ಹಾಗರಗುಂಡಗಿ : ಜಾತ್ರೆ ರದ್ದು

ಕಲಬುರಗಿ,(ಫರಹತಾಬಾದ),ಏ.29- ತಾಲೂಕಿನ ಸುಕ್ಷೇತ್ರ ಹಾಗರಗುಂಡಗಿ ಗ್ರಾಮದ ಇದೇ ಮೇ-1 ರಂದು ಶನಿವಾರ ನಡೆಯಬೆಕಿಂದ ಶ್ರೀ ಶರಣಬಸವೇಶ್ವರರ ಜಾತ್ರೆ ಜಾತ್ರೆಯನ್ನು ರದ್ದು ಪಡಿಸಲಾಗಿದೆ.
ಕೋವಿಡ್-19 ಎರಡನೆ ಸೋಂಕು ತಡೆಗಟ್ಟಲು ಸರ್ಕಾರ ಜಾರಿಮಾಡಿದ ಆದೇಶದಂತೆ ಈ ವರ್ಷದ ಜಾತ್ರೆಯನ್ನು ರದ್ದು ಪಡಿಸಲಾಗಿದೆ. ಎಂದು ಪೂಜ್ಯ .ಶಿವಾನಂದ ಮಹಾಸ್ವಾಮಿಗಳು ತಿಳಿಸಿದ್ದಾರೆ. ಭಕ್ತರು ತಮ್ಮ ತಮ್ಮ ಮನೆಗಳಲ್ಲಿ ಇದ್ದುಕೊಂಡು ಶರಣಬಸವೇಶ್ವರರನ್ನು ಸ್ಮರಿಸಿಪೂಜಿಸುವಂತೆ ಕರೆ ನೀಡಿದ್ದಾರೆ.