ಹಸಿರಾಗಿ ಉಳಿದ ವ್ಯಕ್ತಿ ದಿ.ವೆಂಕಟೇಶ ಪೂಜಾರಿ-ಅಭಿನವ ಶ್ರೀಗಳು

ಅರಕೇರಾ.ಮಾ.೧೫-ದಿವಂಗತ ವೆಂಕಟೇಶ ಪೂಜಾರಿಯವರು ಮಕ್ಕಳಿಗೆ ಶಿಕ್ಷಕರಾಗಿ, ರಾಜಕೀಯ ಮುಖಂಡರಿಗೆ ಮಾರ್ಗದರ್ಶಕರಾಗಿ, ಸಮಾಜಕ್ಕೆ ಉತ್ತಮ ಸೇವಕರಾಗಿ ಜನರ ಮನಗಳಲ್ಲಿ ಹಸಿರಾಗಿ ಉಳಿದಿದ್ದಾರೆ ಎಂದು ನವಲಕಲ್ ಬೃಹನ್ಮಠದ ಅಭಿನವ ಸೋಮನಾಥ ಶ್ರೀಗಳು ನುಡಿದರು.
ಅವರು ಅರಕೇರಾ ಗ್ರಾಮದಲ್ಲಿ ವಾಲ್ಮೀಕಿ ಭವನದಲ್ಲಿ ಆಯೋಜಿಸಲಾಗಿದ್ದ ಕ್ಯಾದಿಗ್ಗೇರಾ ಮಾಜಿ ಜಿಲ್ಲಾ ಪಂಚಾಯತ ಸದ್ಯಸ ದಿ.ವೆಂಕಟೇಶ ಪೂಜಾರಿಯವರ ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿದರು. ಸುತ್ತು ತಿರುಗುವ ಭೂಮಿಯಲ್ಲಿ ಹೊತ್ತು ತಂದಿಲ್ಲ ಏನು. ಇರುವಷ್ಟು ದಿನ ಒಳ್ಳೆಯ ಕೆಲಸ ಕಾರ್ಯಗಳನ್ನು ಮಾಡಿ ಸಮಾಜಕ್ಕೆ ತಮ್ಮದೇ ಆದ ಉತ್ತಮ ಕೊಡುಗೆಯನ್ನು ನೀಡಿದ ವ್ಯಕ್ತಿ ಪೂಜಾರಿಯವರು ಎಂದರು.
ಬಳಿಕ ಗೊಲ್ಲಪಲ್ಲಿಯ ವಾಲ್ಮೀಕಿ ಆಶ್ರಮದ ವರದಾನೇಶ್ವರ ಶ್ರೀಗಳು ಮಾತನಾಡಿ, ಪೂಜಾರಿಯವರು ಹಣ, ಅಂತಸ್ತು, ಶ್ರೀಮಂತಿಕೆಗೆ ಆಸೆಪಟ್ಟವರಲ್ಲ. ಸದಾ ಸಮಾಜಮುಖಿ ಹಾಗೂ ಬಡವರ ಏಳ್ಗೆಗಾಗಿ ಬದುಕಿದ ವ್ಯಕ್ತಿಯಾಗಿದ್ದರು. ಜೀವಿತ ಅವಧಿಯ ತನಕ ಪ್ರತಿಯೊಬ್ಬರ ಭಾವನೆಗಳಿಗೆ ಸ್ಪಂದಿಸುತ್ತಿದ್ದರು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಆರ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಎ.ರಾಜಶೇಖರ ನಾಯಕ, ಬಿಜೆಪಿ ಹಿರಿಯ ಮುಖಂಡ ಕೆ.ಅನಂತರಾಜ ನಾಯಕ ಹಾಗೂ ಮುಖಂಡರಾದ ಬಾಪುಗೌಡ ಚಿಕ್ಕಹೊನ್ನಕುಣಿ, ರಿಮ್ಸ್ ಆಡಳಿತ ಮಂಡಳಿ ನಿರ್ದೇಶಕ ಡಾ||ಎಚ್ ಎ.ನಾಡಗೌಡ ಜಾವಿಧ್ ಆರ್ ಚಿಂಚೋಳಿಕರ್ ಅನಿಸಿಕೆಯನ್ನ ಹಂಚಿಕೊಂಡರು. ಪ್ರಾಸ್ತವಿಕವಾಗಿ ಶಿವರಾಜಪೂಜಾರಿ ಮುಖ್ಯೋಪಾದಯ್ಯರು ಮಾತನಾಡಿದರು.
