ಹಾಡಿನಿಂದ  ಬದಕು ಬದಲು ಇದಕ್ಕಿಂತ ಸಾರ್ಥಕತೆ ಇನ್ನೇನಿದೆ…..

” ವೃದ್ದಾಶ್ರಮದಿಂದ ತಾಯಿಯನ್ನು ಮನೆಗೆ ಕರೆದುಕೊಂಡು ಬಂದ ಮಕ್ಕಳು, ಬಣ್ಧದ ಕಾರಣಕ್ಕೆ ಹತ್ತಿರವೂ ಸೇರಿದ ಹೆಂಡತಿ ಜೊತೆ ಸೇರಿ ಗರ್ಭಿಣಿಯಾದದ್ದು‌.ಈ ಎರಡು ಘಟನೆ ಉದಾಹರಣೆ  ಅಷ್ಟೇ..” ..

ಇಂತಹ ಅದೆಷ್ಟೋ ಉದಾಹರಣೆಗಳು ಕಣ್ಣಮುಂದೆ ಇವೆ.

ಅಂತಹ ಶಕ್ತಿ ಹಾಡಿಗೆ ಎನ್ನುವುದು ಜೀವನದ ಸಾರ್ಥಕ ಭಾವ ಎಂದು‌ ಮಾತಿಗಿಳಿದರು ಹಿರಿಯ ಚಿತ್ರಸಾಹಿತಿ ನಿರ್ದೇಶಕ ಕವಿರತ್ನ ಡಾ. ನಾಗೇಂದ್ರ ಪ್ರಸಾದ್.

ಬ್ರಹ್ಮ,ವಿಷ್ಣು, ಶಿವ ಎದೆ ಹಾಲು ಕುಡಿದರು ಹಾಡು ನೋಡಿ ಮಕ್ಕಳು ವೃದ್ದಾಶ್ರಮದಿಂದ ಮನೆಗೆ ಕರೆದುಕೊಂಡು ಬಂದರು ಎಂದು‌ ಅಜ್ಜಿಯೊಬ್ಬರ ಮಾತು . ಬಣ್ಣದ ಕಾರಣದಿಂದ ಎರಡು ವರ್ಷ ಹತ್ತಿರವೂ ಬಿಟ್ಟುಕೊಳ್ಳದ ಹೆಂಡತಿ ಕರಿಯ  ಐ ಲವ್ ಯೂ ಹಾಡು ಕೇಳಿ   ಜೊತೆ ಸೇರಿದ್ದು ಗರ್ಭಿಣಿಯಾದದ ವಿಷಯ ಕೇಳಿ ಮನಸ್ಸು ತುಂಬಿ‌ ಬಂತು.

ನೀನೇ ಶಾಮ.. ನೀನೇ ಭಾಮ.. ಅಪ್ಪ ಐ ಲವ್ ಯೂ ಸೇರಿದಂತೆ ಅನೇಕ ಹಾಡುಗಳು ಸಾಮಾಜಿಕ‌‌ ಬದಲಾವಣೆಗೆ ಕಾರಣವಾಗಿದೆ. ಪ್ರೀತಿ ಪ್ರೇಮದ ಹಾಡುಗಳು‌ ಮನಸ್ಸಿಗೆ ಮುದ ನೀಡಿದರೆ ಸಾಮಾಜಿಕ‌ ಕಳಕಳಿಯ ಹಾಡು ಸಮಾಜವನ್ನು ಬದಲಾಣೆ ಮಾಡಿವೆ. ಜೀವನದಲ್ಲಿ ಇದಕ್ಕಿಂತ ಸಾರ್ಥಕತೆ ಇನ್ನೇನು ಬೇಕು ಎಂದು ನೆಮ್ಮದಿಯ ನಿಟ್ಟಿಸಿರು ಬಿಟ್ಟರು.

ಚಿತ್ರ ಜೀವನ ಆರಂಭಿಸಿ 25 ವರ್ಷದ ಸಂಭ್ರಮದಲ್ಲಿರುವ  ಡಾ. ನಾಗೇಂದ್ರ ಪ್ರಸಾದ್ , “ಕೃಷ್ಣಾವತಾರ”  ಚಿತ್ರದ ಶೀರ್ಷಿಕೆ ಬಿಡುಗಡೆ ವೇಳೆ ಮಾತಿಗೆ ಸಿಕ್ಕ  ತಾವು ಬರೆದ ಹಾಡುಗಳಿಂದ ಸಮಾಜದಲ್ಲಿ ಬದಲಾದ ಸಂಗತಿಗಳನ್ನು ಒಂದೊಂದೇ ಬಿಚ್ಚಿಟ್ಟರು.

