“ಹಸಿರು ದೀಪಾವಳಿ ಅಭಿಯಾನಕ್ಕೆ ಚಾಲನೆ”

ವಿದ್ಯಾರ್ಥಿಗಳು ಶಾಲೆಗಳಿಂದ ದೂರವಿದ್ದರೂ ಅವರಲ್ಲಿ ಕಲಿಕಾ ಚಟುವಟಿಕೆ,ಸಾಮಾಜಿಕ ಜವಾಬ್ದಾರಿ ಹೆಚ್ಚಿಸಲು ಕಾರ್ಯ ಚಟುವಟಿಕೆ,ಮಾಸ್ಕ್ ಗಳ ತಯಾರಿ,ದಸರಾ ವಿಶೇಷ ಆಚರಣೆ ಹೀಗೆ ಹತ್ತು ಹಲವು ಕಾರ್ಯಗಳನ್ನು ಸ್ಕೌಟ್ಸ್ ಸಂಸ್ಥೆ ಮಾಡುತ್ತಿದ್ದು,ರಾಜ್ಯ ಮುಖ್ಯ ಆಯುಕ್ತ ಸಿಂಧ್ಯಾ ರವರ ಕ್ರಿಯಾಶೀಲತೆ ಇದಕ್ಕೆ ಕಾರಣ.ಮಾನ್ವಿ ಸ್ಕೌಟ್ಸ್ ಸಂಸ್ಥೆ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಿ ಮಕ್ಕಳಲ್ಲಿ ಉತ್ಸಾಹ ತುಂಬುವಲ್ಲಿ ಯಶಸ್ವಿಯಾಗಿದೆ.ದೀಪಾವಳಿಯ ಈ ಸಂದರ್ಭದಲ್ಲಿ ಕಾಲುಷ್ಯ ರಹಿತ ಹಸಿರು ದೀಪಾವಳಿ ಆಚರಣೆ ಅಭಿಯಾನಕ್ಕೆ ಎಲ್ಲರೂ ಕೈ ಜೋಡಿಸಿ ಪಟಾಕಿಗಳ ನಿರಾಕರಣೆ,ಪರಿಸರ ರಕ್ಷಣೆಗೆ ಎಲ್ಲಾರೂ ಕೈ ಜೋಡಿಸಿ ಕರೊನ ಓಡಿಸಲು ಪ್ರಯತ್ನ ಮಾಡೋಣ ಎಂದು ತಾಲೂಕಾ ದೈಹಿಕ ಶಿಕ್ಷಣ ಅಧಿಕಾರಿ ಶ್ರೀಕಾಂತ್ ಬಾಗೇವಾಡಿ ನುಡಿದರು.ಅವರು ಮಾನ್ವಿ ಸ್ಕೌಟ್ಸ್ ಮತ್ತು ಗೈಡ್ಸ್ ನ ಹಸಿರು ದೀಪಾವಳಿ ಅಭಿಯಾನ ಉದ್ಘಾಟಿಸಿ ಮಾತನಾಡಿದರು.ಮಕ್ಕಳು ಕೈ ಇಂದ ಮಾಡಿದ ಭಿತ್ತಿ ಪತ್ರಗಳನ್ನು ಅವರು ಬಿಡುಗಡೆ ಮಾಡಿದರು.ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣ ಅಧಿಕಾರಿಗಳ ಕಾರ್ಯಾಲಯದ ಮ್ಯಾನೇಜರ್ ಬಸವರಾಜಪ್ಪ,ಸಂಸ್ಥೆಯ ಕಾರ್ಯದರ್ಶಿ ರಾಮಲಿಂಗ ಪ್ಪ,ಜಂಟಿ ಕಾರ್ಯದರ್ಶಿ ನರಸಿಂಹ ಮೂರ್ತಿ ದೇಸಾಯಿ,ಶಿಕ್ಷಕರು ವಸಂತ್ ರಾವ್ ಕುಲಕರ್ಣಿ,ಸಂಗಮೇಶ್ ಮುಧೋಳ,ಸ್ಕೌಟ್ ಗೈಡ್ ಗಳಾದ ಐಶ್ವರ್ಯ ದೇಸಾಯಿ,ಸೃಷ್ಟಿ ಕರಕಿಹಳ್ಲಿ, ಸಾಯಿ ದೀಕ್ಷಿತ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.