
ಕಿರುತೆರೆಯಲ್ಲಿ ಗೋವಿಂದನ ಪಾತ್ರದ ಮೂಲಕ ನಕ್ಕು ನಗಿಸಿದ ಕಲಾವಿದ ಸಂಗಮೇಶ್ ಉಪಾಸೆ, ಅಧಿಕಾರಿಯಾಗಿ ಆಯ್ಕೆಯಾದ ಬಳಿಕ ಸಿಕ್ಕ ಅವಕಾಶಗಳಲ್ಲಿ ಸಿನಿಮಾಗಳಲ್ಲಿ ನಟಿಸುತ್ತಿದ್ದರು. ಇದೀಗ ಸಾಮಾಜಿಕ ಕಳಕಳಿಯ ವಿಷಯವನ್ನು ಮುಂದಿಟ್ಟುಕೊಂಡು “ರಂಜಾನ್ “ ಮೂಲಕ ಜಾಗತಿಕ ಸಮಸ್ಯೆಯ ಬಗ್ಗೆ ಬೆಳಕು ಚೆಲ್ಲಲು ಮುಂದಾಗಿದ್ದಾರೆ.
ಕಥೆಗಾರ ಫಕೀರ್ ಮೊಹಮ್ಮದ್ ಕಟ್ಪಾಡಿ ಅವರ ನೋಂಬು ಕಥೆಯನ್ನಾಧರಿಸಿ ನಿರ್ದೇಶಕ ಪಂಚಾಕ್ಷರಿ ಆಕ್ಷನ್ ಕಟ್ ಹೇಳಿದ್ದು ಮಡಿವಾಳಪ್ಪ ಗೋಗಿ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ.
ಚಿತ್ರ ಇದೇ ತಿಂಗಳಲ್ಲಿ 50ಕ್ಕೂ ಹೆಚ್ಚು ಚಿತ್ರಮಂದಿರದಲ್ಲಿ ಬಿಡುಗಡೆಗೆ ಸಜ್ಜಾಗಿದೆ. ಈ ಹಿನ್ನೆಲೆಯಲ್ಲಿ ಮಾಹಿತಿ ಹಂಚಿಕೊಂಡ ನಟ ಸಂಗಮೇಶ್ ಉಪಾಸೆ, ಗ್ಯಾಪ್ ನಂತರ ಸಿನಿಮಾ ಮಾಡಿದ್ದೇನೆ. ಇದಕ್ಕೂ ಮುನ್ನ ಯುವರತ್ನ ಸೇರಿದಂತೆ 35ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದೇನೆ ಎಂದು ವಿವರ ನೀಡಿದರು.
ನೋಂಬು ಕಥೆ, ಹಸಿವು, ರೈತರು ಸಮಸ್ಯೆಯ ಮೇಲೆ ಬೆಳಕು ಚೆಲ್ಲಲಿದೆ. ಮೂಲ ಕಥೆಯ ಆಶಯಕ್ಕೆ ಧಕ್ಕೆ ಬರೆದ ಹಾಗೆ ಕಥೆ ಸಿದ್ದ ಪಡಿಸಿಕೊಂಡು ಚಿತ್ರ ಮಾಡಿದ್ದೇವೆ. ಕಥಾ ನಾಯಕ ರಂಜಾನ್ ಗುಜರಿ ಕೆಲಸ ಮಾಡುವನು, ಜೊತೆಗೆ ರೈತ, ಆತ ತನ್ನ ಭೂಮಿ ಕಳೆದುಕೊಂಡು ಬೀದಿಗೆ ಬೀಳುತ್ತಾನೆ. ಭೂಮಿ ಕಳೆದುಕೊಂಡ ಮಂದಿಯನ್ನು ಒಟ್ಟುಗೂಡಿಸಿ ಹೋರಾಟ ಮಾಡ್ತಾನೆ. ಮುಂದೇನಾಗುತ್ತದೆ. ಈ ನಡೆವೆ ಏನೆಲ್ಲಾ ಆತನ ಜೀವನದಲ್ಲಿ ನಡೆದು ಹೋಗುತ್ತವೆ ಎನ್ನುವುದು ಚಿತ್ರದ ತಿರುಳು.
ಹಸಿವಿನಿಂದ ಬಳುವ ರಂಜಾನ್ ರೈತನಾಗಿ ಅವನ ಹೋರಾಟವನ್ನು ಹಸಿವು ಮತ್ತು ರೈತನ ಸಮಸ್ಯೆಯ ಮೇಲೆ ಬೆಳಕು ಚೆಲ್ಲುವ ಕತೆಯ ಬಗ್ಗೆ ಜಾಗೃತಿಮೂಡಿಸುವ ಕಥೆಯನ್ನು ಚಿತ್ರ ಒಳಗೊಂಡಿದೆ. ಚಿತ್ರವನ್ನು ಮಂಗಳೂರು, ಉಡುಪಿ, ಕಟ್ಪಾಡಿ. ಗುಲ್ವಾಡಿ ಸೇರಿದಂತೆ 20 ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ ಎಂದರು.
ನನ್ನ ಪತ್ನಿ ಮತ್ತು ಪುತ್ರಿ ಚಿತ್ರದಲ್ಲಿಯೂ ಪತ್ನಿ, ಪುತ್ರಿಯಾಗಿ ಕಾಣಿಸಿಕೊಂಡಿದ್ದಾರೆ. ಆಲೀಮಾ ಮತ್ತು ಅಮೀನ್ ಪಾತ್ರಕ್ಕೆ ಅವರಿಬ್ಬರೂ ಜೀವ ತುಂಬಿದ್ದಾರೆ. ಸಾಮಾಜಿಕ ಕಳಕಳಿ ಚಿತ್ರವನ್ನು ತೆರೆಗೆ ಕಟ್ಟಿಕೊಡುವ ಉದ್ದೇಶ ನಮ್ಮದು. ಚಿತ್ರವನ್ನು ಎಲ್ಲರೂ ಇಷ್ಟಪಡುತ್ತಾರೆ ಎನ್ನುವ ವಿಶ್ವಾಸವಿದೆ ಎಂದು ಮಾಹಿತಿ ಹಂಚಿಕೊಂಡರು,
ಮನುಕಲುವ ಮಾನವೀಯ ವಿಷಯವನ್ನು ಮುಂದಿಟ್ಟುಕೊಂಡು ಸಿನಿಮಾ ಮಾಡಲಾಗಿದ್ದು ಚಿತ್ರದಲ್ಲಿ ನಿಜವಾದ ಮೌಲವಿಗಳು ನಟಿಸಿದ್ದಾರೆ. ಮದರಸ,ಮಸೀದಿ, ಖಬರ್ ಸ್ತಾನದಲ್ಲಿ ಚಿತ್ರೀಕರಣ ಮಾಡಲಾಗಿದೆ ಎಂದು ಯಾದಗಿರಿ ನಗರಸಭೆಯ ಪೌರಾಯಕ್ತರಾಗಿರುವ ಸಂಗಮೇಶ್ ಉಪಾಸೆ. ಚಿತ್ರ ಬಿಡುಗಡೆಗೆ ಮುನ್ನ ಬುದ್ದಿಜೀವಿಗಳು ಸೇರಿದಂತೆ ಗಣ್ಯರಿಗೆ ತೋರಿಸುವ ಉದ್ದೇಶ ಹೊಂದಲಾಗಿದೆ ಎನ್ನುವ ವಿವರ ನೀಡಿದರು.