ಹಸಿರು ಕ್ರಾಂತಿಗೆ ಮುಂದಾಗಿ: ಡಾ. ಶರಣಯ್ಯ ಸ್ವಾಮಿ

ಬೀದರ್: ಜು.3:ಕಲ್ಯಾಣ ಕರ್ನಾಟಕದ ಜನ ಹೆಚ್ಚು ಹೆಚ್ಚು ಸಸಿಗಳನ್ನು ನೆಟ್ಟು ಹಸಿರು ಕ್ರಾಂತಿಗೆ ಮುಂದಾಗಬೇಕು ಎಂದು ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ. ಶರಣಯ್ಯ ಸ್ವಾಮಿ ಹೇಳಿದರು.

ನಗರದ ನೌಬಾದ್‍ನ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಯೋಜಿಸಿದ್ದ ವನ ವಹೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಅರಣ್ಯ ಬೆಳೆಸುವುದರಿಂದ ಪರಿಸರ ಸಂರಕ್ಷಿಸಬಹುದಾಗಿದೆ. ವಿಜ್ಞಾನಿಗಳ ಸಂಶೋಧನೆ ಪ್ರಕಾರ ಮರಗಳೂ ಮಾತನಾಡುತ್ತವೆ. ಸಂಗೀತ ಆಲಿಸುತ್ತವೆ. ಅವುಗಳಿಗೆ ಸ್ಪಂದನಾ ಶಕ್ತಿ ಕೂಡ ಇರುತ್ತದೆ. ಹೀಗಾಗಿ ಅವುಗಳನ್ನು ಶಿಶುಗಳಂತೆ ಬೆಳೆಸಬೇಕು ಎಂದು ತಿಳಿಸಿದರು.

ತಾಲ್ಲೂಕು ಆರೋಗ್ಯ ಅಧಿಕಾರಿ ಡಾ. ಸಂಗಾರೆಡ್ಡಿ ಮಾತನಾಡಿ, ಸಸಿಗಳನ್ನು ನೆಟ್ಟ ಮಾತ್ರ ನಮ್ಮ ಕೆಲಸ ಮುಗಿಯುವುದಿಲ್ಲ. ಅವುಗಳ ಪೋಷಣೆಯನ್ನೂ ಮಾಡಬೇಕು. ಪ್ರತಿ ನೌಕರರು ತಲಾ ಎರಡು ಸಸಿಗಳನ್ನು ದತ್ತು ಪಡೆದು ಬೆಳೆಸಬೇಕು ಎಂದು ಹೇಳಿದರು.

ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ನೆಹಾ ಫಾತಿಮಾ ಅಧ್ಯಕ್ಷತೆ ವಹಿಸಿದ್ದರು. ಕೇಂದ್ರದ ಸುಧಾ, ರೈಚಲ್, ಮಮತಾರಾಣಿ, ಅನುಸೂಜಾ, ಕೋಮಲ್, ಭಾಗ್ಯ, ಪ್ರಮಿಳಾ, ದಿವ್ಯ, ಸೋನಮ್ಮ, ಮೀನಾಕ್ಷಿ, ಪುಟ್ಟರಾಜ, ನಾಗರಾಜ ಮೊದಲಾದವರು ಇದ್ದರು.

ವಿಕಿರಣ ಶಾಸ್ತ್ರ ಚಿತ್ರಣ ಅಧಿಕಾರಿ ಟಿ.ಎಂ. ಮಚ್ಚೆ ನಿರೂಪಿಸಿದರು.