ಹಾಗಲಕಾಯಿ ಪಕೋಡ

ಬೇಕಾಗುವ ಪದಾರ್ಥಗಳು:
ಹಾಗಲಕಾಯಿ – ಕಾಲು ಕೆ.ಜಿ.
ಎಣ್ಣೆ – ಕರಿಯಲು
ಅರಿಶಿನ – ೧ ಚಮಚ
ಧನಿಯಾಪುಡಿ – ೧ ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಅಚ್ಚಖಾರದಪುಡಿ – ೨ ಚಮಚ
ಹಸಿಮೆಣಸಿನಕಾಯಿ – ೬
ಕೊತ್ತಂಬರಿಸೊಪ್ಪು – ರುಚಿಗೆ ತಕ್ಕಷ್ಟು
ಗೋಧಿಹಿಟ್ಟು – ಅರ್ಧ ಲೋಟ
ಮೈದಾಹಿಟ್ಟು – ಅರ್ಧ ಲೋಟ
ಕಡ್ಲೆಹಿಟ್ಟು – ೧ ಲೋಟ
ಹುಣಸೇಪುಡಿ – ರುಚಿಗೆ ತಕ್ಕಷ್ಟು
ವಿಧಾನ: ಹಾಗಲಕಾಯಿಯನ್ನು ಚಿಕ್ಕದಾಗಿ ಹೆಚ್ಚಿ. ಅರಿಶಿನ, ಉಪ್ಪು ಹಾಕಿ ರಾತ್ರಿ ಕಲೆಸಿಟ್ಟರೆ ನೀರು ಬಂದಿರುತ್ತದೆ. ಆ ನೀರಿನಲ್ಲಿ ಕಹಿಯಂಶವೆಲ್ಲಾ ಇರುವುದರಿಂದ ಕಹಿರುಚಿ ಹೆಚ್ಚು ಆಗುವುದಿಲ್ಲ. ನೀರು ತೆಗೆದು, ಆ ಹಾಗಲಕಾಯಿ ಹೋಳುಗಳಿಗೆ ೪ ಚಮಚ ಎಣ್ಣೆ, ಅರಿಶಿನ, ಧನಿಯಾಪುಡಿ ಹಾಕಿ ಚೆನ್ನಾಗಿ ಹುರಿಯಬೇಕು. ಇದಕ್ಕೆ ಕೊಟ್ಟ ಉಳಿದ ಎಲ್ಲಾ ಪದಾರ್ಥಗಳನ್ನು ಹಾಕಿ ತಕ್ಕಷ್ಟು ನೀರುಹಾಕಿ, ಕಲೆಸಿ ಉಂಡೆಮಾಡಿ ಎಣ್ಣೆಯಲ್ಲಿ ಕರಿದಾಗ ಪಕೋಡ ತಯಾರಾಗುತ್ತದೆ.