ಹಾಕಿ ಪಂದ್ಯಾವಳಿಗೆ ಚಾಲನೆ

ಗದಗ,ಡಿ8: ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದ ಹಾಕಿ ಕ್ರೀಡಾಪಟುಗಳನ್ನು ನೀಡಿದ ಜಿಲ್ಲೆ ಗದಗ ಜಿಲ್ಲೆಯಾಗಿದೆ. ಇಲ್ಲಿನ ಮಕ್ಕಳಲ್ಲಿ ಹಾಕಿ ಕ್ರೀಡಾ ಆಸಕ್ತಿ ಅಧಿಕವಾಗಿರುವುದೇ ಹೆಚ್ಚು ಹೆಚ್ಚು ಕ್ರೀಡಾ ಪಟುಗಳು ಹೊರಬರಲು ಸಾಧ್ಯವಾಗಿದೆ ಎಂದು ಜಿಲ್ಲಾಧಿಕಾರಿ ವೈಶಾಲಿ ಎಂ ಎಲ್ ಅವರು ಹೇಳಿದರು.

ಗದಗ-ಬೆಟಗೇರಿ ಗಾಂಧಿ ನಗರದ ಮಹಾತ್ಮಾ ಗಾಂಧಿ ಹಾಕಿ ಕ್ರೀಡಾಂಗಣದಲ್ಲಿ ಪದವಿ ಪೂರ್ವ ಶಾಲಾ ಶಿಕ್ಷಣ ಇಲಾಖೆ, ಬೆಂಗಳೂರು ಉಪನಿರ್ದೇಶಕರು ಶಾಲಾ ಶಿಕ್ಷಣ ಇಲಾಖೆ ( ಪದವಿ ಪೂರ್ವ) , ಗದಗ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘ (ರಿ) ಗದಗ ಕರ್ನಾಟಕ ರಾಜ್ಯ ಪದವಿ ಪೂರ್ವ ಮಹಾವಿದ್ಯಾಲಯಗಳ ನೌಕರರ ಸಂಘ ಧಾರವಾಡ, ಜಿಲ್ಲಾ ಘಟಕ ಗದಗ ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘ, ಜಿಲ್ಲಾ ಘಟಕ, ದೈಹಿಕ ಶಿಕ್ಷಣ ಉಪನ್ಯಾಸಕರ ಸಂಘ ಜಿಲ್ಲಾ ಘಟಕ ಹಾಗೂ ಹನುಮಾನ ಬ್ಲೆಸಿಂಗ್ಸ್ ಸ್ಪೋಟ್ರ್ಸ ಕ್ಲಬ್ ಬೆಟಗೇರಿ ಗದಗ ಇವರುಗಳ ಆಶ್ರಯದಲ್ಲಿ ಗುರುವಾರ ಸಂಜೆ ಏರ್ಪಡಿಸಲಾದ ರಾಜ್ಯ ಮಟ್ಟದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಹಾಕಿ ಪಂದ್ಯಾವಳಿಯ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ ಅತ್ಯಾಧುನಿಕ ಟರ್ಪ ಹಾಕಿ ಕ್ರೀಡಾಂಗಣ ಇರುವುದು ನಾಲ್ಕುಕಡೆ ಮಾತ್ರ. ಅದರಲ್ಲಿ ಗದಗ ಸಹ ಒಂದು. 9.5 ಕೋಟಿ ಅನುದಾನದಲ್ಲಿ ಸುಸಜ್ಜಿತ ಹಾಕಿ ಮೈದಾನ ನಿರ್ಮಾಣ ಮಾಡಲಾಗಿದೆ. ಇತ್ತೀಚೆಗೆ ಈ ಹಾಕಿ ಕ್ರೀಡಾಂಗಣವನ್ನು ಕ್ರೀಡಾ ಸಚಿವರಾದ ನಾಗೇಂದ್ರ ಬಿ, ಸಮಾಜ ಕಲ್ಯಾಣ ಸಚಿವರಾದ ಎಚ್. ಸಿ. ಮಹದೇವಪ್ಪ, ರಾಜ್ಯದ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಕೆ.ಪಾಟೀಲ ಅವರುಗಳು ಲೋಕಾರ್ಪಣೆ ಮಾಡಿದ್ದಾರೆ. ಸರ್ಕಾರ ಕ್ರೀಡಾ ಪಟುಗಳಿಗೆ ಉತ್ತಮ ಪೆÇ್ರೀತ್ಸಾಹ ಸೌಲಭ್ಯಗಳನ್ನು ನೀಡುತ್ತಿದೆ. ಇದಕ್ಕೆ ಗದಗ ಹಾಕಿ ಕ್ರೀಡಾಂಗಣ ಉತ್ತಮ ತಾಜಾ ಉದಾಹರಣೆಗೆ ಆಗಿದೆ ಎಂದರು.

ಕ್ರೀಡಾ ಕ್ಷೇತ್ರದಲ್ಲಿ ಗದಗ ಜಿಲ್ಲೆ ಉತ್ತಮ ಸಾಧನೆ ತೋರಿದೆ. ಇಂತಹ ಜಿಲ್ಲೆಗೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಹಾಕಿ ಕ್ರೀಡೆ ಆಡಲು ಆಗಮಿಸಿದ ಎಲ್ಲ ಮಕ್ಕಳು ಸಹ ಉತ್ಸಾಹ ಹಾಗೂ ಕ್ರೀಡಾ ಮನೋಭಾವನೆ ಯಿಂದ ಆಟ ಆಡಬೇಕು. ಆಟದಲ್ಲಿ ಸೋಲು ಗಲವು ಸಾಮಾನ್ಯ ಎಂಬುದು ಎಲ್ಲರು ಅರಿತು, ಕ್ರೀಡಾ ಸ್ಪೂರ್ತಿ ಮೆರೆಯಬೇಕು ಎಂದು ಕ್ರೀಡಾಪಟುಗಳಿಗೆ ಕಿವಿಮಾತು ತಿಳಿಸಿದರು.

ಮುಖ್ಯಾತಿಥಿಗಳಾಗಿ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಶರಣು ಗೋಗೆರಿ, ಎಂ.ಸಿ.ಕಟ್ಟಿಮನಿ, ವೈ.ಜಿ.ಗಡಾದ, ರಮೇಶ ಗಂಗಾಪುತ್ರ, ವೈ.ಬಿ.ಕೊರವರ, ಮಂಜುನಾಥ ಬಗಾಡೆ, ಅಶೋಕ ಅಂಗಡಿ, ಚಂದ್ರ ನಾಯ್ಕ, ವಾಸು ಕಲಕಂಬಿ ಸೇರಿದಂತೆ ಮತ್ತಿತರು ಇದ್ದರು.

ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಡಾ. ಕೃಷ್ಣಪ್ಪ ಪಿ ಪ್ರಾಸ್ತಾವಿಕ ಮಾತನಾಡಿದರು. ಪ್ರಾಚಾರ್ಯ ವೈ.ಸಿ.ಪಾಟೀಲ ಸ್ವಾಗತಿಸಿದರು. ಕುಮಾರಿ ಸೌಜನ್ಯ ಹಾಗೂ ಸಂಗಡಿಗರು ನಾಡಗೀತೆ ಹಾಡಿದರು.