ಹಸಿರು ಉಸಿರು ಸಸಿ ನೆಡುವ ಕಾರ್ಯಕ್ರಮ

ಮೈಸೂರು: ಸೆ.22:- ಕೇಂದ್ರದ ಮಾಜಿ ಸಚಿವರು ಪರಿಸರ ಪ್ರೇಮಿ ಹಸಿರು ಭಾನುವಾರ ರುವಾರಿ ದಿ. ಅನಂತಕುಮಾರ್ ರವರ 63ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಪರಿಸರ ಸ್ನೇಹಿ ಬಳಗದ ವತಿಯಿಂದ ದಸರಾ ವಸ್ತುಪ್ರದರ್ಶದ ಆವರಣದಲ್ಲಿ ಕರ್ನಾಟಕ ವಸ್ತಪ್ರದರ್ಶನ ಪ್ರಾಧಿಕಾರ ಅಧ್ಯಕ್ಷರಾದ ಮಿರ್ಲೆ ಶ್ರೀನಿವಾಸ ಗೌಡರು “ಹಸಿರು ಉಸಿರು” ಕಾರ್ಯಕ್ರಮಕ್ಕೆ ಸಸಿ ನೆಡುವ ಮೂಲಕ ಚಾಲನೆ ನೀಡಿದರು.
ದಸರಾ ವಸ್ತುಪ್ರದರ್ಶನದಲ್ಲಿ 60ಕ್ಕೂ ಹೆಚ್ಚು ವಿವಿಧ ಜಾತಿಯ ಗಿಡಗಳನ್ನು ನೆಡಲಾಯಿತು, ನಂತರ ಸಾರ್ವಜನಿಕರಿಗೆ ಸಿಹಿ ವಿತರಿಸಿ ಸಂಭ್ರಮಿಸಲಾಯಿತು. ಕಾರ್ಯಕ್ರಮಕ್ಕೆ ಚಾಲನೆ ನೀಡಿ ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಮಿರ್ಲೆ ಶ್ರೀನಿವಾಸ ಗೌಡರು ಮಾತನಾಡಿ ದೇಶದಲ್ಲಿ ಯುವಕರು ವಿದ್ಯಾವಂತರಾಗಬೇಕು ಮತ್ತು ಸಸಿಗಳು ಮರಗಳಾಗಿ ಬೆಳೆದು ನಿಂತರೇ ಮಾತ್ರ ಅಭಿವೃದ್ಧಿ ಕಾಣಲು ಸಾಧ್ಯ ಇದರ ಸಂದೇಶವನಿಟ್ಟುಕೊಂಡು ಯುವಕರ ತಂಡದೊಂದಿಗೆ ಸಸಿ ನೆಡುವ ಮೂಲಕ ಹಸಿರುಭಾನುವಾರ ಸ್ಥಾಪಿಸಿದವರು ಕೇಂದ್ರದ ಮಾಜಿ ಸಚಿವರಾದ ಅನಂತಕುಮಾರ್ ರವರು, ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಅಕ್ಷರ-ಅನ್ನ-ಆರೋಗ್ಯ ಪ್ರತಿಯೊಬ್ಬ ಮಗುವಿಗೂ ಅವಶ್ಯಕವಿದ್ದ ಸಂಧರ್ಭದಲ್ಲಿ ಅದಮ್ಯಚೇತನದ ಮೂಲಕ ಲಕ್ಷಾಂತರ ಮಕ್ಕಳಿಗೆ ಬಿಸಿಯೂಟದ ಅನ್ನದಾಸೋಹ, ಅಕ್ಷರಭ್ಯಾಸ ಕಲಿಕಾ ಕೇಂದ್ರಗಳು ಸ್ಥಾಪನೆ ಮತ್ತು ಹೃದ್ರೋಗ ಚಿಕಿತ್ಸೆಗಾಗಿ ಅತಿಕಡಿಮೆ ಬೆಲೆಯಲ್ಲಿ ವೈದ್ಯಕೀಯ ಸಲಕರಣೆಗಳನ್ನು ತಂದ ಕೀರ್ತಿ ಅನಂತಕುಮಾರ್ ರವರಿಗೆ ಸಲ್ಲುತ್ತದೆ, ರಸಗೊಬ್ಬರ ಸಚಿವರಾಗಿದ ಸಂಧರ್ಭದಲ್ಲಿ ರೈತರಿಗೆ ರಾಸಾಯನಿಕ ರಹಿತ ಬೇವು ಲೇಪಿತ ರಸಗೊಬ್ಬರ ವಿತರಣೆ ಯೋಜನೆ ದೇಶದಲ್ಲಿ ಜಾರಿಗೆ ತಂದರು. ದಸರಾ ವಸ್ತುಪ್ರದರ್ಶನದಲ್ಲಿ ಹಸಿರು ಲೋಕ ಸಸಿ ನೆಡುವ ಅಭಿಯಾನವನ್ನ ಮುಂದಿನ ದಿನದಲ್ಲಿ ಆಯೋಜಿಸಿ ಪರಿಸರ ಸಂರಕ್ಷಣೆ ಕಾಳಜಿಯಿಂದ ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ ಸಸಿಗಳನ್ನು ನೆಡಲಾಗುವುದು ಮತ್ತು ಪರಿಸರ ಜಾಗೃತಿ ಶಿಬಿರ ಹಮ್ಮಿಕೊಳ್ಳಲಾಗುವುದು ಎಂದರು.