ಅನೇ‌ಕ‌ ಮಂದಿ ಕವನ ಬರೆದಿದ್ದೇವೆ ನಿಮಗೆ ಕಳುಹಿಸಬೇಕು ಅಂದವರಿದ್ದಾರೆ. ಎದುರಿಗೆ ಸಿಕ್ಕಾಗ ಕೊಡಿ ಎನ್ನುತ್ತೇನೆ. ಯಾವುದೇ ಗೀತೆಯಲ್ಲಿ ಒಂದೆರಡು ಪದಗಳು ಇಲ್ಲದೆ ಅದರ ಶೇಡ್ ಇರುತ್ತದೆ.  ನನ್ನದೇ ಆದೆ ಹಾಡು ಎಂದು ವಾದ ಮಾಡಿದ ಉದಾಹರಣೆ ಇದೆ ಹೀಗಾಗಿ ಯಾರದೇ ಕವನ ನೋಡುವ ಗೋಜಿಗೆ ಹೋಗುವುದಿಲ್ಲ ಅಂತಹ  ಬೌದ್ದಿಕ ದಾರಿದ್ಯವೂ ಬಂದಿಲ್ಲ ಎಂದರು.

ಕಥೆಗಾರರಿಗೆ ಸಿಗಲಿ ರಾಯಲ್ಟಿ

ಹಾಡುಗಳನ್ನು  ವಿವಿದ ವೇದಿಕೆಯಲ್ಲಿ‌ ಪಸ್ತುತ ಪಡಿಸಿದರೆ ಗೀತರಚನೆಕಾರಿಗೆ ನೀಡುವ ಗೌರವಧನದ ಮಾದರಿಯಲ್ಲಿ ಚಿತ್ರವೊಂದು ಟಿವಿ ಅಥವಾ ಒಟಿಟಿಯಲ್ಲಿ ಪ್ರದರ್ಶನ ಕಂಡರೆ ಸಂಭಾಷಣೆಕಾರರು ಮತ್ತು ಕಥೆಗಾರರಿಗೂ ಗೌರವಧನ ಸಿಗಬೇಕು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದರು ಡಾ.‌ನಾಗೇಂದ್ರ ಪ್ರಸಾದ್.

ನಾನೂ ಸೇರಿದಂತೆ ತೆಲುಗು, ತಮಿಳಿನ ಒಂದಷ್ಟು ರಚನೆಕಾರರು ಕೇಂದ್ರದ ಪ್ರಸಾರ ಸಚಿವಾಲಯಕ್ಕೆ ಪತ್ರ ಬರೆದು ಸಂಭಾಷಣೆಕಾರರು ಮತ್ತು ಕಥೆಗಾರರಿಗೂ ಗೌರವ ಧನ ನೀಡುವಂತೆ ಮನವಿ‌ ಮಾಡಿದ್ದೇವೆ ಎಂದರು.

ನನ್ನ ಅಗ್ನಿಮೆಂಟ್ ಅಂತಿಮ

ನಿರ್ಮಾಪಕರು ಆಡಿಯೋ ಕಂಪನಿಗಳಿಗೆ ಹಾಡು ಮಾರಾಟ ಮಾಡಿದರೆ ಮುಗಿಯಿತು.ಗೀತರಚನೆಕಾರಿಗೆ ಗೌರವ ಧ‌ನ‌ ಬರುವುದಿಲ್ಲ.‌ಇದೇ ಕಾರಣಕ್ಕೆ ಕಾಪಿ ರೈಟ್ ಕಾನೂನು ಅಧ್ಯಯನ ಮಾಡಿ ಪ್ರತಿಷ್ಠಿತ ವಕೀಲರ ಮೂಲಕ ನನ್ನದೇ ಆದ  ಅಗ್ರಿಮೆಂಟ್ ರೆಡಿ‌ ಮಾಡಿದ್ದೇನೆ. ನಿರ್ಮಾಪಕರು ನಮ್ಮ ಬಳಿ‌ ಸಹಿ ಹಾಕಿಸಿಕೊಳ್ಳಲು ಬಂದಾಗ ನನ್ನ ಅಗ್ರಿಮೆಂಟ್ ಗೆ ಸಹಿ ಹಾಕಿಸಿಕೊಳ್ಳುತ್ತೇನೆ. ನನ್ನ ಅಗ್ರಿಮೆಂಟ್ ಅಂತಿಮ‌ ಎಂದರು‌ ಡಾ. ನಾಗೇಂದ್ರ ಪ್ರಸಾದ್.

