ಹಸಿಮೆಣಸಿನ ಕಾಯಿ ಹೇಗೆ ತಿನ್ನಬೇಕು

ಅಡುಗೆ ಅಂದ ತಕ್ಷಣ ಮಸಾಲೆ ಪದಾರ್ಥಗಳ ಜೊತೆಗೆ ಕೆಂಪು ಮೆಣಸಿನಕಾಯಿ ಬಳಸುವುದು ಸಹಜವಾಗಿದೆ. ಕೆಂಪು ಮೆಣಸಿನಕಾಯಿ ಬಳಸಿ ಚಟ್ನಿ ಸಾಂಬಾರ್ ಮಾಡುತ್ತಾರೆ. ಹಾಗೇನೇ ಕೆಲವೊಮ್ಮೆ ಹಸಿ ಮೆಣಸಿನಕಾಯಿಯನ್ನು ಬಳಸಿ ಸಾಂಬಾರ್, ಚಟ್ನಿ ಮಾಡುತ್ತಾರೆ. ಹೆಚ್ಚಾಗಿ ಜನರಿಗೆ ಇದು ಇಷ್ಟ ಆಗುವುದಿಲ್ಲ ಇನ್ನು ಕೆಲವರು ಊಟ, ಚಪಾತಿ, ರೊಟ್ಟಿ ಜೊತೆಗೆ ಹಸಿ ಮೆಣಸಿನಕಾಯಿಯನ್ನು ಹಸಿಯಾಗಿ ತಿನ್ನುತ್ತಾರೆ.
ಹಸಿಮೆಣಸಿನಕಾಯಿಯಲ್ಲಿ ವಿಟಮಿನ್ ಸಿ, ವಿಟಮಿನ್ ಬಿ೬, ವಿಟಮಿನ್ ಎ, ಕಬ್ಬಿಣ, ಕಾಫರ್, ಮೆಗ್ನಿಸಿಯಂ, ಮಿಯಾಸಿನ ಫೈಬರ್ ಪೊಲೆಟ್ ನಂತಹ ಪೋಷಕಾಂಶಗಳು ಇರುತ್ತವೆ. ಇದನ್ನು ಸೇವನೆ ಮಾಡಿದರೆ ಆರೋಗ್ಯಕ್ಕೆ ಹಲವು ಲಾಭಗಳು ಸಿಗುತ್ತವೆ. ಹಸಿಮೆಣಸಿನ ಕಾಯಿಯಲ್ಲಿ ಇರುವ ವಿಟಮಿನ್ ಸಿ ರೋಗ ನಿರೋಧಕ ಶಕ್ತಿ ಹೆಚ್ಚಾಗುವುದಕ್ಕೆ ಸಹಕರಿಸುತ್ತದೆ. ಹಸಿಮೆಣಸಿನ ಕಾಯಿಯನ್ನು ಕಾಳುಗಳ ಜೊತೆಯಲ್ಲಿ ಬೆರಸಿ ತಿನ್ನುವುದರಿಂದ ಜೀರ್ಣಶಕ್ತಿ ಉತ್ತಮವಾಗುತ್ತದೆ. ಅಜೀರ್ಣ, ಗ್ಯಾಸ್, ಮಲಬದ್ಧತೆ ಅಂತಹ ಸಮಸ್ಯೆಗಳು ದೂರವಾಗುತ್ತವೆ. ಹಸಿಮೆಣಸಿನ ಕಾಯಿ ಬೀಜ ತೆಗೆಯದೆ ಸೇವನೆ ಮಾಡಿದರೆ ಆರೋಗ್ಯಕ್ಕೆ ತುಂಬಾ ಲಾಭಗಳು ಸಿಗುತ್ತವೆ. ಹಸಿಮೆಣಸಿನ ಕಾಯಿ ಬೀಜಗಳಲ್ಲಿ ಫೈಟೋಸ್ಟರಲ್ ಎಂಬ ಅಂಶ ಇರುತ್ತದೆ. ಇದು ರಕ್ತನಾಳಗಳಲ್ಲಿ ಇರುವ ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ. ಸಕ್ಕರೆ ಕಾಯಿಲೆ ಸಮಸ್ಯೆ ಇರುವವರು ಪ್ರತಿನಿತ್ಯ ನಿಮ್ಮ ಆಹಾರದಲ್ಲಿ ಹಸಿಮೆಣಸಿನ ಕಾಯಿಯನ್ನು ಸೇವನೆ ಮಾಡುವುದು ಉತ್ತಮ. ಇನ್ನು ಮೆಟಬಾಲಿಜಮ್ ಪ್ರಮಾಣವನ್ನು ಹೆಚ್ಚಿಸುತ್ತದೆ. ಇದರಿಂದ ಕ್ಯಾಲೊರಿಗಳು ಶೀಘ್ರ ಕಡಿಮೆಯಾಗುತ್ತದೆ.
