ಹಾಕಿ ತೀರ್ಪುಗಾರ್ತಿ ಇನ್ನಿಲ್ಲ

ಮಡಿಕೇರಿ:ಏ:18:ನಾಡಿನ ಹೆಸರಾಂತ ಹಾಕಿ ತೀರ್ಪುಗಾರ್ತಿ ಪುಚ್ಚಿಮಂಡ ಅನುಪಮ ಇನ್ನಿಲ್ಲ.ದೇಶದ ಮೊದಲ ಅಂತರರಾಷ್ಟ್ರೀಯ ಮಹಿಳಾ ಹಾಕಿ ತೀರ್ಪುಗಾರ್ತಿ ಎಂಬ ಹಿರಿಮೆ ಹೊಂದಿದ್ದರು ಅನುಪಮರವರ ನಿಧನ ನಾಡಿನ ಹಾಕಿ ಪ್ರೇಮಿಗಳ ದಿಗ್ಭ್ರಮೆಯಾಗಿದೆ. ಅನೇಕ ಅಂತರರಾಷ್ಟ್ರೀಯ ಹಾಕಿ ಪಂದ್ಯಾವಳಿಯಲ್ಲಿ ಅನುಪಮ ತೀರ್ಪುಗಾರ್ತಿ ಆಗಿ ಕೊಡಗಿಗೆ ಖ್ಯಾತಿ ತಂದಿದ್ದ ಇವರು ವಿಧಿವಶರಾಗಿದ್ದಾರೆ.