ಐಪಿಆರ್ ಎಸ್ ಕಾಯ್ದೆ ಪ್ರಕಾರ ಹಾಡು ಪ್ರಸಾರವಾದರೆ ಪ್ರತಿ ಹಾಡಿಗೆ ಬರುವ ಗೌರವ ಧನದಲ್ಲಿ ಶೇ.50 ರಷ್ಟು ಆಡಿಯೋ ಕಂಪನಿ, ತಲಾ ಶೇ.25 ರಷ್ಟು ಗೀತ ರಚನೆಕಾರರು ಮತ್ತು ಸಂಗೀತ‌ ನಿರ್ದೇಶಕರಿಗೆ ಬರಬೇಕು. ನಮಗೆ ಗೊತ್ತಿರುವುದು ಮೂರು ನಾಲ್ಕು ವೇದಿಕೆಗಳಷ್ಟೆ ಗೊತ್ತಿಲ್ಲದೆ ನೂರಾರರು ವೇದಿಕೆಯಿಂದ ಹಣ ಬರುತ್ತದೆ ಎಂದರು. ಹೇಳಿದರು

ರಿಮೇಕ್ ಯುಗ ಮುಗಿಯಿತೇ..

‌ಡಬ್ಬಿಂಗ್ ಕಾಲ ಆರಂಭವಾಗಿ ರಿಮೇಕ್ ಮಾಡುವ ಕಾಲ ಅಂತ್ಯವಾಯಿತೇ ಎನ್ನುವ ಪ್ರಶ್ನೆ ಎದುರಾಗಿದೆ.

ನೂರಾರು ಚಿತ್ರಗಳ ಡಬ್ಬಿಂಗ್ ಚಿತ್ರಗಳನ್ನು ಕನ್ನಡಕ್ಕೆ ಮಾಡುವ  ಕೈ ತುಂಬ ಕೆಲಸ  ನಾಗೇಂದ್ರ ಪ್ರಸಾದ್ ಅವರ ಕೈಯಲ್ಲಿದೆ. ಪರ‌ಭಾಷೆಯ ಚಿತ್ರಗಳನ್ನು ಕನ್ನಡಕ್ಕೆ‌ ಡಬ್ ಮಾಡುವುದು ಮತ್ತು ಅದರ ಸಾಹಿತ್ಯ ರಚನೆ, ಸ್ಥಳೀಯ ‌ಗಾಯಕರಿಂದ ಹಾಡಿಸಿ ಅವರಿಗೂ ಕೆಲಸ‌ ಕೊಡಿಸುವ ಕೆಲಸದಲ್ಲಿ ನಿರತರಾಗಿದ್ದಾರೆ.

4 ಸಾವಿರ ಗೀತೆಗಳ ರಚನೆ

ಡಾ.ವಿ ನಾಗೇಂದ್ರ ಪ್ರಸಾದ್ ಅವರು ಇದುವರೆಗೂ ಸುಮಾರು 4 ಸಾವಿರ ಗೀತೆಗಳಿಗೆ ಸಾಹಿತ್ಯ ರಚಿಸಿದ್ದಾರೆ. ಅದರಲ್ಲಿ‌ ಮೂರು ಸಾವಿರ ಗೀತೆಗಳು ಕನ್ನಡದ ಚಿತ್ರಗಳದ್ದೇ ಆಗಿದೆ.

ಸುಮಾರು‌ 500ಕ್ಕೂ ಹೆಚ್ಚು ಹಾಡುಗಳು  ಪರಭಾಷೆಯಿಂದ‌ ಕನ್ನಡಕ್ಕೆ ಭಾಷಾಂತರ ಮಾಡಿರುವುದು, ಇಲ್ಲಿನ‌ ಸೊಗಡಿಗೆ ‌ತಕ್ಕಂತೆ ರಚಿಸಿರುವ ಹಾಡುಗಳಿವೆ. ಅಲ್ಲದೆ ನೂರುಕ್ಕೂ ಅಧಿಕ ಧಾರಾವಾಹಿಗಳಿಗೆ ಶೀರ್ಷಿಕೆ ಗೀತೆ ಬರೆದಿದ್ದಾರೆ.