ನಮ್ಮ ದೇಹದ ತೂಕವನ್ನು ಕಡಿಮೆ ಆಗುವಂತೆ ನೋಡಿಕೊಳ್ಳುತ್ತದೆ. ಹಸಿಮೆಣಸಿನ ಕಾಯಿಯಲ್ಲಿ ಆಂಟಿಬಯೋಟಿಕ್ ಗುಣಗಳು ಇರುತ್ತವೆ. ಹಾಗಾಗಿ ಇವು ಚರ್ಮದ ಸಮಸ್ಯೆಯನ್ನು ನಿವಾರಿಸುತ್ತವೆ. ಬೇಸಿಗೆ ಕಾಲದಲ್ಲಿ ಜನರು ಮಸಾಲೆ ಪದಾರ್ಥಗಳನ್ನು ಸೇವಿಸುವುದಕ್ಕೆ ಹಿಂಜರಿಯುತ್ತಾರೆ. ಆದರೆ ಮಸಾಲೆ ಪದಾರ್ಥಗಳನ್ನು ತಿನ್ನುವುದರಿಂದ ನಮ್ಮ ದೇಹದಲ್ಲಿ ಶಕೆ ಕಡಿಮೆ ಆಗುತ್ತದೆ ಎಂದರೆ ನಿಮಗೆ ಆಶ್ಚರ್ಯ ಎನಿಸಬಹುದು. ಅದರಲ್ಲೂ ಆಹಾರಗಳಲ್ಲಿ ಹಸಿ ಮೆಣಸಿನಕಾಯಿ ಇದ್ದರೆ ಕಾಯಿಲೆಗಳಿಂದ ನಮ್ಮನ್ನು ರಕ್ಷಿಸುತ್ತದೆ ಎಂದು ಕೆಲವೊಂದು ಸಂಶೋಧನೆಗಳಲ್ಲಿ ತಿಳಿದು ಬಂದಿದೆ. ಮೆಣಸಿನಕಾಯಿಯಲ್ಲಿ ಆಂಟಿಆಕ್ಸಿಡೆಂಟ್ ಜೊತೆಗೆ ಡಯಟ್ರಿ ಫೈಬರ್ ಅಂಶ ಇರುತ್ತದೆ. ಇದರಿಂದ ಜೀರ್ಣಕ್ರಿಯೆ ಉತ್ತಮವಾಗುತ್ತದೆ. ಮಿತವಾಗಿ ಹಸಿಮೆಣಸಿನ ಕಾಯಿಯನ್ನು ಬಳಸುವುದರಿಂದ ಗ್ಯಾಸ್ ತೊಂದರೆ, ಮಲಬದ್ಧತೆ ರೋಗದಿಂದ ದೂರವಿರಬಹುದು. ಹಸಿಮೆಣಸಿನ ಕಾಯಿಯಲ್ಲಿ ಆಂಟಿಬ್ಯಾಕ್ಟೀರಿಯ ಅಂಶ ಇರುತ್ತದೆ.
ಇದರ ಸೇವನೆಯಿಂದ ದೇಹದಲ್ಲಿ ಇರುವ ಕೆಟ್ಟ ಬ್ಯಾಕ್ಟೀರಿಯವನ್ನು ಹೊರಹಾಕುತ್ತದೆ. ಇದರಿಂದ ಯುಮಿನು ವ್ಯವಸ್ಥೆ ಶಕ್ತಿಯುತವಾಗುತ್ತವೆ ಮತ್ತು ಅಲರ್ಜಿ ಸೋಂಕಿನಿಂದ ಇದು ನಮ್ಮನ್ನು ರಕ್ಷಿಸುತ್ತದೆ. ಹಾಗೇನೇ ರಕ್ತದಲ್ಲಿ ಇರುವ ಸಕ್ಕರೆ ನಿಯಂತ್ರಣಕ್ಕೆ ಬರುತ್ತದೆ. ಹಸಿಮೆಣಸಿನ ಕಾಯಿ ಸೇವನೆಯಿಂದ ವಿಟಮಿನ್ ಎ ಹೆಚ್ಚಾಗುತ್ತದೆ. ಇದರಿಂದ ನಮ್ಮ ಕಣ್ಣಿನ ದೃಷ್ಟಿ ಹೆಚ್ಚಾಗುತ್ತದೆ. ಆದ್ದರಿಂದ ಹಸಿಮೆಣಸಿನ ಕಾಯಿ ಸೇವಿಸುವುದರಿಂದ ನಮ್ಮ ದೇಹಕ್ಕೆ ತುಂಬಾ ಲಾಭಗಳಿವೆ. ಅದರಲ್ಲೂ ಬೇಸಿಗೆ ಕಾಲದಲ್ಲಿ ಹಸಿಮೆಣಸಿನ ಕಾಯಿ ತಿನ್ನುವುದರಿಂದ ತಂಪನ್ನು ನೀಡುವುದರ ಜೊತೆಗೆ ನಮ್ಮ ದೇಹದ ಆರೋಗ್ಯವನ್ನು ಕಾಪಾಡುತ್ತದೆ.