ಹಸು ಕೊಂದು ಹಾಕಿದ ಚಿರತೆ !

ಗಂಗಾವತಿ ನ 16 : ಹಸುವಿನ ಮೇಲೆ ಚಿರತೆ ದಾಳಿ ಮಾಡಿ ಕೊಂದು ಹಾಕಿದ ಘಟನೆ ತಾಲೂಕಿನ ಆನೆಗೊಂದಿ ಸಮೀಪ ಸೋಮವಾರ ನಡೆದಿದೆ.
ಮೇಗೋಟ ಶ್ರೀ ಆದಿಶಕ್ತಿ ದೇವಸ್ಥಾನದ ಗೋಶಾಲೆಗೆ ಸೇರಿದ ಆಕಳು.
ಸೋಮವಾರ ಬೆಳಗ್ಗೆ ಎಂದಿನಂತೆ ಹಸು ಮೇಗೋಟ ಬೆಟ್ಟದ ಕಡೆ ಮೇಯಲು ಹೋದಾಗ ಈ ಘಟನೆ ನಡೆದಿದೆ.
ಇತ್ತೀಚೆಗೆ ಈ ದೇಗುಲದ ಅಡುಗೆ ಭಟ್ಟನನ್ನು ಚಿರತೆ ಕೊಂದು ಹಾಕಿತ್ತು.
ಈಗಾಗಲೇ ಅರಣ್ಯ ಇಲಾಖೆ ಸಿಬ್ಬಂದಿ, ಚಿರತೆ ಸೆರೆಗೆ ವಿಶೇಷ ಕಾರ್ಯಾಚರಣೆ ನಡೆಸಿದೆ. ಆದರೆ, ಯಾವುದೇ ಪ್ರಯೋಜನೆವಾಗಿಲ್ಲ.

ಸಂಜೆವಾಣಿ ಪ್ರತಿನಿಧಿಯೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಗಂಗಾವತಿ ವಲಯ ಅರಣ್ಯ ಇಲಾಖೆಯ ಆರ್ ಎಫ್ ಓ ಶಿವರಾಜ್ , ಸೋಮವಾರ ಬೆಳಗ್ಗೆ 11ಗಂಟೆಗೆ ಹಸುವಿನ ಮೇಲೆ ಚಿರತೆ ದಾಳಿ ಮಾಡಿದ ಬಗ್ಗೆ ಮಾಹಿತಿ ಇದೆ. ಹಸುವಿನ ಮೇಲೆ ದಾಳಿ ಮಾಡಿದ ಸ್ಥಳದಲ್ಲಿಯೇ ಬೋನ್ ಇಟ್ಟಿದ್ದು, ರಾತ್ರಿ ವೇಳೆ ಚಿರತೆ ಹೊರಗೆ ಬರುವ ಸಾಧ್ಯತೆ ಇದೆ.
ಈಗಾಗಲೇ ಚಿರತೆ ಸೆರೆಗೆ ವಿವಿಧೆಡೆ ಬೋನ್, ಸಿಸಿ ಕ್ಯಾಮೆರಾ, ಡ್ರೋನ್ ಕ್ಯಾಮೆರಾ ಸಹ ಅಳವಡಿಸಿ ಚಿರತೆ ಚಲನವಲನ ಬಗ್ಗೆ ನಿಗಾವಹಿಸಿದೆ. ಆದಷ್ಟು ಬೇಗ ಚಿರತೆ ಹಿಡಿಯಲಾಗುವುದು ಎಂದರು.