ಹಸಿ ಅವರೆಕಾಳು ಕೂಟು

ಬೇಕಾಗುವ ಸಾಮಗ್ರಿಗಳು

*ಹಸಿ ಅವರೆಕಾಳು – ೧ ಕಪ್
*ಸಾಸಿವೆ – ೧ ಚಮಚ
*ಒಣ ಮೆಣಸಿನಕಾಯಿ – ೩
*ಶುಂಠಿ – ೧ ಪೀಸ್
*ಕರಿಬೇವು – ೫ ಎಲೆ
*ಈರುಳ್ಳಿ -೧
*ತೆಂಗಿನಕಾಯಿ ತುರಿ –
*ಕೊತ್ತಂಬರಿ ಸೊಪ್ಪು –
*ಪುದೀನ ಸೊಪ್ಪು –
*ಮೆಂತ್ಯೆ ಸೊಪ್ಪು –
*ಉಪ್ಪು –
*ಎಣ್ಣೆ –

ಮಾಡುವ ವಿಧಾನ :

ಕುಕ್ಕರ್‌ಗೆ ಎಣ್ಣೆ ಹಾಕಿ ಬಿಸಿಯಾದ ಮೇಲೆ ಸಾಸಿವೆ, ಒಣಮೆಣಸಿನ ಕಾಯಿ, ಶುಂಠಿ, ಕರಿಬೇವು, ಈರುಳ್ಳಿ ಹಾಕಿ ಹುರಿಯಿರಿ. ನಂತರ ಅವರೆ ಕಾಳು, ಉಪ್ಪು, ನೀರು ಹಾಕಿ ಮೂರು ವಿಷಲ್ ಆಗುವವರೆಗೆ ಬೇಯಿಸಿ. ನಂತರ ತೆಗೆದು ಪ್ಯಾನ್‌ಗೆ ಫ್ರೈ ಮಾಡಿ. ಹಸಿ ಅವರೆಕಾಳು ಕೂಟು ತಿನ್ನಲು ರೆಡಿ.