ಹಸಿರು ಸಿರಿ ಅಭಿಯಾನಕ್ಕೆ ಚಾಲನೆ


ಧಾರವಾಡ,ಜೂ.6: ಧಾರವಾಡದ ಶ್ರೀಸಾಯಿ ಪದವಿಪೂರ್ವ ವಿಜ್ಞಾನ, ವಾಣಿಜ್ಯ ಮಹಾವಿದ್ಯಾಲಯ ಹಾಗೂ ಹೊಂಬೆಳಕು ಫೌಂಡೇಶನ್ ಸಂಯುಕ್ತ ಆಶ್ರಯದಲ್ಲಿ ಇಂದು ವಿಶಿಷ್ಟ ರೀತಿಯಲ್ಲಿ ವಿಶ್ವ ಪರಿಸರ ದಿನ ಆಚರಿಸಲಾಯಿತು.
ಹಸಿರು ಸಿರಿ ಎಂಬ ಹೆಸರಿನಡಿ ಹಮ್ಮಿಕೊಂಡಿರುವ ಈ ಅಭಿಯಾನಕ್ಕೆ ಹಾವೇರಿ ಪ್ರಾದೇಶಿಕ ವಿಭಾಗದ ಉಪ ವಲಯ ಅರಣ್ಯ ಅಧಿಕಾರಿ ಶಿವಪ್ರಸಾದ್ ಬಿ.ಕೆ. ಅವರು ಆನ್ ಲೈನ್ ಮೂಲಕ ಚಾಲನೆ ನೀಡಿದರು.
ಪ್ರಸಕ್ತ ವರ್ಷದ ವಿಶ್ವ ಪರಿಸರ ದಿನದ ಅಂಗವಾಗಿ ಶ್ರೀಸಾಯಿ ಪದವಿಪೂರ್ವ ವಿಜ್ಞಾನ ಹಾಗೂ ವಾಣಿಜ್ಯ ಕಾಲೇಜು 200 ಸಸಿಗಳನ್ನು ನೆಡುವ ಉದ್ದೇಶ ಹೊಂದಿತ್ತು. ಆ ಪ್ರಕಾರ ಕೊರೊನಾದ ಲಾಕಡೌನ್ ನಿಂದಾಗಿ ಎಲ್ಲರೂ ಒಂದೆಡೆ ಸೇರದೇ ಆನ್ ಲೈನ್ ಮೂಲಕವೇ ಈ ಅಭಿಯಾನಕ್ಕೆ ಚಾಲನೆ ನೀಡಿದ್ದು, ಎಲ್ಲರೂ ತಮ್ಮ ಮನೆಯ ಆವರಣದಲ್ಲಿ ಸಸಿ ನೆಟ್ಟು ಕಾರ್ಯಕ್ರಮ ನಡೆಸಿದರು.
ಸಂಸ್ಥೆಯ ಅಧ್ಯಕ್ಷೆ ಡಾ.ವೀಣಾ ಬಿರಾದಾರ ಅವರೂ ಸಹ ತಮ್ಮ ಮನೆಯ ಆವರಣದಲ್ಲಿ ಸಸಿ ನೆಟ್ಟು, ಹಸಿರು ನಮ್ಮೆಲ್ಲರ ಉಸಿರು, ಪ್ರಕೃತಿಯೇ ನಮ್ಮ ಜೀವನದ ಹೆಬ್ಬಾಗಿಲು. ಪ್ರತಿಯೊಬ್ಬರೂ ಮನೆಗೊಂದು ಸಸಿ ನೆಡುವ ಸಂಕಲ್ಪ ಮಾಡಬೇಕು ಎಂದರು.
ಡಾ.ಎಸ್.ಬಿ.ಗಾಡಿ, ಅರ್ಚನಾ ಅಳಗವಾಡಿ, ಜಯಶ್ರೀ ಸೊಟಕನಾಳ, ಕಾಲೇಜಿನ ಪ್ರಾಚಾರ್ಯ ಪೆÇ್ರ.ನಾಗರಾಜ ಶಿರೂರ, ಮೌನೇಶ, ಬಾಪುಸಾಬ್ ಮೊರಂಕರ, ಕರೆಪ್ಪ ಮೇಟಿ, ವಿಜಯ ಹರಿಜನ, ಡಾ.ಕಾರ್ತಿಕ ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಹಿತೈಷಿಗಳು ಎಲ್ಲರೂ ತಮ್ಮ ತಮ್ಮ ಮನೆಯಂಗಳದಲ್ಲಿ ಸಸಿ ನೆಟ್ಟು ವಿಶಿಷ್ಟ ರೀತಿಯಲ್ಲಿ ಈ ಪರಿಸರ ದಿನ ಆಚರಿಸಿದರು.