ಹಾಟ್ ಫೋಟೋ ಶೂಟ್ ಅನುಷ್ಕಾ ಪೋಸ್


ಮುಂಬೈ,ಡಿ೩೧-ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪತ್ನಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ವೋಗ್ ಇಂಡಿಯಾಗಾಗಿ ಮಾಡಿದ ಫೋಟೋಶೂಟ್‌ನಲ್ಲಿ ಬೇಬಿ ಬಂಪ್ ತೋರಿಸುತ್ತ ಸಕತ್ ಹಾಟ್ ಕಾಣಿಸಿಕೊಂಡಿದ್ದಾರೆ.
ಗರ್ಭಿಣಿ ಅನುಷ್ಕಾ ವೋಗ್ ಮ್ಯಾಗಜೀನ್‌ಗೆ ಪೋಸ್ ಕೊಟ್ಟಿರುವುದು ವಿಭಿನ್ನವಾಗಿ ಅಭಿಮಾನಿಗಳನ್ನು ಸೆಳೆದಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ತುಂಬು ಗರ್ಭಿಣಿ ಅನುಷ್ಕಾ ಶರ್ಮಾ ಹಾಗೂ ವಿರಾಟ್ ಅವರ ಮನೆಗೆ ಇನ್ನೇನು ಕೆಲವೇ ದಿನಗಳಲ್ಲಿ ಹೊಸ ಅತಿಥಿ ಬರಲಿದ್ದಾನೆ.
ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಅನುಷ್ಕಾ ಶರ್ಮಾ ಇನ್ನೂ ಸಹ ಫೊಟೋ ಶೂಟ್‌ಗಳಲ್ಲಿ ಬ್ಯುಸಿಯಾಗಿದ್ದಾರೆ. ತಮ್ಮ ಈ ಬೇಬಿ ಬಂಪ್ ಫೋಟೋಶೂಟ್ ಬಗ್ಗೆ ಅನುಷ್ಕಾ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಇದು ನನಗಾಗಿ ಸೆರೆ ಹಿಡಿದ ಚಿತ್ರಗಳು ಎಂದಿದ್ದಾರೆ.
ವೋಗ್ ನಿಯತಕಾಲಿಕೆಯೊಂದಿಗೆ ಮಾತನಾಡಿದ ಅವರು, ಲಾಕ್ ಡೌನ್ ಸಮಯದಲ್ಲಿ ಗರ್ಭಿಣಿಯಾಗುವ ಎಲ್ಲಾ ವಿಶ್ವಾಸವಿತ್ತು, ಆಗ ಪತಿ ಕೊಹ್ಲಿ ಅವರ ಪಕ್ಕದಲ್ಲಿದ್ದರು ಮತ್ತು ಕೊರೊನಾ ಲಾಕ್‌ಡೌನ್‌ನಿಂದಾಗಿ ಮನೆ ಬಿಟ್ಟು ಹೊರಗೆ ಕಾಣಿಸಿಕೊಳ್ಳದಿರುವುದರಿಂದ ತಾನು ಗರ್ಭಿಣಿ ಎಂಬುದು ಹೆಚ್ಚು ಜನರಿಗೆ ಗೊತ್ತಾಗಲಿಲ್ಲ ಎಂದು ಅವರು ಹೇಳಿದರು. ನಾವು ವೈದ್ಯರ ಬಳಿ ಹೋಗುತ್ತಿದ್ದಾಗ. ಯಾರೂ ಬೀದಿಗಳಲ್ಲಿ ಇರುತ್ತಿರಲೇ ಇಲ್ಲ. ಆದ್ದರಿಂದ ನಮ್ಮನ್ನು ಗುರುತಿಸಲು ಸಾಧ್ಯವಾಗಲಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.
ಇನ್ನು ಮಗುವಿನ ಕೋಣೆಯನ್ನು ಸಿದ್ದಪಡಿಸುವ ಕೆಲಸದಲ್ಲಿ ಬ್ಯುಸಿಯಾಗಿರುವುದಾಗಿ ಅನುಷ್ಕಾ ಬಹಿರಂಗಪಡಿಸಿದ್ದಾರೆ.
“ವಿರಾಟ್ ಮತ್ತು ನಾನು ಇಬ್ಬರೂ ಪ್ರಾಣಿಗಳನ್ನು ಪ್ರೀತಿಸುತ್ತೇವೆ ಮತ್ತು ನಮ್ಮ ಮಗುವಿಗೆ ಆ ಬಂಧವೂ ಇರಬೇಕೆಂದು ನಾವು ಬಯಸುತ್ತೇವೆ. ಪ್ರಾಣಿಗಳು ನಮ್ಮ ಜೀವನದ ಒಂದು ದೊಡ್ಡ ಭಾಗವಾಗಿದೆ ಮತ್ತು ಅವರು ಮಕ್ಕಳಿಗೆ ದಯೆ ಮತ್ತು ಸಹಾನುಭೂತಿಯನ್ನು ಕಲಿಸಬಹುದೆಂದು ನಾವು ನಿಜವಾಗಿಯೂ ನಂಬುತ್ತೇವೆ, ”ಎಂದು ಅವರು ಹೇಳಿದ್ದಾರೆ.