ಹಸಿವಿನಿಂದ ಬಳಲುತ್ತಿರುವರಿಗೆ ಊಟ ನೀಡಿ!

ವಾಡಿ:ಮೇ.27: ಕಠಿಣ ಲಾಕ್‍ಡೌನ್ ಜಾರಿಯಾದ ಮೇಲೆ ಭಿಕ್ಷುಕರು ಹಾಗೂ ನಿU್ರ್ಪತಿಕರು ಒಂದೊತ್ತಿನ ಊಟಕ್ಕೂ ಪರದಾಡುವಂತಾಗಿದೆ, ಸರಕಾರದ ಅನುದಾನ ಪುರಸಭೆ ಖಾತೆಗೆ ಬಂದರೂ ಸಹ ಅಧಿಕಾರಿಗಳು ಹಾಗೂ ಅಧ್ಯಕ್ಷರು ಕಡುಬಡವರಿಗೆ ಕನಿಷ್ಠ ಒಂದೋತ್ತಿನ ಉಪಹಾರದ ವ್ಯವಸ್ಥೆ ಕಲ್ಪಸದೆ ನಿರ್ಲಕ್ಷ್ಯ ತೊರಿದ್ದಾರೆ.
ರೈಲು ನಿಲ್ದಾಣ, ಬಸ್ ನಿಲ್ದಾಣದಲ್ಲಿ ಬೀಡು ಬಿಟ್ಟಿರುವ ಭಿಕ್ಷುಕರ ಗೋಳೂ ಕೇಳೋರೂ ಯಾರೂ ಇಲ್ಲದಂತಾಗಿದೆ, ಲಾಕ್‍ಡೌನ್ ಘೋಷಣೆಯಾದ ಮೇಲೆ ಇಲ್ಲಿವರೆಗೆ ಉಪಹಾರದಿಂದ ಕೊರಗುವಂತಾಗಿದೆ. ಸ್ಥಳೀಯ ಚುನಾಯಿತ ಪ್ರತಿನಿಧಿಗಳಾಗಲ್ಲಿ ಅಧಿಕಾರಿಗಳಾಗಲ್ಲಿ ಯಾರೂ ನಮ್ಮ ಗೋಳು ಕೇಳಲು ಬಂದಿಲ್ಲ, ಒಂದೋತ್ತಿನ ಊಟ ಸಹ ಕೊಟ್ಟಿಲ್ಲ ಎಂದು ದೂರಿದ್ದಾರೆ.

ಕಳೆದ ವರ್ಷ ನೆರವಾಗಿದ್ದರು: ಕಳೆದ ವರ್ಷ ಲಾಕ್‍ಡೌನ್ ಸಮಯದಲ್ಲಿ ಭಿಕ್ಷುಕರಿಗೆ ಹಾಗೂ ನಿರ್ಗತಿಕರನ್ನು ಗುರುತಿಸಿ ಊಟ ನೀಡುವ ಮೂಲಕ ಸಹಾಯ ಮಾಡಿದ್ದರು, ಆದ್ದರೆ ಈ ಬಾರಿ ಯಾರೊಬ್ಬರೂ ಕೂಡ ನಮ್ಮ ಕಡೆ ತಿರಿಗೂ ಕೂಡ ನೋಡಿಲ್ಲ ಎಂದು ಭಿಕ್ಷುಕರು ಅಳಲು ತೊಡಿಕೊಂಡಿದ್ದಾರೆ. ಇನ್ನಾದ್ರೂ ಪುರಸಭೆ ಆಡಳಿತ ನಿರ್ಗತಿಕರ ಸಹಾಯಕ್ಕೆ ಬರಬೇಕು ಎನ್ನುವುದು ಆಗ್ರಹವಾಗಿದೆ.

ವಾಡಿ ಪುರಸಭೆ ವತಿಯಿಂದ ಕಳೆದ ಬಾರಿಯ ಲಾಕ್‍ಡೌನ್ ಸಂದರ್ಭದಲ್ಲಿ ನಿರ್ಗತಿಕರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಈ ಬಾರಿಯೂ ಊಟದ ವವ್ಯಸ್ಥೆ ಮಾಡಿದರೇ ಹಸಿವಿನಿಂದ ಬಳಲುವರಿಗೆ ಅನೂಕುಲ ಆಗುತ್ತದೆ.
ಶ್ರವಣಕುಮಾರ ಮೌಸಲಗಿ. ನ್ಯಾಯವಾದಿ ವಾಡಿ.