ರಾಯಚೂರು,ಏ.೦೫-
ದಿನದಲಿತರ ನಾಯಕ, ದೇಶದ ಸ್ವಂತತ್ರ್ಯ ಹೋರಾಟದಲ್ಲಿ ಮಹತ್ವದ ಕಾರ್ಯಗಳನ್ನು ನಿಭಾಯಿಸಿದವರು,ದೇಶದಲ್ಲಿ ಪರಿಣಾಮಕಾರಿಯಾಗಿ ಹಸಿರು ಕ್ರಾಂತಿಯನ್ನು ಹರಡಿದ ಮಹಾನ್ ವ್ಯಕ್ತಿ ಇವರು ಎಂದು ಡಾ.ಬಾಬು ಜಗಜೀವನ್ ರಾಮ್ ಜಯಂತೋತ್ಸವ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾ ಮಹಾಪ್ರಧಾನ ಕಾರ್ಯದರ್ಶಿ ರಾಮಕ್ರಿಷ್ಣ ಅವರು ತಿಳಿಸಿದರು.
ಭಾರತ ದೇಶ ಕಂಡ ಅಪ್ರತಿಮ ನಾಯಕ ಮಾಜಿ ಉಪ ಪ್ರಧಾನಿ, ಹಸಿರು ಕ್ರಾಂತಿಯ ಹರಿಕಾರರಾದ ಡಾ.ಬಾಬು ಜಗಜೀವನ್ ರಾಮ್ ರವರ ೧೧೬ ನೇ ಜಯಂತೋತ್ಸವದ ಅಂಗವಾಗಿ ಪುತ್ದಳಿಗೆ ಜಿಲ್ಲಾ ಜೆಡಿಎಸ್ ಮುಖಂಡರು ಮಾಲಾರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ರಾಜ್ಯ ಉಪಾಧ್ಯಕ್ಷರಾದ ಮಹಾಂತೇಶ್ ಪಾಟೀಲ್ ಅತ್ತನೂರು ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿಗಳಾದ ರಾಮಕ್ರಿಷ್ಣ, ಅಮ್ಜದ್ ಹುಸೇನ್ ಈರಣ್ಣ ಯಾದವ್ ಆಂಜನೇಯ ಯಾದವ್ ಮಲ್ಲಿಕಾರ್ಜುನ್. ರವಿ ಯಾದವ್ ,ವೆಂಕಟೇಶ್ ಆರೋಲಿ ವೆಂಕಟಸ್ವಾಮಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು