ಹೈದರಾಬಾದ್,ಜು.೨೭-ಇತ್ತೀಚೆಗೆ ಹೈದರಾಬಾದ್‌ನಲ್ಲಿ ಜರುಗಿದ ಬ್ರೋ ಸಿನಿಮಾ ಪ್ರೀ ರಿಲೀಸ್ ಇವೆಂಟ್ ಕಾರ್ಯಕ್ರಮದಲ್ಲಿ ಪ್ರಿಯಾ ಪ್ರಕಾಶ್ ಕೂಡಾ ಹಾಜರಿದ್ದರು. ಕಾರ್ಯಕ್ರಮದಲ್ಲಿ ಗಮನ ಸೆಳೆದದ್ದು ಆಕೆಯ ಸೀರೆ.ಕಾರ್ಯಕ್ರಮದಲ್ಲಿ ಪ್ರಿಯಾ ಪ್ರಕಾಶ್ ಹಾಟ್ ಲುಕ್‌ನಲ್ಲಿ ಕಾಣಿಸಿಕೊಂಡರು. ಪಾರದರ್ಶಕ ಸೀರೆಗೆ ಒಪ್ಪುವ ವಿಭಿನ್ನ ಶೈಲಿಯ ರವಿಕೆ ಧರಿಸಿದ್ದರು.
ಈ ಸೀರೆಯಲ್ಲಿ ಪ್ರಿಯಾ ಪ್ರಕಾಶ್ ಬಹಳ ಹಾಟ್ ಆಗಿ ಕಾಣುತ್ತಿದ್ದರು. ಆಗ ಕಣ್ಸನ್ನೆಯಿಂದ ಫೇಮಸ್ ಆಗಿದ್ದ ಚೆಲುವೆ ಈಗ ಮಾದಕ ಲುಕ್‌ನಿಂದಲೇ ನೋಡುಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದ್ದಾರೆ.
ಬ್ರೋ ಸಿನಿಮಾ ಇದೇ ಶುಕ್ರವಾರ, ಜುಲೈ ೨೮ ರಂದು ತೆರೆ ಕಾಣುತ್ತಿದೆ. ಪ್ರೀ ರಿಲೀಸ್ ಕಾರ್ಯಕ್ರಮ ಮಂಗಳವಾರ ಜುಲೈ ೨೫ರಂದು ಹೈದರಾಬಾದ್‌ನ ಶಿಲ್ಪಕಲಾ ವೇದಿಕೆಯಲ್ಲಿ ಜರುಗಿತು.
ಪ್ರೀ ರಿಲೀಸ್ ಇವೆಂಟ್‌ನಲ್ಲಿ ಬಾಲಿವುಡ್ ನಟಿ ಊರ್ವಶಿ ರೌಟೇಲ ಕೂಡಾ ಹಾಜರಿದ್ದರು. ಬ್ರೋ ಚಿತ್ರದಲ್ಲಿ ಊರ್ವಶಿ ಸ್ಪೆಷಲ್ ಸಾಂಗ್‌ನಲ್ಲಿ ಹೆಜ್ಜೆ ಹಾಕಿದ್ದಾರೆ. ಕಪ್ಪು ಬಣ್ಣದ ಸೀರೆಯಲ್ಲಿ ಊರ್ವಶಿ ಗೊಂಬೆಯಂತೆ ಕಂಗೊಳಿಸುತ್ತಿದ್ದರು.