ಹಸಿರು ಕ್ರಾಂತಿಯ ಹರಿಕಾರನಿಗೆ ನಮನ

ಕಲಬುರಗಿ,ಏ.5-ನಗರದ ಟೌನಹಾಲ್ ಬಳಿ ಇರುವ ಹಸಿರು ಕ್ರಾಂತಿಯ ಹರಿಕಾರ, ರಾಷ್ಟ್ರ ನಾಯಕ ಹಾಗೂ ಭಾರತದ ಮಾಜಿ ಉಪಪ್ರಧಾನಿಮಂತ್ರಿಗಳಾದ ಡಾ.ಬಾಬು ಜಗಜೀವನ ರಾಂ ರವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪ್ರತಿಮೆಗೆ ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಮಾಲಾರ್ಪಣೆ ಮಾಡಿದರು.
ಇದೇ ವೇಳೆ ಅವರು ಹೊಸ ವರ್ಷದ ಬಾಬು ಜಗಜೀವನರಾಂ ರವರ ಕ್ಯಾಲೆಂಡರ್ ಬಿಡುಗಡೆಗೊಳಿಸಿದ್ದರು ಹಾಗೂ ಎಲ್ಲ ಸಮಾಜದ ಮುಖಂಡರಿಗೆ ಶುಭಾಶಯ ಕೋರಿದರು. ನಗರ ಪೆÇಲೀಸ ಆಯುಕ್ತ ಚೇತನ್ ಆರ್. ಜಿಲ್ಲಾ ಪೆÇೀಲಿಸ್ ವರಿಷ್ಠಾಧಿಕಾರಿ ಅಕ್ಷಯ್ ಹಾಕೆ, ಜಿಲ್ಲಾ ಪಂಚಾಯತ್ ಸಿ.ಇ.ಓ. ಭಂವರಸಿಂಗ್ ಮೀನಾ, ಮಹಾನಗರ ಪಾಲಿಕೆಯ ಆಯುಕ್ತರಾದ ಭುವನೇಶ್ ದೇವಿದಾಸ ಪಾಟೀಲ, ಉಪ ಆಯುಕ್ತರಾದ ಮಾಧವ ಗಿತ್ತೆ, ಕಲಬುರಗಿ ಸಹಾಯಕ ಆಯುಕ್ತೆ ರೂಪಿಂದ್ರ ಸಿಂಗ್ ಕೌರ್, ಸಮಾಜ ಕಲ್ಯಾಣ ಇಲಾಖೆ (ಪ್ರ) ಅಧಿಕಾರಿ ಜಾವಿದ್ ಕರಂಗಿ, ಜಯಂತ್ಯೋತ್ಸವ ಸಮಿತಿ ಅಧ್ಯಕ್ಷರಾದ ರಮೇಶ ಹೆಚ್.ವಾಡೇಕರ್, ಮಹಾನಗರ ಪಾಲಿಕೆ ಮಾಜಿ ಮಹಾಪೌರರಾದ ಚಂದ್ರಿಕಾ ಪರಮೇಶ್ವರಿ, ಜಿಲ್ಲಾಮಟ್ಟದ ಅಧಿಕಾರಿಗಳು, ಎಸ್‍ಸಿ/ಎಸ್‍ಟಿ ಸರಕಾರಿ ಅರೆ ಸರಕಾರಿ ನೌಕರರ ಸಂಘದ ಅಧ್ಯಕ್ಷÀ ಸೋಮಶೇಖರ ಎಸ್ ಮದನಕರ್, ಸಮಾಜ ಮುಖಂಡರಾದ ರಾಜು ವಡೇಕರ್, ಮಾಪಣ್ಣ ಹದನೂರ, ಶ್ಯಾಮ ನಾಟಿಕರ್, ದಶರಥ ಕಲಗುರ್ತಿ, ದತ್ತು ಭಾಸಗಿ, ಬಂಡೇಶ, ವಿಠ್ಠಲ ಗೊಳಿ, ರಾಜು ಕಟ್ಟಿಮನಿ, ಮಂಜುನಾಥ ನಾಲವಾರಕರ್, ಸುನೀತ ಎಂ, ಕೊಲ್ಲುರು, ಭಾರತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.