
ಸಂಜೆವಾಣಿ ವಾರ್ತೆ
ಸಂಡೂರು: ಏ: 7: ಡಾ. ಬಿ.ಅರ್. ಅಂಬೇಡ್ಕರ್ ಅವರು ಸಂವಿಧಾನದ ಶಿಲ್ಪಿಯಾದರೆ , ಬಾಬು ಜಗಜೀವನ ರಆಮ ರವರು ಹಸಿರು ಕ್ರಾಂತಿಯ ಹರಿಕಾರರಾಗಿ ರೈತರ ಬೆನ್ನೆಲುಬು ಅಗಿ 4 ಬಾರಿ ಸಂಸದರಾಗಿ ದೇಶಕ್ಕೆ ಅತ್ಯುನ್ನತ ಕೊಡುಗೆಯನ್ನು ನೀಡಿದವರು ಬಾಬು ಜಗಜೀವನ ರಾಂರು, ತೀವ್ರ ಬಡತನ ಸಂಕಷ್ಟಗಳ ಮಧ್ಯೆ ಅಭ್ಯಾಸ ಮಾಡಿ ಬಾಬು ಜಗಜೀವನ ರಾಂರು ಸಾಧನೆ ಕೃಷಿ ಸೇರಿ ಹಲವಾರು ಖಾತೆಗಳ ಸಚಿವರಾಗಿ ಮಹತ್ತರ ಸಾಧನೆಯನ್ನು ಮಾಡಿ ಯಾರೂ ಮರೆಯಲಾಗದೇ ಜನ ಮನದಲ್ಲಿ ಉಳಿದು ಇಂದಿಗೂ ಅಜರಾಮರಾಗಿದ್ದಾರೆ. ಈ ಇರ್ವರೂ ಮಹಾನೀಯರು ದಲಿತ ಚಳಿವಳಿಯ ಎರಡು ಕಣ್ಣುಗಳಿದ್ದಂತೆ, ದಲಿತರ ಮೇಲಿನ ದೌರ್ಜನ್ಯವನ್ನು ನಾವು ಇಂದಿಗೂ ಕಾಣುತ್ತೇವೆ, ಅಂದಿನ ದಿನವೇ ಕರಾಳ ದಿನವಾಗಿದೆ. ಇಂದು ನಾವು ಹೋರಾಟ ಹಾಗೂ ಚಳವಳಿ, ದೌರ್ಜನ್ಯಗಳ ವಿರುದ್ಧ ಧ್ವನಿ ಎತ್ತುವುದು ದೊಡ್ಡದಲ್ಲ, ಶಾಲಾ ಹಂತದಲ್ಲಿಯೇ ಜಾತಿಯತೆ ಹಾಗೂ ಶೋಷಣೆಗಳ ವಿರುದ್ಧ ತಿರುಗಿ ಬಿದ್ದು ಹೋರಾಟ ಮಾಡಿದೆ ಎದೆಗಾರಿಕೆ ಬಾಬು ಜಗಜೀವನ ರಾಮರಿಗಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಎನ್.ಕೆ. ವೆಂಕಟೇಶ್ ತಿಳಿಸಿದರು.
ಅವರು ಪಟ್ಟಣದ ಸಮಾಜ ಕಲ್ಯಾಣ ಇಲಾಖೆಯಲ್ಲಿ ತಾಲೂಕು ಆಡಳಿತ ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ 116ನೇ ಜನುಮದಿನದ ಸಂದರ್ಭದಲ್ಲಿ ಪುಷ್ಪನಮನ ಸಲ್ಲಿಸಿ ಮಾತನಡಿದರು. ಅವರು ಮುಂದುವರೆದು ರಕ್ಷಣಾ ಸಚಿವರಾಗಿ, ಗುರುತರವಾದ ಸೇವೆ ಸಲ್ಲಿಸಿದ್ದಾರೆ, ಅವರ ಅಪಾರವಾದ ಕೊಡುಗೆಗಳನ್ನು ಪ್ರಸ್ತುತ ದಿನಮಾನದಲ್ಲಿ ಕಾಣುತ್ತೇವೆ, ರೈತ ಹಾಗೂ ಯೋಧರಿಗೆ ಮಾರ್ಗದರ್ಶನ ಮಾಡಿದ ಕಿರ್ತಿ ಇವರದಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಅಧಿಕಾರಿ ಮಲ್ಲಪ್ಪ, ವೆಂಕೋಜಿರಾವ್, ಶಿವರಾಜ್, ತಿಪ್ಪಮ್ಮ, ಹನುಮಂತಪ್ಪ, ಸುಹಾಸ್ ಇತರರು ಉಪಸ್ಥಿತರಿದ್ದರು.
One attachment • Scanned by Gmail