ಹಸಿರೀಕರಣಕ್ಕೆ ಒತ್ತು ನೀಡಲು ಸೂಚನೆ

ಹುಬ್ಬಳ್ಳಿ,ಎ.18: ಲೋಕೋಪಯೋಗಿ ಇಲಾಖೆಯ 1 ಕೋ.ರೂ. ಅನುದಾನದಲ್ಲಿ ಕೈಗೊಂಡಿರುವ ವಾರ್ಡ ನಂ. 57ರ ಕರ್ಕಿ ಬಸವೇಶ್ವರ ನಗರ ಹಾಗೂ 5 ಕೋ.ರೂ. ವೆಚ್ಚದಲ್ಲಿ ಕೈಗೊಂಡಿರುವ ವಾರ್ಡ ನಂ. 60ರ ಬಾಗಾರಪೇಟೆ, ಬಾಣತಿಕಟ್ಟಾ ಮುಖ್ಯರಸ್ತೆಯ ಕಾಂಕ್ರೀಟಿಕರಣ ಸೇರಿದಂತೆ ಒಟ್ಟು 6 ಕೋ.ರೂ. ವೆಚ್ಚದ ಸಿಸಿ ರಸ್ತೆ ಕಾಮಗಾರಿಯನ್ನು ಶಾಸಕ ಪ್ರಸಾದ ಅಬ್ಬಯ್ಯ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ನಗರದ ಸ್ವಚ್ಛತೆಯಲ್ಲಿ ಅಪಾರವಾಗಿ ಶ್ರಮಿಸುವ ಪೌರ ಕಾರ್ಮಿಕರ ಕಾಲನಿಗಳ ಸೌಂದರ್ಯಿಕರಣಕ್ಕೆ ವಿಶೇಷ ಒತ್ತು ನೀಡಲಾಗಿದೆ. ಅವಳಿ ನಗರದ ಸ್ವಚ್ಛತಾ ಕಾರ್ಯ ಕೈಗೊಂಡು ಮನೆಗೆ ಮರಳುವ ಪೌರ ಕಾರ್ಮಿಕರಿಗೆ ನೆಮ್ಮದಿಯ ಹಾಗೂ ಆಹ್ಲಾದಕರ ವಾತಾವರಣ ಮೂಡಿಸಲು ಕಾಲನಿಯ ಹಸಿರೀಕರಣಕ್ಕೆ ಆದ್ಯತೆ ನೀಡಿದ್ದು, ರಸ್ತೆ ಬದಿಯ ಪೇವರ್ಸ್‍ನಲ್ಲಿ ಗಿಡ ನೆಡಲು ಜಾಗ ಬಿಡುವಂತೆ ಗುತ್ತಿಗೆದಾರರಿಗೆ ಸೂಚಿಸಿದರು.
ಕರ್ಕಿ ಬಸವೇಶ್ವರ ನಗರದಲ್ಲಿ ಈಗಾಗಲೇ 1 ಕೋ.ರೂ. ವೆಚ್ಚದಲ್ಲಿ ಸಮುದಾಯ ಭವನ, 22 ಲಕ್ಷ ರೂ. ವೆಚ್ಚದಲ್ಲಿ ಮುಖ್ಯರಸ್ತೆ ಕಾಂಕ್ರೀಟಿಕರಣ ಕೈಗೊಂಡು ಆಕರ್ಷಕ ಬೀದಿದೀಪಗಳನ್ನು ಅಳವಡಿಸಲಾಗಿದೆ. ಇದೀಗ 1 ಕೋ.ರೂ. ವೆಚ್ಚದಲ್ಲಿ ಕಾಲನಿಯ ಒಳರಸ್ತೆಗಳ ಕಾಂಕ್ರೀಟಿಕರಣ ಕಾರ್ಯ ಆರಂಭವಾಗಿದ್ದು, ಕಾಲನಿಯ ಅಂದ ಮತ್ತಷ್ಟು ಹೆಚ್ಚಲಿದೆ ಎಂದ ಅವರು, ಬಾಗಾರಪೇಟೆ ಮುಖ್ಯರಸ್ತೆ ಕಾಂಕ್ರೀಟಿಕರಣದಿಂದ ಈ ಭಾಗದ ಜನರ ಬಹುಬೇಡಿಕೆಯೊಂದನ್ನು ಈಡೇರಿಸಿದಂತಾಗಿದೆ ಎಂದರು.
ಪಾಲಿಕೆ ಮಾಜಿ ಸದಸ್ಯರಾದ ಅಲ್ತಾಫ್ ನವಾಜ್ ಕಿತ್ತೂರು, ವಿಜನಗೌಡ ಪಾಟೀಲ, ವಾರ್ಡ ಅಧ್ಯಕ್ಷರಾದ ಮೈನುದ್ದಿನ್ ಮುಚಾಲೆ, ಸೈಯದ್ ಸಲೀಂ ಮುಲ್ಲಾ, ಮುಖಂಡರಾದ ಶ್ರೀನಿವಾಸ ಬೆಳದಡಿ, ಬಿ.ಬಿ. ಕೆಂಪಣ್ಣವರ, ನಿಂಗಪ್ಪ ಅಮರಾಪುರ, ರಾಮಪ್ಪ ಯಮನಾಳ, ಬಸಪ್ಪ ಕಟ್ಟಿಮನಿ, ಸಿದ್ದಪ್ಪ ಶಿರವಾರ, ನಾಗರಾಜ ಪಲಡಿ, ಫಕ್ಕಣ್ಣ ದೊಡ್ಡಮನಿ, ಗುರುಶಾಂತ ಚಂದಾಪುರ, ನಿಂಗಪ್ಪ ರಾಮಯ್ಯನವರ, ಮುಸ್ತಾಕ್ ಮುದುಗಲ್, ಅಲ್ತಾಫ್ ಮುಲ್ಲಾ, ಶಿವು ತಾಳಿಕೋಟಿ, ಶಂಕರ ಕದ್ರಾಪುರ, ರಾಜೇಶ ಯರಮಸಾಳ, ವಿಜಯ ಗಬ್ಬೂರು, ಮಧು ಖಾನಾಪುರ, ಮಂಜುನಾಥ ನಾಯ್ಕಲ್, ತುಳಸವ್ವ ನಾಗಸಮುದ್ರ, ಭೀಮವ್ವ ಹೆಬ್ಬಾಳ, ರಾಧವ್ವ ಗುಡಿಹಾಳ, ಸಿದ್ದಮ್ಮ ಪಗಲಾಪುರ, ಇತರರು ಇದ್ದರು.