ಹಾಡು ಹಾಡುವ ವಿಡಿಯೋ ಹರಿಬಿಟ್ಟ ಮಲೈಕಾ

ಮುಂಬೈ , ಜು ೨೧- ಬಾಲಿವುಡ್ ನಟಿ ಮಲೈಕಾ ಅರೋರಾ ಸೋಷಿಯಲ್ ಮೀಡಿಯಾದಲ್ಲಿ ಹಾಡುವ ವೀಡಿಯೊ ಹಂಚಿಕೊಂಡಿದ್ದಾರೆ

ವೀಡಿಯೊದಲ್ಲಿ, ಮಲೈಕಾ ಕೆಫೆ ಪನಾಮ ಮುಂಬೈನಲ್ಲಿ ತನ್ನ ಗರ್ಲ್ ಗ್ಯಾಂಗ್‌ನೊಂದಿಗೆ ನೀಲ್ ಸೆಡಾಕಾ ಅವರ ’ಓ ಕರೋಲ್’ ಹಾಡನ್ನು ಹಾಡುತ್ತಿರುವಾಗ ಮೋಜು ಮಾಡುತ್ತಿರುವುದು ಕಂಡುಬಂದಿದೆ. ಈವೇಳೆ ಮಲೈಕಾ ಅರೋರಾ ಧರಿಸಿದ ಡ್ರೆಸ್ ಕೂಡ ಸಕತ್ ಮನ ಸೆಳೆದಿದೆ. ಕಪ್ಪು ಬ್ರಾಲೆಟ್ ಟಾಪ್ ನೊಂದಿಗೆ, ಅವಳು ನೀಲಿ ಡೆನಿಮ್ ಶಾರ್ಟ್ಸ್ ಹಾಗೂ ಕಪ್ಪು-ಕೆಂಪು ಮುದ್ರಿತ ಜಾಕೆಟ್ ಧರಿಸಿ ಮನಸೆಳೆದಿದ್ದಾರೆ.

ವೀಡಿಯೊಗಳನ್ನು ಹಂಚಿಕೊಂಡಿರುವ ಮಲೈಕಾ, “ಮನೆಯಲ್ಲಿ ಸಹೋದರಿಯರು” ಎಂದು ಶೀರ್ಷಿಕೆ ನೀಡಿದ್ದಾರೆ. ಆಕೆ ಬೆರಗುಗೊಳಿಸುವ ಸೆಲ್ಫಿಯನ್ನು ಸಹ ಪೋಸ್ಟ್ ಮಾಡಿದ್ದಾರೆ.

ಮಲೈಕಾ ಅವರು ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ ಮತ್ತು ಅಭಿಮಾನಿಗಳಿಗೆ ತಮ್ಮ ದೈನಂದಿನ ದಿನಚರಿಯ ನೋಟವನ್ನು ನಿಯಮಿತವಾಗಿ ನೀಡುತ್ತಾರೆ. ಅಲ್ಲದೆ, ಇತ್ತೀಚೆಗೆ ಅರ್ಜುನ್ ಕಪೂರ್ ಅವರ ೩೭ ನೇ ಹುಟ್ಟುಹಬ್ಬದಂದು ಪ್ಯಾರಿಸ್‌ನ ಸುಂದರ ತಾಣಕ್ಕೆ ಭೇಟಿ ನೀಡಿದ್ದರು. ಇದಲ್ಲದೆ, ವರ್ಷಾಂತ್ಯದ ವೇಳೆಗೆ ತಾರಾ ಜೋಡಿಯು ದಾಂಪತ್ಯ ಜೀವನಕ್ಕೆ ಕಾಲಿಡಲು ಸಿದ್ಧವಾಗಿದೆ ಎಂಬ ವದಂತಿಗಳು ಹೆಚ್ಚುತ್ತಿವೆ.

ಏತನ್ಮಧ್ಯೆ, ಮಲೈಕಾ, ತನ್ನ ಮಾದಕ ನಡೆಗಳಿಂದ ಚಿತ್ರರಂಗವನ್ನು ಗ್ಲಾಮರ್ ಮಾಡಿದ ನಂತರ ಲೇಖಕಿಯಾಗಲು ಸಿದ್ಧರಾಗಿದ್ದಾರೆ. ರಿಯಾಲಿಟಿ ಶೋ ’ಇಂಡಿಯಾಸ್ ಬೆಸ್ಟ್ ಡ್ಯಾನ್ಸರ್’ ನಲ್ಲಿ ತೀರ್ಪುಗಾರರಾಗಿಯೂ ಕಾರ್ಯನಿರ್ವಹಿಸುತ್ತಿರುವ ನಟಿ, ಪುಸ್ತಕದಲ್ಲಿ ತಮ್ಮ ಕ್ಷೇಮ ಸಲಹೆಗಳನ್ನು ಹಂಚಿಕೊಳ್ಳಲಿದ್ದಾರೆ.