ಹಾಉಸಸಂಘ-ಅಧ್ಯಕ್ಷರಾಗಿ ಪವಿತ್ರ ಉಪಾಧ್ಯಕ್ಷರಾಗಿ ನಾಗರಾಜ್ ಆಯ್ಕೆ

ರಾಮನಗರ.ಮಾ೨೪:ಅಂಕನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ನಡೆದ ಅಧ್ಯಕ್ಷರ ಚುನಾವಣೆಯಲ್ಲಿ ಸಂಘದ ನೂತನ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಪವಿತ್ರ ಮಹೇಶ್ ಉಪಾಧ್ಯಕ್ಷರಾಗಿ ಡಿ. ನಾಗರಾಜ್ ಆಯ್ಕೆಯಾದರು.
ಒಟ್ಟು ೧೩ ಸದಸ್ಯರ ಸಂಘದಲ್ಲಿ ಜೆಡಿಎಸ್ ೭, ಕಾಂಗ್ರೆಸ್ ಬೆಂಬಲಿತ ೬ ಸದಸ್ಯರಿದ್ದರು. ಜೆಡಿಎಸ್ ಕಾಂಗ್ರೆಸ್ ನಡುವೆ ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಟ್ಟು ಒಂದು ಸದಸ್ಯರ ಮೇಲೆಗೈ ಹೊಂದಿದ್ದ ಜೆಡಿಎಸ್ ಅಭ್ಯರ್ಥಿ ಪವಿತ್ರ ಮಹೇಶ್ ಅಧ್ಯಕ್ಷ ಹುದ್ದೆಗೆ ಆಯ್ಕೆಯಾದರು. ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ದಿಸಿದ ನಾಗರಾಜು ತಮ್ಮ ಪ್ರತಿ ಸ್ಪರ್ಧೆಗಿಂತ ಎರಡು ಮತಗಳ ಹೆಚ್ಚಿಗೆ ಪಡೆದು ಆಯ್ಕೆಯಾದರು.
ಜೆಡಿಎಸ್ ಪಕ್ಷದ ಮುಖಂಡರಾದ ಕಾರ್ಯಕರ್ತರು ಸಂಘದ ಆವರಣದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿ ವಿಜೇತರಾದ ನೂತನ ಅಧ್ಯಕ್ಷ ಉಪಾಧ್ಯಕ್ಷರಿಗೆ ಪುಷ್ಪ ಆಹಾರ ಹಾಕಿ ಅಭಿನಂದಿಸಿದರು.
ಚುನಾವಣೆ ಅಧಿಕಾರಿಯಾಗಿ ಎಸ್ ಸುಭಾಷಿಣಿ ಕರ್ತವ್ಯ ನಿರ್ವಹಿಸಿದರು. ಬಿಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಪಿ. ಅಶ್ವಥ್, ಕೆಂಗಲ್ ಆಂಜನೇಯ ವಿದ್ಯಾ ಸಂಸ್ಥೆಯ ಅಧ್ಯಕ್ಷ ಶಿವಲಿಂಗಯ್ಯ, ಜೆಡಿಎಸ್ ಮುಖಂಡ ಮಹೇಶ್, ಜಿ . ಶಿವಕುಮಾರ್ ಚೆನ್ನಂಕೇಗೌಡ, ಗಿರೀಶ್ ಕರಿಯಪ್ಪ ಸೇರಿದಂತೆ ಹಲವಾರು ಉಪಸ್ಥಿತರಿದ್ದರು.