ಹಸಿರಿರುವ ಕಡೆ ಉಸಿರು ನಟ ದೊಡ್ಡಣ್ಣ ವ್ಯಾಖ್ಯಾನ

ಬೆಂಗಳೂರು,ಏ.೨- ಎಲ್ಲಿ ಹಸಿರು ಸಿಗುತ್ತದೋ, ಅಲ್ಲಿ ಉಸಿರು ಇರುತ್ತದೆ ಎಂದುಬ ಹಿರಿಯ ದೊಡ್ಡಣ್ಣ ಹೇಳಿದ್ದಾರೆ.
ಹಸಿರು ಮನೆಯಲ್ಲಿ ಶುದ್ದ ತರಕಾರಿಗಳು ಸಿಗುತ್ತವೆ. ರೈತರ ಶ್ರಮಕ್ಕೆ, ನಿಖರವಾದ ಬೆಲೆ, ಪ್ರಾಮಾಣಿಕ ಸೇವೆ ಇಲ್ಲಿಯವರೆಗೂ ತಂದು ನಿಲಿಸಿದೆ ಎಂದು ಹೇಳಿದ್ದಾರೆ.
ನಗರದ ಮಲ್ಲತ್ತಹಳ್ಳಿ ಬಳಿ ಗ್ರೀನ್ ಹೌಸ್ ಗೆ ಚಾಲನೆ ನೀಡಿ ಮಾತನಾಡಿದ ಅವರು ರೈತರನ್ನು ಉಳಿಸಿ ಬೆಳೆಸುವ ಕೆಲಸ ಮಾಡಬೇಕು ಎಂದರು ನಿರ್ದೇಶಕ,ನಿರ್ಮಾಪಕ ಎಸ್.ನಾರಾಯಣ್ ಮಾತನಾಡಿ ರೈತ ದೇಶದ ಬೆನ್ನಲುಬು ಅಂತಾರೆ. ಅವುಗಳು ವಿಚಾರಗಳಲ್ಲಿ ಮಾತ್ರ ಇರುತ್ತದೆ. ಆಚಾರದಲ್ಲಿ ಇರೋಲ್ಲ. ಅನ್ನದಾತನಿಗೆ ಮಾತಿನ ಮೂಲಕ ಪ್ರೋತ್ಸಾಹ ಕೊಟ್ಟರೆ ಸಾಲದು. ನಾವುಗಳು ಚೌಕಾಸಿ ಮಾಡದೆ ತರಕಾರಿ, ಹಣ್ಣುಗಳನ್ನು ತೆಗೆದುಕೊಂಡರೆ ಮಾತ್ರ ಬೆಳೆಯುವವನಿಗೆ ಸಹಕಾರ ನೀಡಿದಂತೆ ಆಗುತ್ತದೆ ಎಂದರು.
ಗ್ರೀನ್ ಹೌಸ್ ಒಳ್ಳೆ ಕೆಲಸ ಮಾಡುತ್ತಿದೆ ರೈತ ಬೆಳೀತಾನೆ. ನಾವು ಸೇವಿಸುತ್ತೇವೆ. ರೈತನಿಗೂ ಅನುಕೂಲವಾಗುತ್ತದೆ ಎಂದರು.
ರೈತ ಸತೀಶ್, ನಟಿ ಮೇಘಶ್ರೀ, ಹಿರಿಯ ನಟ ಹೊನ್ನವಳ್ಳಿಕೃಷ್ಣ, ಕದ್ದುಮುಚ್ಚಿ ಚಿತ್ರದ ನಿರ್ಮಾಪಕ ಮಂಜುನಾಥ್ ಮುಂತಾದವರು ಹಾಜರಿದ್ದರು.