ಕಳೆದ ಆರೇಳು ವರ್ಷಗಳಿಂದ ಹಸಿರುಭಾನುವಾರ ಯೋಜನೆ ಬೆಂಗಳೂರಿನಲ್ಲಿ ಸಹಸ್ರಾರು ಸ್ವಯಂಪ್ರೇರಿತರು ಲಕ್ಷಾಂತರ ಗಿಡಗಳನ್ನು ನೆಟ್ಟು ಹಸಿರು ಬೆಂಗಳೂರು ಮಾಡಲು ಶ್ರಮಿಸಿದ್ದಾರೆ, ಇತ್ತೀಚಿನ ದಿಗಳಲ್ಲಿ ನಾವು ಜೀವಿಸುವುದಕ್ಕೆ ಮೆನೆಕಟ್ಟಿಕೊಳ್ಳುತ್ತೇವೆ ಆದರೆ ಸಣ್ಣಪಕ್ಷಿ ಪ್ರಾಣಿಗಳ ಬದುಕು ಮರ ಗಿಡಗಳಲ್ಲೇ ಹಾಗಾಗಿ ಸಸಿಗಳನ್ನು ಬೆಳಸಬೇಕಾಗಿದೆ, ಮತ್ತು ಮೈಸೂರು ನಗರವನ್ನು ಹಸಿರು ವಲಯವನ್ನಾಗಿ ಕಾಪಾಡಿಕೊಳ್ಳಲು ಪ್ರತಿಯೊಬ್ಬರು ಗಿಡಗಳನ್ನು ನೆಟ್ಟು ಪೆÇೀಷಣೆ ರಕ್ಷಣೆ ಪರಿಸರ ಮನೋಭಾವ ಬೆಳಸಿಕೊಳ್ಳಬೇಕು, ಇಂದಿನ ದಿನಗಳಲ್ಲಿ ಮಾಲಿನ್ಯ ಮುಕ್ತ ಮತ್ತು ತಾಪಮಾನ ನಿಯಂತ್ರಣಕ್ಕಾಹಿ ಪರಿಶುದ್ಧ ಗಾಳಿ ನೆರಳು ಅವಶ್ಯಕ ಹಾಗಾಗಿ ನಮ್ಮ ಮನೆಗಳ ಮುಂದೆ ಸಸಿಗಳನ್ನು ನೆಡಬೇಕು ಮನೆಯ ಸುತ್ತಮುತ್ತ ಅಥವಾ ಮೇಲ್ಚಾವಣಿಯ ತಾರಸಿಯಲ್ಲಿ ಕುಂಡಗಳಲ್ಲಿ ಗಿಡಗಳನ್ನು ಇಟ್ಟರೆ ನಮ್ಮ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದರು
ನಂತರ ಮೈಸೂರು ನಗರ ಬಿಜೆಪಿ ಮಹಿಳಾ ಅಧ್ಯಕ್ಷರಾದ ಹೇಮಾ ನಂದೀಶ್ ರವರು ಮಾತನಾಡಿ ಅನಂತ್ ಕುಮಾರ್ ರವರು ಸ್ಥಾಪಿಸಿದ ಅದಮ್ಯ ಚೇತನ ಇಂದು ಅವರ ಧರ್ಮಪತ್ನಿ ತೇಜಸ್ವಿನಿ ಅನಂತಕುಮಾರ್ ರವರು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ, ವಿದ್ಯಾರ್ಥಿಗಳಿಗೆ ಪ್ರತಿನಿತ್ಯ ಅನ್ನದಾಸೋಹ, ಶಿಕ್ಷಣದ ಕಡೆ ಹಚ್ಚಾಗಿ ಒತ್ತು ನೀಡಿರುವುದು ಶ್ಲಾಘನೀಯವಾದುದು, ಕೆರೆ ಕಲ್ಯಾಣಿಗಳ ಜೀರ್ಣೋದ್ದಾರ, ಪ್ಲಾಸ್ಟಿಕ್ ಮುಕ್ತ ಭಾರತ ಮಾಡಬೇಕೆನ್ನುವ ಅದಮ್ಯಚೇತನದ ಸಂಕಲ್ಪ ಭಾರತದ ಭವಿಷ್ಯದ ದೃಷ್ಠಿಯಲ್ಲಿ ಯುವಪೀಳಿಗೆ ಕೈಜೋಡಿಸಬೇಕಿದೆ ಎಂದರು.