ಇದಕ್ಕೂ ಮೊದಲು ದಿವಂಗತ ವೆಂಕಟೇಶ ಪೂಜಾರಿಯವರ ಭಾವಚಿತ್ರವನ್ನು ಅವರ ನಿವಾಸದಿಂದ ವಾಲ್ಮೀಕಿ ಭವನದವರೆಗೆ ಮೆರವಣಿಗೆ ಮಾಡಲಾಯಿತು.ದೇವದುರ್ಗ ಶಾಸಕ ಕೆ,ಶಿವನಗೌಡನಾಯಕರವರು ತಮ್ಮ ಮಾವನ ಸಮಾದಿಗೆ ಸ್ಥಳಕ್ಕೆ ಆಗಮಿಸಿ ಪುಸ್ಪ ಅರ್ಪಿಸಿ ನಮನಸಲ್ಲಿಸಿದರು.
ಈ ವೇಳೆ, ಚನ್ನವೀರಯ್ಯ ಸ್ವಾಮಿ ಹಿರೇಮಠ, ತಿಮ್ಮಪ್ಪ ನಾಯಕ ಪೋ.ಪಾ, ರಾಚಯ್ಯಸ್ವಾಮಿಮಠಪತಿ,ಬಸವರಾಜಪೂಜಾರಿ.ಶರತಪೂಜಾರಿ, ಹಟ್ಟಿ ಜಿಪಂ ಸದಸ್ಯ ಅಮಜದ್, ಪತ್ರಕರ್ತ ಹಸನ್ ಅಂಜಳ, ಸೀತಣ್ಣ ನಾಯಕ ಗುರಿಕೇರಾ, ಶರಣಗೌಡ ಮಾ.ಪಾ ಬಿ.ಗಣೇಕಲ್, ಚಂದ್ರಶೇಖರ ಶೆಟ್ಟಿ, ಬಸವರಾಜ ನಾಯಕ ಕ್ವಾಟೆ ದೊರೆ, ಕೆಂಚಣ್ಣ ಪೂಜಾರಿ,ಸಿದ್ದಪ್ಪದೊಂಡಬಳ್ಳಿ ಎಪಿಎಂಸಿ ಉಪಾಧ್ಯಕ್ಷರು. ಚನ್ನಬಸವ ನಾಯಕ ವಕೀಲರು, ಹನುಮಗೌಡ ನಾಯಕ ಮರಕಲ್, ಬಾಲಪ್ಪ ನಾಯಕ, ಗಂಗಪ್ಪಯ್ಯ ಪೂಜಾರಿ ಮಾನಸಗಲ್, ಕೆಂಚಣ್ಣಪೂಜಾರಿ, ಶಾಂತಪ್ಪ ಸಾಹು ಬಿ.ಗಣೇಕಲ್, ರಾಚಣ್ಣ ಅಬಕಾರಿ ಬಿ.ಗಣೇಕಲ್, ಶರಣು ಪಾಟೀಲ್ ತಿಪ್ಪಲದಿನ್ನಿ, ಚನ್ನಪ್ಪ ಪೈಕಾರ ಸೇರಿದಂತೆ ಕುಟುಂಬಸ್ಥರು, ಪೂಜಾರಿ ಅಭಿಮಾನಿ ಬಳಗ ಹಾಗೂ ಸುತ್ತಲಿನ ಗ್ರಾಮಸ್ಥರು ಇನ್ನಿತರರಿದ್ದರು