ಹಾಗಲ: ಉಪಯೋಗ ಹಲವು

ರಕ್ತ ಶುದ್ಧೀಕರಣ: ರಕ್ತಕ್ಕೆ ಸಂಬಂ
ಧಿಸಿದ ಅನೇಕ ತೊಂದರೆಗಳ
ನ್ನು ನೀಗಿಸುವಲ್ಲಿ ಹಾಗಲಕಾಯಿ
ಯದು ಮೊದಲ ಸ್ಥಾನ. ಕೆಟ್ಟ ರಕ್ತದಿಂದ ಉಂಟಾಗುವ ಹುಣ್ಣು, ಚರ್ಮದ ತುರಿಕೆ ಮತ್ತು ಕೀವು ಸೋರುವುದನ್ನು ತಡೆಯುತ್ತದೆ. ನಿಂಬೆಹಣ್ಣು ಮತ್ತು ಸ್ವಲ್ಪ ಜೇನಿನೊಂದಿಗೆ ಇದನ್ನು ಸೇವಿಸುತ್ತ ಬಂದರೆ ಕ್ರಮೇಣ ರಕ್ತ ಶುದ್ಧಿಯಾಗುತ್ತದೆ. ಕಾಲರಾ, ಜಾಂಡೀಸ್‌ನಂತಹ ಅಪಾಯಕಾರಿ ರೋಗಗಳ ತಡೆಗೆ ಇದು ರಾಮಬಾಣ. ಅಷ್ಟೇ ಅಲ್ಲ, ಹುಳುಕಡ್ಡಿ ಮುಂತಾದ ಅಲರ್ಜಿ ಸಂಬಂಧಿತ ಕಾಯಿಲೆಗಳನ್ನು ಅತಿ ಬೇಗ ಗುಣಪಡಿಸುತ್ತದೆ.
ಮಧುಮೇಹ: ಕಹಿಯಾದ ಹಾಗಲಕಾಯಿಯಲ್ಲಿ ಹೈಪೊಗ್ಲೈಸ
ಮಿಕ್ ಎಂಬ ನೈಸರ್ಗಿಕ ಇನ್ಸುಲಿನ್ ರಕ್ತದಲ್ಲಿನ ಸಕ್ಕರೆ ಅಂಶ
ವನ್ನು ತಗ್ಗಿಸುವುದಲ್ಲದೆ, ರಕ್ತಕ್ಕೆ ಗ್ಲೂಕೋಸ್ ನೀಡಿ ಸಾಮರ್ಥ್ಯ ಹೆಚ್ಚುವಂತೆ ಮಾಡುತ್ತದೆ.
ರೋಗ ನಿರೋಧಕ ಶಕ್ತಿ: ಹಾಗಲಕಾಯಿಯಲ್ಲಿನ ಸತ್ವ ರಕ್ತದಲ್ಲಿನ ಕೆಲವು ಸೂಕ್ಷ್ಮಾಣು ಜೀವಿಗಳನ್ನು ಕೊಂದು ಜೀರ್ಣಕ್ರಿಯೆಗೆ ಸ್ಪಂದಿಸುವಂತೆ ಮಾಡುತ್ತದೆ. ಶಕ್ತಿಯ ಮೂಲವಾಗಿರುವ ಈ ಹಾಗಲಕಾಯಿ ರಸವನ್ನು ಸೇವಿಸಿದರೆ ತಲೆ ಸುತ್ತು ಕಡಿಮೆಯಾಗಿ, ದೈಹಿಕ ಚಟುವಟಿಕೆಗಳು ಸರಾಗವಾಗಿ ಸಾಗುವಂತೆ ಮಾಡು
ತ್ತದೆ ಮತ್ತು ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ.ಉಸಿರಾಟ ಸಂಬಂಧಿ ಕಾಯಿಲೆಗಳಾದ ಅಸ್ತಮಾ, ಗೂರಲು ಕೆಮ್ಮು ಮತ್ತು ಗಂಟಲಿನ ಸಮಸ್ಯೆಗಳಿಗೆ ಇದರ ಸೇವನೆ ಅತಿ ಶೀಘ್ರ ಪರಿಣಾಮ ಬೀರುತ್ತದೆ.
ಯಕೃತ್ ನ ಟಾನಿಕ್ : ಯಕೃತ್ ನ ಸಮಸ್ಯೆಗಳನ್ನು ಗುಣಪಡಿಸಲು ಪ್ರತಿದಿನ ಒಂದು ಲೋಟದಷ್ಟು ಹಾಗಲಯಿಯ ಜ್ಯೂಸ್ ನ್ನು ಕುಡಿಯಿರಿ. ಫಲಿತಾಂಶವನ್ನು ಮನಗಾಣಲು ಒಂದು ವಾರದವರೆಗೆ ನಿರಂತರವಾಗಿ ಕುಡಿಯಿರಿ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಸೋಂಕುಗಳ ವಿರುದ್ಧ ಹೋರಾಡಲು, ಹಾಗಲಕಾಯಿ ಗಿಡದ ಎಲೆಗಳನ್ನು ಅಥವಾ ಹಣ್ಣುಗಳನ್ನು ನೀರಿನಲ್ಲಿ ಕುಡಿಸಿ ಪ್ರತಿದಿನ ಸೇವಿಸಿರಿ. ಇದು ನಿಮ್ಮ ರೋಗನಿರೋಧಕ ಶಕ್ತಿಯ ವರ್ಧನೆಗೆ ಸಹಕಾರಿ.
ಮೊಡವೆಗಳಿಗೆ : ಹಾಗಲಕಾಯಿಯ ಸೇವನೆಯು ಮೊಡವೆಗಳ ನಿವಾರಣೆಗೆ ಸಹಕಾರಿಯಾಗಿದೆ ಮಾತ್ರವಲ್ಲದೇ ಆಳವಾದ ಚರ್ಮದ ಸೋಂಕುಗಳಿಗೂ ಶಮನಕಾರಿಯಾಗಿದೆ. ಹಾಗಲಕಾಯಿಯ ರಸವನ್ನು ನಿಂಬೆ ಹಣ್ಣಿನ ರಸದೊಂದಿಗೆ ಬೆರೆಸಿ, ಪ್ರತಿದಿನ ಖಾಲಿ ಹೊಟ್ಟೆಗೆ ೬ ತಿಂಗಳುಗಳ ಕಾಲ ಸೇವಿಸಿರಿ ಇಲ್ಲವೇ ನಿರೀಕ್ಷಿತ ಫಲಿತಾಂಶ ದೊರೆಯುವವರೆಗೆ ಸೇವನೆಯನ್ನು ಮುಂದುವರೆಸಿರಿ.
ಮಲಬದ್ಧತೆ: ಹಾಗಲಕಾಯಿಯ ನಾರಿನ ಗುಣಗಳು, ಪಚನಕ್ರಿಯೆಯಲ್ಲಿ ಸಹಕಾರಿಯಾಗಿವೆ. ಇದರಿಂದಾಗಿ ಆಹಾರವು ಸುಲಭವಾಗಿ ಪಚನವಾಗುತ್ತದೆ ಹಾಗೂ ತ್ಯಾಜ್ಯವು ಸುಲಲಿತವಾಗಿ ಹೊರ ಗೆಸೆಯಲ್ಪಡುತ್ತದೆ ಹಾಗೂ ತನ್ಮೂಲಕ ಅಜೀರ್ಣ ಹಾಗೂ ಮಲಬದ್ಧತೆಯನ್ನು ನಿವಾರಿಸುತ್ತವೆ.