ಹಸಿರು ಟೀ ಆರೋಗ್ಯಕ್ಕೆ ಹೇಗೆ ಉತ್ತಮ?


ಭಾರತದ ಅತ್ಯಂತ ಜನಪ್ರಿಯ ಪೇಯವಾಗಿರುವ ಟೀ ಹಲವು ಬಗೆಗಳಲ್ಲಿ ದೊರಕುತ್ತದೆ. ಆದರೆ ಹಸಿರು ಟೀ ತಯಾರಿಸುವಾಗ ಇದನ್ನು ಆಮ್ಲಜನೀಕರಣ ಪ್ರಕ್ರಿಯೆಗೆ (ಒಳಗಾಗಿಸದೇ ಇರುವ ಕಾರಣ ಈ ಟೀ ಉಳಿದ ಬಗೆಯ ಟೀಗಳಿಗಿಂತ ಹೆಚ್ಚು ಆರೋಗ್ಯಕರವಾಗಿದೆ. ಕಪ್ಪು ಟೀ ಹಾಗೂ ಇತರ ಬಗೆಯ ಆಯುರ್ವೇದೀಯ ಹಸಿರು ಟೀ ಗಳಿಗಿಂತ ಅಪ್ಪಟ ಹಸಿರು ಟೀ ಆರೋಗ್ಯಕರವಾಗಿದ್ದು ನೂರಾರು ವರ್ಷಗಳಿಂದ ಹಲವಾರು ದೇಶಗಳಲ್ಲಿ ನಿತ್ಯದ ಪೇಯದ ರೂಪದಲ್ಲಿ ಸೇವಿಸುತ್ತಾ ಬರಲಾಗಿದೆ.

ಹಸಿರು ಟೀಯಲ್ಲಿರುವ ಪ್ರಬಲ ಗುಣಗಳು ಕೆಟ್ಟ ಕೊಲೆಸ್ಟ್ರಾಲ್ ಹಾಗೂ ಟ್ರೈಗ್ಲಿಸರೈಡ್ಸ್ ಗಳ ಮಟ್ಟವನ್ನು ಕಡಿಮೆಗೊಳಿಸಲು ನೆರವಾಗುತ್ತದೆ. ಅಲ್ಲದೇ ಇದರಲ್ಲಿರುವ ಪಾಲಿಫೆನಾಲ್ ಮತ್ತು ಫ್ಲೇವನಾಯ್ಡುಗಳಂತಹ ಆಂಟಿ ಆಕ್ಸಿಡೆಂಟುಗಳು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ ಹಾಗೂ ವೈರಸ್ ಮೂಲಕ ಎದುರಾಗುವ ಶೀತ ಮತ್ತು ಫ್ಲೂ ಮೊದಲಾದ ಸಾಮಾನ್ಯ ಕಾಯಿಲೆಗಳಿಂದ ರಕ್ಷಣೆ ಒದಗಿಸುತ್ತದೆ. ಅಲ್ಲದೇ ಈ ಆಂಟಿ ಆಕ್ಸಿಡೆಂಟುಗಳು ತ್ವಚೆ ಮತ್ತು ಕೂದಲನ್ನೂ ಆರೋಗ್ಯಕರವಾಗಿರಿಸುತ್ತವೆ.

ಖಾಲಿ ಹೊಟ್ಟೆಯಲ್ಲಿ ಹಸಿರು ಟೀ ಸೇವಿಸಿದರೆ ಕೆಲವಾರು ಅಪಾಯಕಾರಿ ಪರಿಣಾಮಗಳನ್ನು ಎದುರಿಸಬೇಕಾಗಿ ಬರುತ್ತದೆ. ವಿಶೇಷವಾಗಿ ಇದರಲ್ಲಿರುವ ಹೆಚ್ಚಿನ ಕೆಫೇನ್ ಯಕೃತ್ ಗೆ ಅಪಾಯಕಾರಿಯಾಗಿ ಪರಿಣಮಿಸುತ್ತದೆ.

ಖಾಲಿಹೊಟ್ಟೆಯಲ್ಲಿ ಹಸಿರು ಟೀ ಯಲ್ಲಿರುವಂತಹದ್ದೇ ಹೆಚ್ಚುವರಿ ಆಹಾರಗಳ ಸೇವನೆಯ ಪರಿಣಾಮವನ್ನು ಕಂಡುಕೊಳ್ಳಲು ನಡೆಸಲಾದ ಸಂಶೋಧನೆಯಲ್ಲಿ ಯಕೃತ್ ನ ಮೇಲೆ ಪ್ರತಿಕೂಲ ಪರಿಣಾಮವುಂಟಾಗಿರುವುದು ಕಂಡುಬಂದಿದೆ. ಹಸಿರು ಟೀ ಯಲ್ಲಿ ಕ್ಯಾಟೆಚಿನ್ ಗಳೆಂಬ ಪೋಷಕಾಂಶಗಳಿವೆ. ಈ ಕಣಗಳ ಸಾಂದ್ರತೆ ಹೆಚ್ಚಿದರೆ ಯಕೃತ್ ನ ಮೇಲೆ ಹೆಚ್ಚಿನ ಅಪಾಯವುಂಟಾಗುತ್ತದೆ. ಒಂದು ವೇಳೆ ಸಾಂದ್ರತೆ ಒಂದು ಮಟ್ಟ ಮೀರಿದರೆ ಯಕೃತ್ ವೈಫಲ್ಯವೂ ಎದುರಾಗಬಹುದು. ಹಾಗಾಗಿ ಯಕೃತ್ ನ ಕಾರ್ಯಕ್ಷಮತೆ ಹೆಚ್ಚಿರುವ ಸಮಯವಾದ ಬೆಳಗ್ಗಿನ ಹತ್ತರಿಂದ ಹನ್ನೊಂದು ಘಂಟೆಯ ನಡುವೆ ಹಾಗೂ ಸಂಜೆಯಾಗುವುದಕ್ಕಿಂತಲೂ ಮುನ್ನಾ ಸಮಯದಲ್ಲಿ ಕುಡಿಯುವುದು ಉತ್ತಮವಾಗಿದ್ದು ದೇಹದ ಜೀವರಾಸಾಯನಿಕ ಕ್ರಿಯೆಯನ್ನು ಉತ್ತಮಗೊಳಿಸುತ್ತದೆ.