ಹಾಜಿಬಾಬಾಗೆ ಹಾಲುಮತ ಸಮಾಜದಿಂದ ಸನ್ಮಾನ

ಲಿಂಗಸುಗೂರು.ನ.೧೨-ಕಲ್ಯಾಣ ಕರ್ನಾಟಕ ರತ್ನ ಪ್ರಶಸ್ತಿ ಪಡೆದ ಸಮಾಜಸೇವಕ ಮಹ್ಮದ್ ಹಾಜಿಬಾಬಾ ಕರಡಕಲ್ ಅವರಿಗೆ ಹಾಲುಮತ ಸಮಾಜದ ಮುಖಂಡರು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಮಾಜದ ಅದ್ಯಕ್ಷರಾದ ಮಂಜುನಾಥ ಗಲಗ್, ಎಲೆಮರಿಯ ಕಾಯಿಯಂತೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಹಾಜಿಬಾಬಾರ ಸೇವೆಯನ್ನು ಪರಿಗಣಿಸಿ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ವತಿಯಿಂದ ಇತ್ತೀಚೆಗೆ ಪ್ರಶಸ್ತಿ ನೀಡಿ ಗೌರವಿಸಿರುವುದು ನಮಗೆ ಹೆಮ್ಮೆಯ ವಿಷಯ. ಬರುವ ದಿನಗಳಲ್ಲಿ ಸರಕಾರದ ಯೋಜನೆಗಳನ್ನು ಬಡವರ ಮನೆಬಾಗಿಲಿಗೆ ತಲುಪಿಸುವ ಮತ್ತು ಸಮಾಜದ ಏಳ್ಗೆಗೆ ಮುನ್ನಡೆಯುವಂತೆ ಶುಭ ಕೋರಿದರು.
ಈ ಸಂದರ್ಭದಲ್ಲಿ ವಿಜಯಕುಮಾರ ಪೂಜಾರಿ, ವಿರೇಶ ಚಿನ್ನೂರು, ಬಸವರಾಜ ಕರಡಕಲ್, ವಿರೇಶ ಭೋವಿ, ಮಂಜುನಾಥ ಜಾಲಿಬೆಂಚಿ, ನಾಗರಾಜ ಅಗಲದಾಳ ಸೇರಿ ಇತರರು ಇದ್ದರು.