ಹಸಿರು ಮನೆ ಬೆಳೆಗಾರರಿಗೆ ವಿಚಾರ ಸಂಕಿರಣ

ಆನೇಕಲ್. ಮಾ. ೧೯- ಚಂದಾಪುರದಲದಲಿರುವ ಆರ್.ಕೆ.ಗಾರ್ಡೇನಿಯ ಹೋಟೆಲ್ ಆವರಣದಲ್ಲಿ ದನುಕಾ ಕಂಪನಿ ವತಿಯಿಂದ ಹಸಿರು ಮನೆ ಬೆಳೆಗಾರರಿಗೆ ಸಂಬಂದಿಸಿದ ಸಮಸ್ಯೆಗಳ ಕುರಿತು ವಿಚಾರ ಸಂಕಿರಣ ಆಯೋಜಿಸಲಾಗಿತ್ತು.
ವಿಚಾರ ಸಂಕೀರ್ಣದಲ್ಲಿ ವಿಜ್ಷಾನಿಗಳಾದ ನವೇದ್ ಸಹಿಬಿಯರ್ ರವರು ಹಸಿರು ಮನೆ ಬೆಳೆಗಾರರಿಗೆ ಸಂಬಂದಿಸಿದ ಅನೇಕ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿದರು ಜೊತೆಗೆ ಬೆಳೆಗಳ ಪೋಷಣೆ ಕುರಿತು ಕೆಲವು ಮಾಹಿತಿಯನ್ನು ಸಹ ನೀಡಿದರು.
ಈ ವೇಳೆ ಆನೇಕಲ್ ತಾಲ್ಲೂಕು ಹಸಿರು ಮನೆ ಬೆಳೆಗಾರರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಕೂನುಮಡಿವಾಳ ಸೋಮಣ್ಣ ಮಾತನಾಡಿ ಹಸಿರು ಮನೆಯಲ್ಲಿ ಬೆಳೆಯ ನಿರ್ವಹಣೆಯಲ್ಲಿ ಹಸಿರು ಮನೆ ಬೆಳೆಗಾರರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದು ಈ ನಿಟ್ಟಿನಲ್ಲಿ ಇಂದು ವಿಚಾರ ಸಂಕೀರ್ಣವನ್ನು ಆಯೋಜಿಸಲಾಗಿದ್ದು ರೈತರು ಬೆಳೆಗಳನ್ನು ವೈಜ್ಞಾನಿಕ ರೀತಿಯಲ್ಲಿ ನಿರ್ವಹಣೆ ಮಾಡಿದಾಗ ಉತ್ತಮವಾದ ಬೆಳೆಯನ್ನು ಬೆಳೆಬಹುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಧನುಕಾ ಕಂಪನಿಯ ಜಿಎಂ. ರಮೇಶ್ ರೆಡ್ಡಿ, ಡಿಜಿಎಂ ಹೇಮಂತೇಶ್ವರ, ಆನೇಕಲ್ ತಾಲ್ಲೂಕು ಹಸಿರು ಮನೆ ಬೆಳೆಗಾರರ ಕ್ಷೇಮಾಭಿವೃದ್ದಿ ಸಂಘದ ಉಪಾಧ್ಯಕ್ಷ ಲೋಕೇಶ್, ಸಂಘದ ನಿರ್ದೇಶಕರು, ಸದಸ್ಯರು ಮತ್ತು ರೈತಬಾಂದವರು ಭಾಗವಹಿಸಿದ್ದರು.