ಹಸ್ತದ ಗುರುತು ಹೇರ್ ಕಟಿಂಗ್ ಮಾಡಿಸಿಕೊಂಡ ಕೈ ಅಭಿಮಾನಿ

ಚಾಮರಾಜನಗರ, ಮೇ.15:- ಚುನಾವಣೆ ಮುಗಿದರೂ ಕಾವು ಇನ್ನೂ ಕೂಡ ಬಿಸಿಲಿನ ಬೇಗೆಗಿಂತ ಹೆಚ್ಚು ರಾಜಕೀಯದ ತಾಪವಿದ್ದು ಗುಂಡ್ಲುಪೇಟೆಯಲ್ಲಿ ಕಾಂಗ್ರೆಸ್ ಜಯಶಾಲಿಯಾಗಿದ್ದಕ್ಕೆ ಕೈ ಅಭಿಮಾನಿ ಹಸ್ತದ ಗುರುತಿನ ಹೇರ್ ಕಟಿಂಗ್ ಮಾಡಿಸಿಕೊಂಡಿದ್ದಾರೆ.
ಗುಂಡ್ಲುಪೇಟೆ ತಾಲೂಕಿನ ಅರೇಪುರ ಗ್ರಾಮದ ಜಿ.ಮೂರ್ತಿ ಎಂಬವರು ಗಣೇಶ್ ಪ್ರಸಾದ್ ಅಭಿಮಾನಿಯಾಗಿದ್ದು ಕಾಂಗ್ರೆಸ್ ನ ಕಟ್ಟಾ ಬೆಂಬಲಿಗರಾಗಿದ್ದಾರೆ. ಮೊದಲ ಸ್ಪರ್ಧೆಯಲ್ಲೇ ಗಣೇಶ್ ಪ್ರಸಾದ್ ಗೆಲುವು ಕಂಡ ಹಿನ್ನೆಲೆಯಲ್ಲಿ ಹರ್ಷಗೊಂಡಿರುವ ಮೂರ್ತಿ ಹಸ್ತದ ಗುರುತಿನ ಹೇರ್ ಕಟಿಂಗ್ ಮಾಡಿಸಿಕೊಂಡು ವಿಶೇಷ ಅಭಿಮಾನ ಮೆರೆದಿದ್ದಾರೆ.
ಗ್ರಾಮದಲ್ಲಿ ಹಾಗೂ ಅವರು ಹೋದಡೆಯಲ್ಲೆಲ್ಲಾ ಹಸ್ತದ ಗುರುತಿನ ಹೇರ್ ಕಟಿಂಗ್ ಗಮನ ಸೆಳೆಯುತ್ತಿದೆ.