ಹಾಡು ನಿಲ್ಲಿಸಿ ನೈಪತ್ಯಕ್ಕೆ ಸರಿದ  ವಸಂತ್ ಗೆ ಅಶೃತರ್ಪಣೆ

ದಾವಣಗೆರೆ.ಸೆ.೨೨; ಐತಿಹಾಸಿಕ ಹಿನ್ನೆಲೆ ತುಂಗಭದ್ರೆಯ ನೆಲದ ಹಿರಿಯ ಕಲಾವಿದ, ಗಾಯಕ ಹರಿಹರದ ವಸಂತಕುಮಾರ್ ನೆನಪು ಮಾತ್ರ. ಹಲವಾರು ವರ್ಷಗಳಕಾಲ ಸಾಮಾಜಿಕ ಪರಿವರ್ತನೆಯ ಬೀದಿ ನಾಟಕ, ರಾಜ್ಯ ತುಂಬೆಲ್ಲ ಸಾಂಸ್ಕೃತಿಕ ಕಲಾಜಾಥ, ಸಾಕ್ಷರತಾ ಆಂದೋಲನದಲ್ಲಿ ಸಕ್ರಿಯ ಜನಾಧಿಕಾರ ಜಾಥಾದ ಮೂಲಕ ಗ್ರಾಮೀಣ ಬದುಕಿನ ಹೊರ-ಒಳ ಮುಖಗಳನ್ನು ಪಂಚಾಯತಿ ಯಲ್ಲಿರುವ ಹುಳುಕುಗಳನ್ನು ಹಾಡು, ಬೀದಿ ನಾಟಕಗಳ ಮುಖೇನ ಪರಿಣಾಮ ಬೀರುವ ಅದ್ಭುತ ಕಂಠ ಸಿರಿಯಾ ಮೂಲಕ ಜಿಲ್ಲೆಯ ಮನೆ ಮಾತಾಗಿದ್ದರು.ಪರಿಸರ, ಉಳಿಸಿ ಬೆಳೆಸುವ, ಆರೋಗ್ಯ, ಸ್ವಚ್ಚತೆ, ಲಂಚ ಭ್ರಷ್ಟಾಚಾರ ನಿರ್ಮೂಲನೆ ಕುರಿತ ನೂರಾರು ಕಾರ್ಯಕ್ರಮಗಳಲ್ಲಿ ಜಾಗ್ರತಿ ಮೂಡಿಸುತ್ತಿದ್ದ ವಸಂತ್ ಈ ನೆಲದ ಶೋಷಿತರ ಪರ ಧೋರಣೆ ಕಲಾವಿದ ನೆಂಬ ಖ್ಯಾತಿಯ ವಸಂತ ಅಗಲಿಕೆ ಜಿಲ್ಲೆಯ ಸಾಂಸ್ಕೃತಿಕ ಜೀವಂತಿಕೆಗೆ ಬಹು ದೊಡ್ಡ ಕೊರಗು. ಅಕ್ಷರ ವಾಣಿ, ಅಕ್ಷರ ದಾನದಂತಹ ಸಾಕ್ಷರತಾ ಆಂದೋಲನದಲ್ಲಿ ಭಾರತಿಯ ಜನಕಲಾ ಸಮಿತಿ (ಇಷ್ಟಾ ಕಲಾತಂಡ) ಮುಖ್ಯ ಕಲಾವಿದನಾಗಿ ಡಾ.ಸಿದ್ದನಗೌಡ ಪಾಟೀಲ.ಐ.ಎ ಲೋಕಾಪುರ.ಕೆ.ಎಲ್, ಪೂಜಾರ್, ಗ್ಯಾರಂಟಿ ರಾಮಣ್ಣ ನಂಥರವರ ಗರಡಿಯಲ್ಲಿ ಪಳಗಿದ ಗಟ್ಟಿಧ್ವನಿ ಕಲಾವಿದ ಗಾಯಕ ನೆನೆಸಿಕೊಂಡು ಮಹಿಳಾ, ಶೋಷಣೆ, ದೌರ್ಜನ್ಯ ವಿರೋಧಿ ಪರ ಹೋರಾಟದ ಹಾಡುಗಳ ಮೂಲಕ ಜನರನ್ನು ಎಚ್ಚರಿಸುವ ಹಲವಾರು ಸಮಾವೇಶ, ಧರಣಿ ಸತ್ಯಾಗ್ರಹಗಳಲ್ಲಿ ವಸಂತ್ ತನ್ನ ಹಾಡಿನ ಮೂಲಕವೇ ನೋವುಂಡವರ ಪರ ಪ್ರತಿಭಟಿಸುವ ಗುಣ ಆತನದ್ದು. ತನ್ನ ಸಾಮಾಜಿಕ ಜವಾಬ್ದಾರಿ ಮುಗಿಸಿ ಹಾಡು ನಿಲ್ಲಿಸಿದ ಆತನ ನಿಧನ ಜಿಲ್ಲೆಯ ಹೋರಾಟ, ಸಾಂಸ್ಕೃತಿಕ ರಂಗದ ಬಹು ದೊಡ್ಡ ನೋವು ಎನ್ನಬಹುದು.ಜಿಲ್ಲೆ ಮತ್ತು ರಾಜ್ಯದ ಅಪಾರ ಎಲ್ಲಾ ಕಲಾವಿದರೂ ಕಲಾಸಕ್ತರು, ಅಗಲಿದ ಹಾಡು ನಿಲ್ಲಿಸಿ ನೈಪುಣ್ಯಕ್ಕೆ ಸೇರಿದ ಗೆಳೆಯ ವಸಂತನಿಗೆ ಹೃದಯ ತುಂಬಿ ಭಾವಪೂರ್ಣ ನೆನಪಿನ ಅಶೃತರ್ಫಣೆ. ಸೆ.23 ರ ಬೆಳಿಗ್ಗೆ 11.30ಕ್ಕೆ ಹರಿಹರ ಹೈಸ್ಕೂಲ್ ಮೈದಾನದಲ್ಲಿ ಇರುವ ಅಂಬೇಡ್ಕರ್ ಭವನದಲ್ಲಿ ಭಾರತೀಯ ಜನಕಲಾ ಸಮಿತಿ (ಇಪ್ಪಾ) ದಾವಣಗೆರೆ, ತುಂಗಭದ್ರಾ ಕಲಾ ತಂಡ ಹರಿಹರ ಹಾಗೂ ವಸಂತ್ ಆಪ್ತ ಗೆಳೆಯರ ಸಹಯೋಗದಲ್ಲಿ “ಅಗಲಿದ ಕಲಾವಿದ, ಗಾಯಕ ವಸಂತ್ ಕುಮಾರ್ ನೆನಪಿನಾರ್ಥ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಈ ಅರ್ಥಪೂರ್ಣ ಭಾವಪೂರ್ಣ ಶ್ರದ್ಧಾಂಜಲಿ ನಮನ ಕಾರ್ಯಕ್ರಮ ಕ್ಕೆ ಜಿಲ್ಲೆಯ ಸಾಂಸ್ಕೃತಿಕ ರಂಗದ ಎಲ್ಲಾ ಒಡನಾಡಿ ಗಳು ಆತ್ಮೀಯರು ಆಗಮಿಸಿ ಈ ನುಡಿ ನಮನ ಯಾಶಸ್ವಿಗೋಳಿಸಲು ಕೋರಿದೆ.