ಹಸಿರು ಪರಿಸರ ಸಮಾಜ ನಿರ್ಮಾಣಕ್ಕೆ ಕಾಡಾ ಅಧ್ಯಕ್ಷ ತಳವಾರ ಕರೆ

(ಸಂಜೆವಾಣಿ ವಾರ್ತೆ)
ಶಹಾಪುರ:ಜೂ.8: ಗಿಡಮರಗಳ ನಶಿಸಿ ಹೊಗುತ್ತಿದ್ದು. ಮನೆಯಲ್ಲಿನ ಗಿಡಗಳನ್ನು ಕಡಿದುಕೊಂಡು ಮಹಡಿಗಳ ನಿರ್ಮಾಣ. ರಸ್ತೆ ಅಭಿವೃದ್ದಿ. ಗುಡ್ಡಗಾಡುಗಳನ್ನು ಕಬಳಿಸಿಕೊಂಡು ಗಿಡಮರ ಬಳ್ಳಿಗಳ ಸರ್ವನಾಶ ಮಾಡುತ್ತಿದ್ದು, ಈ ಅವ್ಯವಸ್ಥೆಯಿಂದ ಇಂದು ಪ್ರತಿ ಜೀವ ಸಂಕುಲಕ್ಕೆ ಆಕ್ಷಿಜಿನ್ ಕೊರತೆ ಉಂಟಾಗಿ ಸಾವು ನೋವುಗಳ ಬಾದೆಗಳಿಂದ ನರಳುವಂತಾಗಿದೆ, ಗೀಡಮರಗಳನ್ನು ಬೇಳಸಿಕೊಂಡು ಹಸಿರು ಪರಿಸರ ಸಮಾಜ ನಿರ್ಮಾಣಕ್ಕೆ ಮುಂದಾಗಬೆಕು ಎಂದು ಭೀಮರಾಯನಗುಡಿ ಕಾಡಾ ಅಧ್ಯಕ್ಷರಾದ ಶರಣಪ್ಪ ತಳವಾರ ಕರೆ ನೀಡಿದರು.
ಭೀಮರಾಯನಗುಡಿಯ ಕಾಡಾ ಅವರಣದಲ್ಲಿ ವಿಶ್ವಪರಿಸರ ದಿನಾಚರಣೆ ಅಂಗವಾಗಿ ಗೀಡಗಳನ್ನು ನಟ್ಟು ಪರಿಸರ ಜಾಗೃತಿ ಮೂಡಿಸಿ ಅವರು ಮಾತನಾಡಿದರು.
ಈ ಸಂಧರ್ಭದಲ್ಲಿ ಕಾಡಾ ಆಡಳಿತಾಧಿಕಾರಿಗಳಾದ ಶÀರಣಬಸ್ಸಪ್ಪ ಬೇಣ್ಣೂರಕರ್, ಉಪ ಆಡಳಿತಾಧಿಕಾರಿ, ಮಹಮ್ಮದ ತಾಯೇರ ಹುಸೇನಿ, ಭೂ ಅಭಿವೃದ್ದಿ ಅಧಿಕಾರಿ ಕೆ.ಜಿಯಾಹುಲ್ ಖಾನಾ ಭೂ ಅಭಿವೃದ್ದಿ ತರಬೇತಿ ಕೆಂದ್ರದ ಪ್ರಾಚಾರ್ಯರಾದ ಶ್ರೀಮತಿ ಸರಸ್ವತಿ, ಟೆಕ್ನಿಕಲ್ ಅಸಿಸ್ಟೆಂಟ್ ಸುರೇಶಕುಮಾರ ಸೇರಿದಂತೆ ಕಾಡಾ ಅಧಿಕಾರಿಗಳು ಸಿಬ್ಬಂದಿಯವರು ಹಾಜರಿದ್ದರು.