ಹಸುಗಳ್ಳತನ ಕಳ್ಳರ ಬಂಧನ

ರಾಯಚೂರು.ಆ.25- ರಾತ್ರಿ ವೇಳೆ ಹಸು ಕಳ್ಳತನ ಮಾಡುತ್ತಿದ್ದ ಖದೀಮನೊಬ್ಬನನ್ನು ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ಗಬ್ಬೂರು ಗ್ರಾಮದಲ್ಲಿ ನಡೆದಿದೆ.
ದೇವದುರ್ಗ ತಾಲೂಕಿನ ಗಬ್ಬೂರು ಗ್ರಾಮ ಮನೆಯಲ್ಲಿ ರಾತ್ರಿ ವೇಳೆ ಯಾರೂ ಇಲ್ಲದಿರುವಾಗ ಹಾಗೂ ರಸ್ತೆಯಲ್ಲಿ ಮಲಗಿದ ಹಸುಗಳ ಕಳ್ಳತನ ಮಾಡುತ್ತಿದ್ದ, ಖದೀಮರು ಪೊಲೀಸರಿಗೆ ತಲೆನೋವಾಗಿದ್ದರು. ಕಳೆದ 4-5 ತಿಂಗಳಲ್ಲಿ ಹೀಗೆ ಸುಮಾರು 100ಕ್ಕೂ ಹೆಚ್ಚು ಹಸುಗಳನ್ನು ಕಳ್ಳತನ ಮಾಡಿದ್ದರು. ತಡರಾತ್ರಿ ಅದೇ ರೀತಿ ಕಳುವು ಮಾಡಲು ಬಂದಾಗ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಹಿಂದೂ ಜಾಗರಣ ವೇದಿಕೆ ‌ಕಾರ್ಯಕರ್ತರು ಕಳ್ಳನನ್ನು ಬಂಧಿಸಿದ್ದಾರೆ.
ಹಿಂಬಾಲಿಸಿದಾಗ ಖದೀಮರು ವಾಹನ ಚಾಲಾಯಿಸುತ್ತಿರುವ ವೇಳೆಯಲ್ಲಿ ಹೋರಿಗೆ ಡಿಕ್ಕಿ ಹೊಡೆದಾಗ ಮೃತಪಟ್ಟಿದೆ. ಆರೋಪಿಯನ್ನು ಕಾರ್ಯಕರ್ತರು ಪೊಲೀಸರಿಗೆ ಒಪ್ಪಿಸಿದ್ದು, ಸದ್ಯ ಗಬ್ಬೂರು ಪೋಲೀಸರು ಆತನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಕಳ್ಳತನಕ್ಕೆ ಬಳಸುತ್ತಿದ್ದ ವಾಹನವನ್ನು ಸಹ ಜಪ್ತಿ ಮಾಡಿದ್ದು, ಆ ವಾಹನಕ್ಕೆ ‌ಹಿಂದೆ ಒಂದು ನಂಬರ್, ಮುಂದೆ ಇನ್ನೊಂದು ‌ನಂಬರ್​ಹಾಕಿದ್ದು ತಿಳಿದು ಬಂದಿದೆ.