭಾದ ಜಿಲ್ಲಾ ಅಧ್ಯಕ್ಷ ಚಾನಾಳ್ ಶೇಖರ ಮೊದಲಾದವರು ಪಾಲ್ಹೊಂಡಿದ್ದರು.

One attachment • Scanned by Gmail