ಹಸಿರು ತೋರಣ ಬಳಗ ಪದಾಧಿಕಾರಿಗಳ ಆಯ್ಕೆ

ಮುದ್ದೇಬಿಹಾಳ:ಜ.4: ಹಸಿರು ತೋರಣ ಗೆಳೆಯರ ಬಳಗ ಕಳೆದ ಐದು ವರ್ಷಗಳಿಂದ ನಡೆಸಿಕೊಂಡು ಬಂದಿರುವ ಪರಿಸರದ ಕಾಳಜಿಯ ಆಶಯವನ್ನು ಇನ್ನಷ್ಟು ಪರಿಣಾಮಕಾರಿ ನಡೆಸಲಾಗುವುದು ಎಂದು ಬಳಗದ ನೂತನ ಅಧ್ಯಕ್ಷ ರಾಜಶೇಖರ ಕಲ್ಯಾಣಮಠ ಹೇಳಿದರು.
ಅವರು ಶುಕ್ರವಾರ, ಪಟ್ಟಣದ ಹುಡ್ಕೋ ಬಡಾವಣೆಯಲ್ಲಿರುವ ಹಸಿರು ತೋರಣ ಉದ್ಯಾನವನದಲ್ಲಿ ಹಸಿರು ತೋರಣ ಗೆಳೆಯರ ಬಳಗದ 2021 ನೇ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿದರು. ಕಳೆದ ವರ್ಷ ಕೊರೋನಾ ಕಾರಣದಿಂದ ಬಳಗದ ಚಟುವಟಿಕೆಗಳು ಕಡಿಮೆಯಾಗಿದ್ದವು. ಪಟ್ಟಣದ ಉದ್ಯಾನವನಗಳನ್ನು ಗುರುತಿಸಿ, ಅದರಲ್ಲಿ ಗಿಡಗಳನ್ನು ನೆಡುವ ಕೆಲಸ ಜೊತೆಗೆ ಅವುಗಳ ರಕ್ಷಣೆಗೆ ಸ್ಥಳೀಯರ ಸಹಕಾರ ಪಡೆಯಲಾಗುವುದು ಎಂದರು. ಬಳಗದ ಚಟುವಟಿಕೆಗಳಿಗೆ ಅರಣ್ಯ ಇಲಾಖೆ ದೊಡ್ಡ ನೆರವು ನೀಡುತ್ತಿದೆ. ಅರಣ್ಯ ಇಲಾಖೆಯ ಸಹಕಾರ ಮತ್ತು ಮಾರ್ಗದರ್ಶನದೊಂದಿಗೆ ಬಳಗದ ಕೆಲಸಗಳನ್ನು ಜನರಿಗೆ ಮುಟ್ಟಿಸಲು ಶ್ರಮಿಸುವುದಾಗಿ ಅವರು ಹೇಳಿದರು. ಬಳಗದ ನಿಕಟಪೂರ್ವ ಅಧ್ಯಕ್ಷ ಅಶೋಕ ರೇವಡಿ ಕಲ್ಯಾಣಮಠ ಅವರಿಗೆ ಮಾಲೆ ಹಾಕುವ ಮೂಲಕ ಅಧಿಕಾರ ಹಸ್ತಾಂತರಿಸಿದರು. ಬಳಗದ ಕಾರ್ಯದರ್ಶಿಯಾಗಿ ಕಿರಣ ಕಡಿ, ಉಪಾಧ್ಯಕ್ಷರಾಗಿ ಬಿ.ಎಚ್.ಬಳಬಟ್ಟಿ, ಖಜಾಂಚಿಯಾಗಿ ಅಶೋಕ ರೇವಡಿ, ಗೌರವ ಅಧ್ಯಕ್ಷರಾಗಿ ಜಿ.ಎಂ.ಹುಲಗಣ್ಣಿ, ಸಹ ಕಾರ್ಯದರ್ಶಿಯಾಗಿ ವೀರೇಶ ಹಂಪನಗೌಡರ ಅವಿರೋಧವಾಗಿ ಆಯ್ಕೆಯಾದರು. ಸಭೆಯಲ್ಲಿ ಕುಂಟೋಜಿ ಗ್ರಾಮ ಪಂಚಾಯಿತಿಗೆ ಆಯ್ಕೆಯಾದ ನಂದಾ ಮಲ್ಲಿಕಾರ್ಜುನ ಬಾಗೇವಾಡಿ ಅವರನ್ನು ಹಾಗೂ ಮಹಾದೇವ ಕಾಮಟೆ ಮತ್ತು ನೀತಾ ಕಾಮಟೆ ದಂಪತಿಯನ್ನು ಸನ್ಮಾನಿಸಲಾಯಿತು. ಸಭೆಯಲ್ಲಿ ಹಸಿರು ತೋರಣ ಬಳಗದ ಮಾಜಿ ಅಧ್ಯಕ್ಷ ನಾಗಭೂಷಣ ನಾವದಗಿ ವಕೀಲರು, ಕರ್ನಾಟಕ ಕೋ. ಆಪ್ ಬ್ಯಾಂಕ್ ನಿರ್ದೇಶಕ ವೆಂಕನಗೌಡ ಪಾಟೀಲ ಮಾತನಾಡಿದರು. ಕಾರ್ಯಕ್ರಮದಲ್ಲಿ ಬಳಗದ ಮಾಜಿ ಅಧ್ಯಕ್ಷ ಕೆ.ಆರ್.ಕಾಮಟೆ, ಹಿರಿಯರಾದ ಬಿ.ಎಂ.ಪಲ್ಲೇದ, ಬಿ.ಎಸ್.ಮೇಟಿ, ಮಹಾಬಲೇಶ್ವರ ಗಡೇದ, ಜೇಸಿ ಸಂಸ್ಥೆಯ ಅಧ್ಯಕ್ಷ ರವಿ ಗೂಳಿ, ಎಂ.ಎಸ್. ಬಾಗೇವಾಡಿ, ರವಿ ತಡಸದ, ಅಮರೇಶ ಗೂಳಿ, ಸುರೇಶ ಕಲಾಲ, ಸುಧೀರ ಕತ್ತಿ, ಡಾ.ವೀರೇಶ ಪಾಟೀಲ, ಡಾ.ವೀರೇಶ ಇಟಗಿ, ಡಾ.ವಿಜಯಕುಮಾರ ಗೂಳಿ, ಡಾ.ಚಂದ್ರಶೇಖರ ಶಿವಯೋಗಿಮಠ, ವಿಶ್ವನಾಥ ನಾಗಠಾಣ, ವಿಲಾಸ ದೇಶಪಾಂಡೆ, ವಿನಯ ಹಿರೇಮಠ, ಬಸು ಉರನ್ನವರ, ಸುಹಾಸ ಇಟಗಿ ಮತ್ತಿತರರು ಇದ್ದರು. ಶ್ರೀನಿವಾಸರಾವ ಕುಲಕರ್ಣಿ ಪರಿಸರ ಗೀತೆ ಹಾಡಿದರು. ಮಹಾಬಲೇಶ್ವರ ಗಡೇದ ಸ್ವಾಗತಿಸಿ, ನಿರೂಪಿಸಿದರು. ವೀರೇಶ ಹಂಪನಗೌಡರ ವಂದಿಸಿದರು.